IPL 2024: ನೀತಾ ಅಂಬಾನಿ ಜೊತೆ ರೋಹಿತ್ ಶರ್ಮಾ ಸುದೀರ್ಘ ಮಾತುಕತೆ: ಆರ್ಸಿಬಿ ಸೇರುವುದು ಬಹುತೇಕ ಖಚಿತ?
Rohit Sharma and Nita Ambani ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋತ ನಂತರ ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಮಾತನಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಐಪಿಎಲ್ 2024 ರಿಂದ ಹೊರಬಿದ್ದ ಮೊದಲ ತಂಡವಾಯಿತು. 14 ಪಂದ್ಯಗಳ ನಂತರ ತಂಡವು ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ತನ್ನ ಕೊನೆಯ ಪಂದ್ಯದಲ್ಲಿ ಕೂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಟೂರ್ನಿ ಆರಂಭಕ್ಕೂ ಮುನ್ನ ಮುಂಬೈ ತಂಡವು ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಅವರನ್ನು ನಾಯಕನನ್ನಾಗಿ ಘೋಷಿಸಿತು. ಇಲ್ಲಿ ರೋಹಿತ್ ನಾಯಕತ್ವವನ್ನು ಬಿಟ್ಟುಕೊಟ್ಟಿರಲಿಲ್ಲ, ಬದಲಾಗಿ ಫ್ರಾಂಚೈಸ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹೊಸ ನಾಯಕ ಹಾರ್ದಿಕ್ ಎಂದು ಘೋಷಿಸಿತು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋತ ನಂತರ ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಮಾತನಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಂದ್ಯ ಮುಗಿದ ನಂತರ ಇಬ್ಬರೂ ವಾಂಖೆಡೆ ಸ್ಟೇಡಿಯಂನಲ್ಲಿಯೇ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅವರಿಬ್ಬರ ಮಾತಿನ ರೀತಿ ಹಾಗೂ ಮುಖಭಾವದಿಂದ ಗಂಭೀರ ಮಾತುಕತೆ ನಡೆಯುತ್ತಿರುವುದು ತಿಳಿಯುತ್ತಿದೆ.
ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಸಜ್ಜು: ಎಲಿಮಿನೇಟರ್ನಲ್ಲಿ ಆರ್ಸಿಬಿಗೆ ಈ ತಂಡ ಎದುರಾಳಿ
ನೀತಾ ಅಂಬಾನಿ ಮತ್ತು ರೋಹಿತ್ ನಡುವಿನ ಮಾತುಕತೆಯ ವಿಡಿಯೋ:
What’s the discussion between Nita Ambani and Rohit Sharma ? #RohitSharma #MumbaiIndians #IPL2024
— Raj Paladi (@IamRajPaladi) May 18, 2024
ಐಪಿಎಲ್ 2024 ಹರಾಜಿನ ಮೊದಲು, ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ನಿಂದ ಹೊರಬಂದು ಮುಂಬೈ ಇಂಡಿಯನ್ಸ್‌ಗೆ ಸೇರಿದರು. ಕೆಲವು ದಿನಗಳ ನಂತರ ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡುವುದಾಗಿ ಘೋಷಿಸಲಾಯಿತು. ಫ್ರಾಂಚೈಸಿಯ ಈ ನಿರ್ಧಾರದಿಂದ ರೋಹಿತ್ ಶರ್ಮಾ ತುಂಬಾ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಅವರ ಪತ್ನಿ ರಿತಿಕಾ ಕೂಡ ಹಲವು ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಿದ್ದರು. ಈ ನಿರ್ಧಾರದಿಂದ ರೋಹಿತ್ ಸಂತೋಷವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ರೋಹಿತ್ ಒಮ್ಮೆಯೂ ಈ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ.
ಆರ್ಸಿಬಿ ಪ್ಲೇ ಆಫ್ಗೇರಲು ಕಾರಣವಾಗಿದ್ದೇ ಧೋನಿ ಸಿಡಿಸಿದ ಆ 110 ಮೀ. ಸಿಕ್ಸ್: ಹೇಗೆ ಗೊತ್ತೇ?
ಐಪಿಎಲ್ 2025 ರ ಮೊದಲು ಮೆಗಾ ಹರಾಜು ನಡೆಯಲಿದೆ. ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳು ಇನ್ನೂ ಬಂದಿಲ್ಲ. ಆದರೆ ವರದಿಗಳ ಪ್ರಕಾರ, ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್‌ನಲ್ಲಿ ಉಳಿಯಲು ಇಷ್ಟವಿಲ್ಲವಂತೆ. ಹೀಗಾಗಿ ಅಭಿಮಾನಿಗಳು ರೋಹಿತ್ ಅವರು ಆರ್ಸಿಬಿ ಸೇರಲಿದ್ದಾರೆ ಎಂದು ಹೇಳುತ್ತಿದ್ದಾರೆ. ಐಪಿಎಲ್ ಆರಂಭವಾದ ಮೊದಲ 5 ಸೀಸನ್‌ಗಳಲ್ಲಿ ಮುಂಬೈಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಳಿಕ ರೋಹಿತ್ ನಾಯಕತ್ವದಲ್ಲಿ ತಂಡವು 5 ಬಾರಿ ಚಾಂಪಿಯನ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ