Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಯಕ್ಷಗಾನಕ್ಕೂ ಕಾಲಿಟ್ಟ ರೇವಣ್ಣನ ಪ್ರಸಂಗ

Viral Video: ಯಕ್ಷಗಾನಕ್ಕೂ ಕಾಲಿಟ್ಟ ರೇವಣ್ಣನ ಪ್ರಸಂಗ

ಸುಷ್ಮಾ ಚಕ್ರೆ
|

Updated on: May 25, 2024 | 8:49 PM

ಜನಪ್ರಿಯವಾಗಿರುವ ಹಾಡುಗಳು, ಡ್ಯಾನ್ಸ್ ಸ್ಟೆಪ್​ಗಳು, ಟ್ರೋಲ್​ಗಳು ಕೂಡ ಯಕ್ಷಗಾನದ ಸಂಭಾಷಣೆಯ ನಡುವೆ ಇತ್ತೀಚೆಗೆ ತೂರಿಕೊಳ್ಳುವುದು ಹೆಚ್ಚಾಗಿದೆ. ರೇವಣ್ಣನ ಪ್ರಕರಣಗಳ ಪ್ರಸ್ತಾಪವನ್ನೂ ಯಕ್ಷಗಾನದಲ್ಲಿ ಮಾಡಲಾಗಿದೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.

ಗಂಡು ಮೆಟ್ಟಿದ ಕಲೆಯಾದ ಯಕ್ಷಗಾನದಲ್ಲಿ (Yakshagana) ಆಗಾಗ ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಹಾಸ್ಯಮಯವಾಗಿ ಸೇರಿಸಿಕೊಳ್ಳಲಾಗುತ್ತದೆ. ಜನಪ್ರಿಯವಾಗಿರುವ ಹಾಡುಗಳು, ಡ್ಯಾನ್ಸ್ ಸ್ಟೆಪ್​ಗಳು, ಟ್ರೋಲ್​ಗಳು ಕೂಡ ಯಕ್ಷಗಾನದ ಸಂಭಾಷಣೆಯ ನಡುವೆ ಇತ್ತೀಚೆಗೆ ತೂರಿಕೊಳ್ಳುವುದು ಹೆಚ್ಚಾಗಿದೆ. ಅದೇರೀತಿ ಕೆಲವು ದಿನಗಳಿಂದ ಭಾರೀ ಚರ್ಚೆ ಉಂಟುಮಾಡಿರುವ ಪ್ರಜ್ವಲ್ ರೇವಣ್ಣನ (Prajwal Revanna) ಪೆನ್ ಡ್ರೈವ್ ಪ್ರಕರಣ ಹಾಗೂ ಎಚ್​ಡಿ ರೇವಣ್ಣನ (HD Revanna) ಪ್ರಕರಣಗಳ ಪ್ರಸ್ತಾಪವನ್ನೂ ಯಕ್ಷಗಾನದಲ್ಲಿ ಮಾಡಲಾಗಿದೆ.

ದಕ್ಷಿಣ ಕನ್ನಡದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರು ಮಾಡಿದ ಯಕ್ಷಗಾನದಲ್ಲಿ ಪಾತ್ರಧಾರಿಗಳು ರೇವಣ್ಣನ ಹೆಸರು ಪ್ರಸ್ತಾಪಿಸಿದ್ದಾರೆ. ‘ಹೆಣ್ಣುಮಕ್ಕಳ ವಿಷಯಕ್ಕೆ ಹೋದರೆ ಏನಾಗುತ್ತದೆ ಎಂದು ಪುರಾಣದಲ್ಲೇ ತಿಳಿಸಲಾಗಿದೆ. ಸೀತೆಯನ್ನು ಅಪಹರಿಸಿದ ರೇವಣ್ಣನ ಕತೆ ಏನಾಗಿದೆ ಎಂದು ನಿನಗೆ ಗೊತ್ತಿಲ್ಲವೇ?’ ಎಂದು ಓರ್ವ ಪಾತ್ರಧಾರಿ ಕೇಳುತ್ತಾನೆ. ಅದಕ್ಕೆ ಮತ್ತೋರ್ವ ಪಾತ್ರಧಾರಿ ‘ರೇವಣ್ಣ ಅಲ್ಲ ಸೀತೆಯನ್ನು ಅಪಹರಿಸಿದ್ದು. ಅವರು ಬೇರೆಯವಳನ್ನು ಅಪಹರಿಸಿದ್ದು’ ಎಂದು ಹೇಳಿದಾಗ ಅಲ್ಲಿ ಕುಳಿತಿದ್ದ ಪ್ರೇಕ್ಷಕರು ನಗುವುದನ್ನು ಇದೀಗ ವೈರಲ್ ಆಗಿರುವ ಯಕ್ಷಗಾನದ ವಿಡಿಯೋದಲ್ಲಿ ಕಾಣಬಹುದು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ