MS Dhoni
ತನ್ನ ಚಾಣಾಕ್ಷ ನಾಯಕತ್ವದಿಂದ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಶ್ರೇಯ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಗೆ ಸಲ್ಲುತ್ತದೆ. ಎಂ.ಎಸ್.ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ದೇಶ ಮತ್ತು ವಿದೇಶಗಳಲ್ಲಿ ಅನೇಕ ಸರಣಿಗಳನ್ನು ಗೆದ್ದಿದೆ. ಧೋನಿ ಎಲ್ಲಾ ಸ್ವರೂಪಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಸಹ ಹೊಂದಿದ್ದಾರೆ. ಅಷ್ಟೇ ಅಲ್ಲ .. ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ. ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ (2011), ಟಿ 20 ವಿಶ್ವಕಪ್ (2007) ಮತ್ತು ಚಾಂಪಿಯನ್ಸ್ ಟ್ರೋಫಿ (2013) ಗೆದ್ದಿದೆ. ಧೋನಿ 332 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 178 ಪಂದ್ಯಗಳನ್ನು ಗೆದ್ದು 120 ಪಂದ್ಯಗಳಲ್ಲಿ ಸೋತಿದೆ. 15 ಪಂದ್ಯ ಡ್ರಾ ಆಗಿವೆ. ಅವುಗಳಲ್ಲಿ 6 ಟೈನೊಂದಿಗೆ ಕೊನೆಗೊಂಡಿವೆ. 200 ಏಕದಿನ ಪಂದ್ಯಗಳಲ್ಲಿ 110 ಗೆಲ್ಲುವ ಮೂಲಕ ಧೋನಿ ಹೆಚ್ಚಿನ ಗೆಲುವು ದಾಖಲಿಸಿದ್ದಾರೆ. ಹಾಗೆಯೇ ಐಪಿಎಲ್‌ನಲ್ಲೂ ಸರ್ವಶ್ರೇಷ್ಠ ಪ್ರದರ್ಶನ ನೀಡಿರುವ ಧೋನಿ, ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದು, ತಂಡ ಐದು ಬಾರಿ ಐಪಿಎಲ್ ಗೆದ್ದಿದೆ.