IPL 2024: ಭಾವನಾತ್ಮಕ ವಿಡಿಯೋ ಮೂಲಕ ದಿನೇಶ್ ಕಾರ್ತಿಕ್ಗೆ ವಿದಾಯ ಹೇಳಿದ ಆರ್ಸಿಬಿ
Dinesh Karthik Retires: ರಾಜಸ್ಥಾನ್ ವಿರುದ್ಧ ಸೋತ ಬಳಿಕ ಆರ್ಸಿಬಿ ಆಟಗಾರರು ಮೈದಾನದಲ್ಲೇ ಕಾರ್ತಿಕ್ ಅವರಿಗೆ ಭಾವಪೂರ್ಣ ವಿದಾಯ ಹೇಳಿದ್ದರು. ಇದೀಗ ಆರ್ಸಿಬಿ ಫ್ರಾಂಚೈಸಿ ಕಾರ್ತಿಕ್ಗಾಗಿ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ಕಾರ್ತಿಕ್ ಪತ್ನಿ ದೀಪಿಕಾ ಪಳ್ಳಿಕಲ್, ದಿನೇಶ್ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ.
ಟೀಂ ಇಂಡಿಯಾದ ಮಾಜಿ ಹಾಗೂ ಆರ್‌ಸಿಬಿಯ (RCB) ಹಾಲಿ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik) ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ, ಇದು ಅವರ ಕೊನೆಯ ಐಪಿಎಲ್ ಸೀಸನ್ ಎಂದು ಕಾರ್ತಿಕ್ ಈಗಾಗಲೇ ಈ ಬಗ್ಗೆ ಹೇಳಿದ್ದರು. ಅದರಂತೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊನೆಯ ಬಾರಿಗೆ ಆರ್ಸಿಬಿ ಪರ (RCB vs RR) ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಮಿಲಿಯನ್ ಡಾಲರ್ ಟೂರ್ನಿಗೆ ವಿದಾಯ ಹೇಳಿದ್ದಾರೆ. ಕೊನೆಯ ಆವೃತ್ತಿಯಲ್ಲೂ ಅವಕಾಶ ಸಿಕ್ಕಾಗಲೆಲ್ಲಾ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದ ಕಾರ್ತಿಕ್, ತಂಡವನ್ನು ಎಲಿಮಿನೇಟರ್ವರೆಗೂ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರಾಜಸ್ಥಾನ್ ವಿರುದ್ಧ ಸೋತ ಬಳಿಕ ಆರ್ಸಿಬಿ ಆಟಗಾರರು ಮೈದಾನದಲ್ಲೇ ಕಾರ್ತಿಕ್ ಅವರಿಗೆ ಭಾವಪೂರ್ಣ ವಿದಾಯ ಹೇಳಿದ್ದರು. ಇದೀಗ ಆರ್ಸಿಬಿ ಫ್ರಾಂಚೈಸಿ ಕಾರ್ತಿಕ್ಗಾಗಿ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ಕಾರ್ತಿಕ್ ಪತ್ನಿ ದೀಪಿಕಾ ಪಳ್ಳಿಕಲ್, ದಿನೇಶ್ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ.
DK, We love you! ❤
Not often do you find a cricketer who’s loved by everyone around him. DK is one, because he was smart, humble, honest, and gentle! Celebrating @DineshKarthik‘s career with stories from his best friends and family! 🤗#PlayBold #ನಮ್ಮRCB #WeLoveYouDK pic.twitter.com/fW3bLGMQER
— Royal Challengers Bengaluru (@RCBTweets) May 24, 2024
ದಿನೇಶ್ ಪತ್ನಿ ದೀಪಿಕಾ ಭಾವುಕ
ಆರ್ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ದಿನೇಶ್ ಕಾರ್ತಿಕ್ ಬಗ್ಗೆ ವಿಶೇಷ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ದಿನೇಶ್ ಕಾರ್ತಿಕ್ ಅವರ ಪತ್ನಿ ದೀಪಿಕಾ ಪಳ್ಳಿಕಲ್ ಅವರು ಉತ್ತಮ ಪ್ರದರ್ಶನ ನೀಡದಿದ್ದಾಗ ಅವರನ್ನು ತಂಡದಿಂದ ಕೈಬಿಡುವುದನ್ನು ನಾನು ನೋಡಿದ್ದೇನೆ. ಕಾರ್ತಿಕ್ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಅವರು ಬೇಗನೇ ಸೊಲೊಪ್ಪಿಕೊಳ್ಳುತ್ತಿದ್ದರೇನೋ ಆದರೆ ಕಾರ್ತಿಕ್ ಮಾತ್ರ ಎಂದಿಗೂ ಛಲ ಬಿಡಲಿಲ್ಲ. ಪ್ರತಿ ಬಾರಿ ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಅವರು ಮತ್ತೊಮ್ಮೆ ಪುಟಿದೆದ್ದು, ತಮ್ಮನ್ನು ತಾವು ಸಾಬೀತುಪಡಿಸಿದರು. ಅವರು ಈ ಧೋರಣೆಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಇದು ಅವರ ಬಗ್ಗೆ ಹೆಮ್ಮೆ ಪಡಬೇಕಾದ ಸಂಗತಿ ಎಂದಿದ್ದಾರೆ.
IPL: ಸೊನ್ನೆ ಶೂರ ಮ್ಯಾಕ್ಸ್ವೆಲ್; ಬೇಡದ ದಾಖಲೆ ಬರೆದ ಆರ್ಸಿಬಿ ಬ್ಯಾಟರ್
ಒಡನಾಟ ಹಂಚಿಕೊಂಡ ವಿರಾಟ್ ಕೊಹ್ಲಿ
ಈ ವಿಡಿಯೋದಲ್ಲಿ ಕಾರ್ತಿಕ್ ಜೊತೆ ಕಳೆದ ಕ್ಷಣಗಳನ್ನು ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ. 2009 ರಲ್ಲಿ ನಾವು ದಕ್ಷಿಣ ಆಫ್ರಿಕಾದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡುತ್ತಿದ್ದಾಗ ನಾನು ಮೊದಲ ಬಾರಿಗೆ ದಿನೇಶ್ ಅವರನ್ನು ಭೇಟಿಯಾಗಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ. ಆ ಸಮಯದಲ್ಲಿ ನಾವು ಮೊದಲ ಬಾರಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಂಡಿದ್ದೇವು. ದಿನೇಶ್ ಅವರ ಬಗ್ಗೆ ನಾನು ಹೇಳ ಬಯಸುವುದೇನೆಂದರೆ, ಅವರು ಎಂದಿಗೂ ನಿಲ್ಲಲಿಲ್ಲ. ಅವರು ಮೊದಲಿನಿಂದಲೂ ಶ್ರೇಷ್ಠ ಬ್ಯಾಟ್ಸ್‌ಮನ್. ಮೈದಾನದ ಹೊರಗೂ ದಿನೇಶ್ ಜೊತೆ ಮಾತನಾಡುತ್ತೇನೆ ಮತ್ತು ಕ್ರಿಕೆಟ್ ಜೊತೆಗೆ ಹಲವು ವಿಷಯಗಳ ಬಗ್ಗೆ ಅವರಿಗೆ ಜ್ಞಾನವಿದೆ. ನನ್ನ ಐಪಿಎಲ್ 2022 ರ ಸೀಸನ್ ಸರಿಯಾಗಿ ನಡೆಯದಿದ್ದಾಗ, ನಾನು ದಿನೇಶ್ ಅವರೊಂದಿಗೆ ಮಾತನಾಡಿದೆ ಮತ್ತು ಅವರು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು, ಅದು ನನಗೆ ಇಂದಿಗೂ ನೆನಪಿದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Fri, 24 May 24