Viral Video: ಲುಂಗಿ ತೊಟ್ಟು ಲಂಡನ್ ಬೀದಿ ಸುತ್ತಿದ ಯುವತಿ; ಜನರ ಪ್ರತಿಕ್ರಿಯೆ ಹೇಗಿತ್ತು ನೋಡಿ
ಪುರುಷರಿಗಿಂತ ನಾನೇನೂ ಕಮ್ಮಿಯಿಲ್ಲ ಎನ್ನುವಂತೆ ಇಲ್ಲೊಬ್ಬಳು ಯುವತಿ ರಜನಿಕಾಂತ್ ಸ್ಟೈಲ್ ಅಲ್ಲಿ ಲುಂಗಿ ತೊಟ್ಟು ಲಂಡನ್ ಬೀದಿ ಸುತ್ತಿದ್ದಾಳೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಆಕೆಯ ಲುಂಗಿ ಅವತಾರಕ್ಕೆ ವಿದೇಶಿಗರ ರಿಯಾಕ್ಷನ್ ಹೇಗಿತ್ತು ಎಂಬುದನ್ನು ನೋಡಿ.
ಲುಂಗಿ ನಮ್ಮ ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದು. ಇಂದಿಗೂ ಗ್ರಾಮೀಣ ಭಾಗದಲ್ಲಿನ ಪುರುಷರು ಮನೆಗಳಲ್ಲಿ ಅಥವಾ ಊರಿನಲ್ಲಿ ಸುತ್ತಾಡುವಾಗ ಲುಂಗಿಯನ್ನೇ ಸುತ್ತಿಕೊಳ್ಳುತ್ತಾರೆ. ಈಗೀಗ ಸಿಟಿ ಹುಡುಗರು ಕೂಡಾ ಹಬ್ಬ ಹರಿದಿನಗಳಲ್ಲಿ, ಮದುವೆ ಕಾರ್ಯಕ್ರಮದಲ್ಲಿ ಅಥವಾ ದೇವಸ್ಥಾನಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಗೆ ತಕ್ಕಂತೆ ಶ್ವೇತ ವರ್ಣದ ರೇಷ್ಮೆ ಪಂಚೆಯನ್ನು ತೊಡುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಕೂಡಾ ಹುಡುಗರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ಲುಂಗಿ ತೊಟ್ಟು ಲಂಡನ್ ಬೀದಿ ಸುತ್ತಿದ್ದಾಳೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಕಂಟೆಂಟ್ ಕ್ರಿಯೆಟರ್ ವವೇರಿ ಎಂಬ ಯುವತಿ ಇಂಗ್ಲೇಂಡ್ ಜನರ ರಿಯಾಕ್ಷನ್ ಹೇಗಿರುತ್ತೇ ಎಂಬುದನ್ನು ನೋಡಲು ಲುಂಗಿ ತೊಟ್ಟು ಲಂಡನ್ ಬೀದಿಯಲ್ಲಿ ಸುತ್ತಾಡಿದ್ದಾಳೆ. ಈ ವಿಡಿಯೋವನ್ನು ಆಕೆ ತನ್ನ (@valerydaania) ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಚಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಲಂಡನ್ ಬೀದಿಗಳಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಲುಂಗಿ ತೊಟ್ಟು ಓಡಾಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ಉಡುಗೆಯನ್ನು ಕಂಡು ಫಾರಿನರ್ಸ್ ಇದ್ಯಾವ ಬಗೆಯ ಉಡುಗೆ ಎಂದು ಆಕೆಯ ಲುಂಗಿ ಫ್ಯಾಷನ್ ನೋಡಿ ಫುಲ್ ಕನ್ಫ್ಯೂಸ್ ಆಗಿದ್ದಾರೆ. ಮೇ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯುವತಿಯ ಈ ಹೊಸ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Sun, 26 May 24