Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ ಎಟಿಎಂ ಒಂದರಲ್ಲಿ ₹ 500ರ ನೋಟು ಬದಲು ₹ 20ರ ನೋಟುಗಳು! ತಾಂತ್ರಿಕ ದೋಷವೆಂದ ಬ್ಯಾಂಕ್

ರಾಮನಗರ ಎಟಿಎಂ ಒಂದರಲ್ಲಿ ₹ 500ರ ನೋಟು ಬದಲು ₹ 20ರ ನೋಟುಗಳು! ತಾಂತ್ರಿಕ ದೋಷವೆಂದ ಬ್ಯಾಂಕ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 25, 2024 | 6:59 PM

ತಾಂತ್ರಿಕ ದೋಷದಿಂದ ಅಗಿರುವ ಪ್ರಮಾದ ಅಂತ ಬ್ಯಾಂಕ್ ಹೇಳಿರುವುದು ಸರಿಯಲ್ಲ. ಯಾಕೆಂದರೆ ಯಾವ ಎಟಿಎಂ ನಲ್ಲೂ 100 ಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳು ಇರಲ್ಲ. ಇಪ್ಪತ್ತು ರೂಪಾಯಿಯ ನೋಟುಗಳು ಹೇಗೆ ಬಂದವು? ಮಹಿಳೆ ಸ್ಥಳೀಯರಾಗಿರಬಹುದು, ಹಾಗಾಗೇ ಅವರಿಗೆ ಬ್ಯಾಂಕ್ ಶಾಖೆಗೆ ಹೋಗಲು ಸಾಧ್ಯವಾಗಿದೆ. ಈ ಎಟಿಎಂ ಬಸ್ ನಿಲ್ದಾಣದಲ್ಲಿದೆ, ಊರಿಗೆ ಹೂಗುವ ಧಾವಂತದಲ್ಲಿದ್ದವರಿಗೆ ಹೀಗಾದರೆ ಹೇಗೆ ಸ್ವಾಮಿ?

ರಾಮನಗರ: ಹಾಗೆ ನೋಡಿದರೆ ಇದು ಎರಡು ದಿನಗಳ ಹಿಂದೆ ಘಟನೆ. ರಾಮನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದೊಳಗೆ (KSRTC bus stop) ಅಳವಡಿಸಲಾಗಿರುವ ಇಂಡಿಯ1 ಎಟಿಎಂ (INDIA 1 ATM) ನಿಂದ ಈ ಮಹಿಳೆ ₹ 5,000 ವಿತ್​ಡ್ರಾ ಮಾಡಲು ತಮ್ಮ ಕಾರ್ಡ್ ಹಾಕಿ ಹಣವನ್ನು ಸೂಚಿಸಿದ್ದಾರೆ. ಆದರೆ ಎಟಿಎಂ ಕಿಯಾಸ್ಕ್ ನಲ್ಲಿ (kiosk) ಬಂದಿದ್ದು ₹500ರ 8 ನೋಟು ಮತ್ತು ₹20 ಮುಖಬೆಲೆಯ ಎರಡು ನೋಟು! ಅಂದರೆ ₹4,040 ಮಾತ್ರ. ಗಾಬರಿಗೊಳಗಾದ ಯುವತಿ ಕಿಯಾಸ್ಕ್ ಅಳವಡಿಸಿರುವ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ಆಗಿರುವ ಪ್ರಮಾದಕ್ಕೆ ವಿಷಾದ ವ್ಯಕಪಡಿಸಿ ಮಿಕ್ಕಿದ ₹ 960 ಅನ್ನು ಮಹಿಳೆಗೆ ನೀಡಿದ್ದಾರಂತೆ. ತಾಂತ್ರಿಕ ದೋಷದಿಂದ ಅಗಿರುವ ಪ್ರಮಾದ ಅಂತ ಬ್ಯಾಂಕ್ ಹೇಳಿರುವುದು ಸರಿಯಲ್ಲ. ಯಾಕೆಂದರೆ ಯಾವ ಎಟಿಎಂ ನಲ್ಲೂ 100 ಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳು ಇರಲ್ಲ. ಇಪ್ಪತ್ತು ರೂಪಾಯಿಯ ನೋಟುಗಳು ಹೇಗೆ ಬಂದವು? ಮಹಿಳೆ ಸ್ಥಳೀಯರಾಗಿರಬಹುದು, ಹಾಗಾಗೇ ಅವರಿಗೆ ಬ್ಯಾಂಕ್ ಶಾಖೆಗೆ ಹೋಗಲು ಸಾಧ್ಯವಾಗಿದೆ. ಈ ಎಟಿಎಂ ಬಸ್ ನಿಲ್ದಾಣದಲ್ಲಿದೆ, ಊರಿಗೆ ಹೂಗುವ ಧಾವಂತದಲ್ಲಿದ್ದವರಿಗೆ ಹೀಗಾದರೆ ಹೇಗೆ ಸ್ವಾಮಿ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸ್ನೇಹಿತನ ಎಟಿಎಂನಲ್ಲಿ ಹಣ ನೋಡಿ ಕೊಲೆ;​ ಪೋಸ್ಟ್ ಮಾರ್ಟಮ್ ರಿಪೋರ್ಟ್​ನಲ್ಲಿ ಹತ್ಯೆ ರಹಸ್ಯ ಬಯಲು, ಆರೋಪಿ ಅರೆಸ್ಟ್