IPL 2024: ಪೂರನ್​ ಸಿಕ್ಸರ್​ಗೆ ಹೆದರಿ ಮೈದಾನ ತೊರೆದ ಅರ್ಜುನ್ ತೆಂಡೂಲ್ಕರ್

IPL 2024 MI vs LSG: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 67ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಲ್​ಎಸ್​ಜಿ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 196 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 18 ರನ್​ಗಳ ಜಯ ಸಾಧಿಸಿದೆ.

|

Updated on:May 18, 2024 | 12:11 PM

IPL 2024: ಐಪಿಎಲ್ 2024ರ 67ನೇ ಪಂದ್ಯದಲ್ಲಿ ಕಣಕ್ಕಿಳಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಇದೀಗ ಟ್ರೋಲ್​ಗೆ ಒಳಗಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅರ್ಧದಲ್ಲೇ ಮೈದಾನ ತೊರೆದಿರುವುದು.

1 / 6
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ 2 ಓವರ್​ಗಳಲ್ಲಿ ಕೇವಲ 10 ರನ್ ನೀಡಿದ್ದರು. ಹೀಗಾಗಿಯೇ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯದ 15ನೇ ಓವರ್​ ಅನ್ನು ಅರ್ಜುನ್​ಗೆ ನೀಡಿದ್ದರು.

2 / 6
ಅದರಂತೆ 15ನೇ ಓವರ್​ ಆರಂಭಿಸಿದ ಅರ್ಜುನ್ ತೆಂಡೂಲ್ಕರ್​ ಅವರ ಮೊದಲ ಎಸೆತದಲ್ಲಿ ನಿಕೋಲಸ್ ಪೂರನ್ ಭರ್ಜರಿ ಸಿಕ್ಸ್ ಸಿಡಿಸಿದರು. 2ನೇ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್​ನತ್ತ ಆಕರ್ಷಕ ಸಿಕ್ಸ್ ಬಾರಿಸಿದರು. ಇತ್ತ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಯುತ್ತಿದ್ದಂತೆ ಅರ್ಜುನ್ ತೆಂಡೂಲ್ಕರ್ ಮೈದಾನ ತೊರೆದರು.

3 / 6
ಮೊದಲೆರಡು ಎಸೆತಗಳನ್ನು ಸಂಪೂರ್ಣ ಫಿಟ್​ನೆಸ್​ನೊಂದಿಗೆ ಎಸೆದಿದ್ದ ಅರ್ಜುನ್ ತೆಂಡೂಲ್ಕರ್ 3ನೇ ಎಸೆತಕ್ಕೂ ಮುನ್ನ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಅಲ್ಲದೆ ಓವರ್​ ಅನ್ನು ಪೂರ್ಣಗೊಳಿಸದೇ ಪೆವಿಲಿಯನ್​ನತ್ತ ಮುಖ ಮಾಡಿದರು. ಆದರೆ ಡಗೌಟ್​ಗೆ ತಲುಪಿದ ಬಳಿಕ ಅರ್ಜುನ್ ತೆಂಡೂಲ್ಕರ್ ಫಿಸಿಯೋ ಕಡೆಯಿಂದ ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ ಎಂಬುದು ವಿಶೇಷ.

4 / 6
ಹೀಗಾಗಿಯೇ ನಿಕೋಲಸ್ ಪೂರನ್ ಅವರ ಅಬ್ಬರಕ್ಕೆ ಹೆದರಿ ಅರ್ಜುನ್ ತೆಂಡೂಲ್ಕರ್ ಮೈದಾನ ತೊರೆದಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಡಗೌಟ್​ಗೆ ತೆರಳಿ ಅರ್ಜುನ್ ವಿಶ್ರಾಂತಿ ಪಡೆದುಕೊಳ್ಳುತ್ತಿರುವುದು ಎಂದು ಅನೇಕರು ಕಿಚಾಯಿಸುತ್ತಿದ್ದಾರೆ.

5 / 6
ಇನ್ನು ಅರ್ಜುನ್ ತೆಂಡೂಲ್ಕರ್ ಅರ್ಧದಲ್ಲೇ ಮುಗಿಸಿದ ಓವರ್​ ಅನ್ನು ನಮನ್ ಧೀರ್ ಫೂರ್ಣಗೊಳಿಸಿದರು. ನಮನ್ ಎಸೆದ 4 ಎಸೆತಗಳಲ್ಲಿ ಪೂರನ್ ಸಿಕ್ಸ್, ಫೋರ್ ಬಾರಿಸಿದರೆ, ಕೊನೆಯ ಎಸೆತದಲ್ಲಿ ಕೆಎಲ್ ರಾಹು್ಲ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಮೂಲಕ 15ನೇ ಓವರ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟರ್​ಗಳು 29 ರನ್ ಕಲೆಹಾಕಿದರು.

6 / 6

Published On - 12:06 pm, Sat, 18 May 24

Follow us
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ

ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ

ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ

ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು

ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!

ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ

ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ

ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ

 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ

ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು