RCB vs CSK: ಆರ್​ಸಿಬಿ ಪ್ಲೇ ಆಫ್​ಗೇರಲು ಕಾರಣವಾಗಿದ್ದೇ ಧೋನಿ ಸಿಡಿಸಿದ ಆ 110 ಮೀ. ಸಿಕ್ಸ್: ಹೇಗೆ ಗೊತ್ತೇ?

MS Dhoni 110 meter Six Video: ಶನಿವಾರ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ 20ನೇ ಓವರ್​ನ ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ 110 ಮೀಟರ್​ನ ಅತಿ ದೊಡ್ಡ ಸಿಕ್ಸರ್ ಸಿಡಿಸಿದರು. ಆಗ ಸಿಎಸ್​ಕೆ ಪ್ಲೇ ಆಫ್ ಪ್ರವೇಶಿಸುತ್ತೆ ಎಂದೇ ನಂಬಲಾಗಿತ್ತು. ಆದರೆ, ಇದೇ ಸಿಕ್ಸ್ ಆರ್​ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಲು ಕಾರಣವಾಗಿದ್ದು ಎಂದರೆ ನಂಬಲೇಬೇಕು.

RCB vs CSK: ಆರ್​ಸಿಬಿ ಪ್ಲೇ ಆಫ್​ಗೇರಲು ಕಾರಣವಾಗಿದ್ದೇ ಧೋನಿ ಸಿಡಿಸಿದ ಆ 110 ಮೀ. ಸಿಕ್ಸ್: ಹೇಗೆ ಗೊತ್ತೇ?
Dhoni 110m Six vs RCB
Follow us
|

Updated on: May 19, 2024 | 9:56 AM

ಐಪಿಎಲ್ 2024ರ ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bengaluru) ಇದೀಗ ಯಾರೂ ಊಹಸದ ರೀತಿಯಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪಿದೆ. ಆರ್‌ಸಿಬಿ 27 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇಆಫ್‌ನಲ್ಲಿ ಸ್ಥಾನ ಪಡೆದುಕೊಂಡಿತು. ಡುಪ್ಲೆಸಿಸ್ ತಂಡಕ್ಕೆ ಇದು ಸತತ ಆರನೇ ಗೆಲುವು. ಈ ಬಾರಿ ಎಂಎಸ್ ಧೋನಿ ಕೂಡ ಬೆಂಗಳೂರಿನ ಈ ಗೆಲುವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಅಚ್ಚರಿ ಎಂದರೆ, ಒಂದು ಲೆಕ್ಕದಲ್ಲಿ ಆರ್​ಸಿಬಿ ತಂಡ ಪ್ಲೇ ಆಫ್​ಗೇರಲು ಕಾರಣವಾಗಿದ್ದೇ ಮಹೇಂದ್ರ ಸಿಂಗ್ ಧೋನಿ ಎಂದರೆ ನೀವು ನಂಬಲೇಬೇಕು. ಅದು ಹೇಗೆ ಎಂದು ಹೇಳುತ್ತೇವೆ ನೋಡಿ.

ಪ್ಲೇ ಆಫ್ ತಲುಪಲು ಬೆಂಗಳೂರು ಈ ಪಂದ್ಯದಲ್ಲಿ ಕನಿಷ್ಠ 18 ರನ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಬೇಕಿತ್ತು. ಮೊದಲು ಬ್ಯಾಟ್ ಆರ್​ಸಿಬಿ 218 ರನ್ ಗಳಿಸಿದರು. ಚೆನ್ನೈ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡರು ಅಂತಿಮ ಹಂತದಲ್ಲಿ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಜೊತೆಯಾಟವನ್ನು ನಿರ್ಮಿಸಿ ತಂಡವನ್ನು ಪ್ಲೇ ಆಫ್​ಗೇರಿಸಲು ಹತ್ತಿರಕ್ಕೆ ತಂದರು. ಕೊನೆಯ ಓವರ್‌ನಲ್ಲಿ ಚೆನ್ನೈ 17 ರನ್ ಗಳಿಸಿದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಹೊಂದಿತ್ತು. ಈ ಓವರ್‌ನ ಮೊದಲ ಎಸೆತವೇ ಚೆನ್ನೈ ಪರ ಆಯಿತು.

ಮಧ್ಯರಾತ್ರಿ 1:30; ಆರ್​ಸಿಬಿ ಆಟಗಾರರ ಬಸ್ ತೆರಳುವವರೆಗೆ ಸ್ಟೇಡಿಯಂ ಬಿಟ್ಟು ಕದಲದ ಫ್ಯಾನ್ಸ್

ಧೋನಿ 20ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದರು. ಇತ್ತ ಆರ್​ಸಿಬಿ ಪರ ಅನನುಭವಿ ಎಡಗೈ ವೇಗದ ಬೌಲರ್ ಯಶ್ ದಯಾಲ್ ಇದ್ದರು. ಧೋನಿ ದಯಾಳ್ ಅವರ ಮೊದಲ ಎಸೆತವನ್ನು ಲಾಂಗ್ ಲೆಗ್ ಬೌಂಡರಿಯಿಂದ 6 ರನ್‌ಗಳಿಗೆ ಕಳುಹಿಸಿದರು. ಅದು ಬೌಂಡರಿಯಿಂದ ಹೊರಗೆ ಹೋಗಿದ್ದಲ್ಲದೆ, ಸ್ಟೇಡಿಯಂ ಛಾವಣಿಯನ್ನೂ ದಾಟಿ ಕ್ರೀಡಾಂಗಣದ ಹೊರಗೆ ತಲುಪಿತು. ಇದು 110 ಮೀಟರ್ ಉದ್ದದ ಸಿಕ್ಸರ್ ಆಗಿದ್ದು, ಈ ಋತುವಿನಲ್ಲಿ ದಾಖಲೆಯಾಗಿದೆ. ಹೀಗಾಗಿ 5 ಎಸೆತಗಳಲ್ಲಿ ಕೇವಲ 11 ರನ್‌ಗಳ ಅಗತ್ಯವಿದ್ದ ಕಾರಣ ಇದು ಸಿಎಸ್‌ಕೆಗೆ ಭರವಸೆ ಮೂಡಿಸಿತು. ಕಳೆದ ವರ್ಷ ಇದೇ ರೀತಿಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಯಶ್ ದಯಾಳ್ ಮೇಲೆ ಸತತ 5 ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಧೋನಿ ಸಿಡಿಸಿದ 110 ಮೀಟರ್ ಸಿಕ್ಸರ್ ವಿಡಿಯೋ:

ಹೀಗಿರುವಾಗ ಯಶ್ ದಯಾಳ್ ಯಾವರೀತಿ ಬೌಲಿಂಗ್ ಮಾಡುತ್ತಾರೆ?, ಅದೇ ಘಟನೆ ಮರುಕಳಿಸುತ್ತಾ ಎಂಬ ಭಯ ಆರ್​ಸಿಬಿಯಲ್ಲಿತ್ತು. ಆದರೆ ಇಲ್ಲಿ ಧೋನಿಯ ಈ ಸಿಕ್ಸರ್ ಆರ್​ಸಿಬಿ ಜಯಕ್ಕೆ ನೆರವಾಯಿತು. ಇದು ಹೇಗೆ ಎಂದರೆ, ಧೋನಿ ಹೊಡೆತದಿಂದ ಚೆಂಡು ಸ್ಟೇಡಿಯಂನಿಂದ ಹೊರಬಿತ್ತು. ಹೀಗಾಗಿ, ಅಂಪೈರ್‌ಗಳು ಎರಡನೇ ಎಸೆತಕ್ಕೆ ನೂತನ ಚೆಂಡಿನ ಮೊರೆಹೋದರು. ಇದು ದಯಾಳ್‌ಗೆ ಅನುಕೂಲಕರವಾಯಿತು. ಯಾಕೆಂದರೆ ಹಿಂದಿನ ಚೆಂಡು ಅದಾಗಲೇ ಸಾಕಷ್ಟು ಒದ್ದೆಯಾಗಿತ್ತು, ಬೌಲಿಂಗ್‌ ಮಾಡಲು ತುಂಬಾ ಕಷ್ಟಕರವಾಗುತ್ತಿತ್ತು. ಇದನ್ನು ಬದಲಾಯಿಸುವಂತೆ ಆರ್​ಸಿಬಿ ನಾಯಕ ಹಲವು ಬಾರಿ ಅಂಪೈರ್ ಬಳಿ ಮನವಿ ಮಾಡಿದ್ದರೂ ತಿರಸ್ಕರಿಸುತ್ತಿದ್ದರು. ಈಗ ಬದಲಾದ ಚೆಂಡು ಸಂಪೂರ್ಣ ಒಣಗಿದ್ದು, ಸ್ಲೋ ಬಾಲ್ ಮತ್ತು ಯಾರ್ಕರ್ ಅನ್ನು ನಿಖರವಾಗಿ ಬಳಸಿ ದಯಾಳ್ ಇದರ ಲಾಭ ಪಡೆದರು.

ಆರ್​ಸಿಬಿ ಗೆದ್ದ ತಕ್ಷಣ ಮೈದಾನದಲ್ಲೇ ಕಣ್ಣೀರಿಟ್ಟ ಕೊಹ್ಲಿ: ಅನುಷ್ಕಾ ಕಣ್ಣಲ್ಲೂ ಬಂತು ನೀರು

ಸಿಕ್ಸರ್ ನಂತರ, ದಯಾಳ್ ಮುಂದಿನ ಚೆಂಡನ್ನು ನಿಧಾನವಾಗಿ ಎಸೆತದರು, ಧೋನಿ ಹೊಡೆತವು ನೇರವಾಗಿ ಫೀಲ್ಡರ್ ಕೈಗೆ ಹೋಯಿತು. ಉಳಿದ 4 ಎಸೆತಗಳಲ್ಲಿ ದಯಾಳ್ ಅದೇ ಬೌಲಿಂಗ್ ಮಾಡಿದರು ಮತ್ತು ಕೇವಲ 1 ರನ್ ನೀಡುವ ಮೂಲಕ ಆರ್​ಸಿಬಿ ಪಂದ್ಯವನ್ನು ಗೆದ್ದುಕೊಂಡಿದ್ದು ಮಾತ್ರವಲ್ಲದೆ, ಪ್ಲೇ ಆಫ್‌ಗೆ ತಲುಪಿತು.ಮತ್ತಷ್ಟು

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ