MI vs RR: ಹಾರ್ದಿಕ್​ರನ್ನು ಗೇಲಿ ಮಾಡದಂತೆ ಫ್ಯಾನ್ಸ್ ಬಳಿ ಕೇಳಿಕೊಂಡ ರೋಹಿತ್ ಶರ್ಮಾ: ಇಲ್ಲಿದೆ ವಿಡಿಯೋ

Rohit Sharma-Hardik Pandya: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಫೀಲ್ಡಿಂಗ್ ಮಾಡುತ್ತಿರುವ ಸಂದರ್ಭ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಬೊಬ್ಬೆ ಹೊಡೆದು ಗೇಲಿ ಮಾಡುತ್ತಿದ್ದರು. ಆಗ ರೋಹಿತ್ ಬೊಬ್ಬೆ ಹೊಡೆಯವುದನ್ನು ನಿಲ್ಲಿಸುವಂತೆ ಅಭಿಮಾನಿಗಳ ಬಳಿ ಹೇಳಿದ್ದಾರೆ.

MI vs RR: ಹಾರ್ದಿಕ್​ರನ್ನು ಗೇಲಿ ಮಾಡದಂತೆ ಫ್ಯಾನ್ಸ್ ಬಳಿ ಕೇಳಿಕೊಂಡ ರೋಹಿತ್ ಶರ್ಮಾ: ಇಲ್ಲಿದೆ ವಿಡಿಯೋ
Rohit Sharma and Hardik Pandya
Follow us
Vinay Bhat
|

Updated on: Apr 02, 2024 | 7:58 AM

2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ಮುಂಬೈ ಇಂಡಿಯನ್ಸ್‌ನ ಕಳಪೆ ಪ್ರದರ್ಶನ ಮುಂದುವರೆದಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಅಭಿಮಾನಿಗಳ ಕೋಪ ಕೂಡ ತಣ್ಣಗಾಗಿಲ್ಲ. ಇದು ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಕಂಡುಬಂತು. ಹಾರ್ದಿಕ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪುನಃ ಕೆಟ್ಟ ಅನುಭವವನ್ನು ಪಡೆದರು. ಆದರೆ, ಈ ಸಂದರ್ಭ ಎಂಐ ಮಾಜಿ ನಾಯಕ ರೋಹಿತ್ ಶರ್ಮಾ ಈರೀತಿ ಮಾಡದಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಮುಂಬೈ ಫೀಲ್ಡಿಂಗ್ ಮಾಡುತ್ತಿರುವ ಸಂದರ್ಭ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಬೊಬ್ಬೆ ಹೊಡೆದು ಗೇಲಿ ಮಾಡುತ್ತಿದ್ದರು. ಆಗ ರೋಹಿತ್ ಬೊಬ್ಬೆ ಹೊಡೆಯವುದನ್ನು ನಿಲ್ಲಿಸುವಂತೆ ಅಭಿಮಾನಿಗಳ ಬಳಿ ಹೇಳಿದ್ದಾರೆ. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಕೈಸನ್ನೆ ಮೂಲಕ ಹಾರ್ದಿಕ್ ವಿರುದ್ಧ ಗೇಲಿ ಮಾಡುವುದನ್ನು ನಿಲ್ಲಿಸುವಂತೆ ಹೇಳಿದರು.

ಐಪಿಎಲ್​ನಲ್ಲಿಂದು ಆರ್​ಸಿಬಿ ಪಂದ್ಯ: ಗೆಲ್ಲಬೇಕಾದರೆ ಬದಲಾವಣೆ ಅನಿವಾರ್ಯ

ಅಭಿಮಾನಿಗಳ ಬಳಿ ರೋಹಿತ್ ಶರ್ಮಾ ಮನವಿ ಮಾಡಿರುವುದು:

ವೇಗಿ ಟ್ರೆಂಟ್ ಬೌಲ್ಟ್ ಅವರ ಡೈನಾಮಿಕ್ ಸ್ಪೆಲ್ ಮತ್ತು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಸ್ಪಿನ್ ಬೌಲಿಂಗ್‌ನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಆತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನ ವಾಂಖೆಡೆ ಸ್ಟೇಡಿಯಂನಲ್ಲಿ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ರಾಯಲ್ಸ್ ಟಾಸ್ ಗೆದ್ದು ಬೌಲ್ ಆಯ್ಕೆ ಮಾಡಿಕೊಂಡರು. ಮುಂಬೈ ಅನ್ನು 125/9 ಗೆ ಯಶಸ್ವಿಯಾಗಿ ನಿರ್ಬಂಧಿಸಿತು. ರಿಯಾನ್ ಪರಾಗ್ ಅವರ ಅಜೇಯ 54 (39 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ) ರನ್​ಗಳ ನೆರವಿನಿಂದ ಆರ್​ಆರ್​ 15.3 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು.

ಬೆಂಗಳೂರಿನಲ್ಲಿ ಟಾಸ್ ಗೆದ್ದವನೇ ಬಾಸ್; ಪಿಚ್ ಯಾರಿಗೆ ಸಹಕಾರಿ?

ರಾಜಸ್ಥಾನ್ ರಾಯಲ್ಸ್ ತಂಡದ ಸತತ ಮೂರನೇ ಗೆಲುವಿನೊಂದಿಗೆ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ. ಆದರೆ ಮುಂಬೈ ಇಂಡಿಯನ್ಸ್ ತಮ್ಮ ಮೂರನೇ ಸತತ ಸೋಲನ್ನು ಅನುಭವಿಸಿದ್ದು, ರನ್​ರೇಟ್​ನಲ್ಲಿ ಕೂಡ ಪಾತಾಳಕ್ಕೆ ಕುಸಿದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ