RCB vs CSK: ಮಧ್ಯರಾತ್ರಿ 1:30; ಆರ್​ಸಿಬಿ ಆಟಗಾರರ ಬಸ್ ತೆರಳುವವರೆಗೆ ಸ್ಟೇಡಿಯಂ ಬಿಟ್ಟು ಕದಲದ ಫ್ಯಾನ್ಸ್

RCB Fans Chinnaswamy Stadium: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್​ಕೆ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಖುಷಿಯನ್ನು ಅಭಿಮಾನಿಗಳು ಬೆಂಗಳೂರಿನ ಬೀದಿ-ಬೀದಿಗಳಲ್ಲಿ ಸಂಭ್ರಮಿಸಿದರು. ಮಧ್ಯರಾತ್ರಿ 1:30 ವರೆಗೆ ಆರ್​ಸಿಬಿ ಹೊರಡುವ ತನಕ ಫ್ಯಾನ್ಸ್ ಚಿನ್ನಸ್ವಾಮಿಯಲ್ಲಿ ಕಾದುಕುಳಿತಿದ್ದರು.

RCB vs CSK: ಮಧ್ಯರಾತ್ರಿ 1:30; ಆರ್​ಸಿಬಿ ಆಟಗಾರರ ಬಸ್ ತೆರಳುವವರೆಗೆ ಸ್ಟೇಡಿಯಂ ಬಿಟ್ಟು ಕದಲದ ಫ್ಯಾನ್ಸ್
RCB Fans
Follow us
|

Updated on: May 19, 2024 | 9:08 AM

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಲೀಗ್‌ ಹಂತದಲ್ಲಿ ತಂಡವೊಂದು ಆಡಿದ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತು ಪ್ಲೇಆಫ್‌ನಲ್ಲಿ ಸ್ಥಾನ ಕಾಯ್ದುಕೊಂಡಿರುವ ಘಟನೆ ಇದುವರೆಗೆ ನಡೆದಿಲ್ಲ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ತಂಡವನ್ನು ಸೋಲಿಸಿ ಇತಿಹಾಸವನ್ನು ಸೃಷ್ಟಿಸಿ ಪ್ಲೇ ಆಫ್​ಗೆ ಪ್ರವೇಶ ಪಡೆಯಿತು. ಆರ್​ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಬೆಂಗಳೂರಿನ ಬೀದಿ-ಬೀದಿಗಳಲ್ಲಿ ಅಭಿಮಾನಿಗಳು ಈ ವಿಜಯದ ಅರ್ಥವನ್ನು ಎತ್ತಿ ತೋರಿಸಿದರು. ಮಧ್ಯರಾತ್ರಿ ಆರ್​ಸಿಬಿ ಫ್ಯಾನ್ಸ್ ಬೆಂಗಳೂರು ನಗರದ ಬೀದಿಗಿಳಿದರು. ಉತ್ಸಾಹದಿಂದ ಸಂಭ್ರಮಿಸಿದರು.

ಅದರಲ್ಲೂ ಚಿನ್ನಸ್ವಾಮಿ ಸ್ಟೇಡಿಯಂನಿಂದ ಹೊರಟ ತಂಡದ ಬಸ್‌ನ ಹಿಂದೆ ಹಲವು ಕಿಲೋಮೀಟರ್‌ಗಳವರೆಗೆ ಅಭಿಮಾನಿಗಳ ಗುಂಪು ಇತ್ತು. ಜನರು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡಲು ಮಧ್ಯರಾತ್ರಿ 1:30 ವರೆಗೆ ಕಾದುಕುಳಿತಿದ್ದರು. ಆರ್​ಸಿಬಿ ತನ್ನ ಎಕ್ಸ್ (ಹಿಂದೆ ಟ್ವಿಟ್ಟರ್) ಖಾತೆಯಲ್ಲಿ ಬಸ್​ನ ಒಳಗಡೆಯಿಂದ ಮಾಡಿದ ವಿಡಿಯೋವನ್ನು ಹಂಚಿಕೊಂಡಿದೆ. ಬೀದಿಯಲ್ಲಿ ನೂರಾರು ಜನರು ತಮ್ಮದೇ ಆದ ರೀತಿಯಲ್ಲಿ ವಿಜಯವನ್ನು ಆಚರಿಸುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ವಿವಿಧ ನಗರಗಳಲ್ಲಿ ಸಂಭ್ರಮಾಚರಣೆ ಜೋರಾಗಿತ್ತು.

ಆರ್​ಸಿಬಿ ಗೆದ್ದ ತಕ್ಷಣ ಮೈದಾನದಲ್ಲೇ ಕಣ್ಣೀರಿಟ್ಟ ಕೊಹ್ಲಿ: ಅನುಷ್ಕಾ ಕಣ್ಣಲ್ಲೂ ಬಂತು ನೀರು

ಆರ್​ಸಿಬಿ ಎಕ್ಸ್​ನಲ್ಲಿ ಹಂಚಿಕೊಂಡ ವಿಡಿಯೋ ಇಲ್ಲಿದೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಶನಿವಾರ ತಮ್ಮ ತವರು ನೆಲವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ತೋರಿ ಸಿಎಸ್​ಕೆ ಅನ್ನು 27 ರನ್‌ಗಳಿಂದ ಸೋಲಿಸಿ ನಾಕ್‌ಔಟ್ ಹಂತದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿತು. ಆರ್‌ಸಿಬಿ ಪ್ಲೇಆಫ್ ತಲುಪಲು ಕನಿಷ್ಠ 18 ರನ್‌ಗಳಿಂದ ಗೆಲ್ಲಬೇಕಾಗಿತ್ತು, ರೋಚಕ ಪಂದ್ಯದಲ್ಲಿ ಫಾಫ್ ಪಡೆ ಈ ಸಾಧನೆಯನ್ನು ಮಾಡಿದೆ.

ಪ್ಲೇ ಆಫ್​ಗೇರಿದ ಖುಷಿ: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ

ಪಂದ್ಯದ ಮೇಲೆ ಮಳೆಯ ಭೀತಿಯೂ ಇತ್ತು. ಮಳೆಯಿಂದ ಪಂದ್ಯ ರದ್ದಾಗಿ ಪಾಯಿಂಟ್‌ಗಳನ್ನು ಹಂಚಿದರೆ, ಸಿಎಸ್‌ಕೆ ಗೆಲ್ಲುತ್ತಿತ್ತು. ಆದರೆ ಅದೃಷ್ಟ ಮತ್ತು ಪ್ರದರ್ಶನ ಎರಡೂ ಆರ್‌ಸಿಬಿ ಪರವಾಗಿತ್ತು. ಮೊದಲು ಆಟವಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ಚೆನ್ನೈ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಐಪಿಎಲ್ ಇತಿಹಾಸದಲ್ಲಿ ಒಂಬತ್ತನೇ ಬಾರಿಗೆ ಆರ್‌ಸಿಬಿ ನಾಕೌಟ್ ಅಥವಾ ಮುಂದಿನ ಸುತ್ತಿಗೆ ತನ್ನ ಪ್ರಯಾಣವನ್ನು ಮಾಡಿದೆ. ಮೂರು ಬಾರಿ ಫೈನಲ್ ತಲುಪಿದ್ದು, ಈವರೆಗೆ ಚಾಂಪಿಯನ್ ಆಗಲಿಲ್ಲ.

ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಆರ್​ಸಿಬಿ ಮೇ 24 ರಂದು ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಅವರು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸೀಲ್ ಮಾಡಿರುವುದರಿಂದ, ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಬೇಕು. ಮೇ 19 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲ್ಲಲು ಯಶಸ್ವಿಯಾದರೆ, ಅವರು 18 ಅಂಕಗಳನ್ನು ತಲುಪಿ ಎರಡನೇ ಸ್ಥಾನವನ್ನು ಪಡೆಯುತ್ತಾರೆ. ಹೀಗಾದಲ್ಲಿ ಆರ್​ಸಿಬಿ ತಂಡ ಎಸ್​ಆರ್​ಹೆಚ್ ವಿರುದ್ಧ ತಮ್ಮ ಎಲಿಮಿನೇಟರ್ ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್