AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ನಡುರಸ್ತೆಯಲ್ಲೇ ಯುವತಿಯ ವಿಚಿತ್ರ ಡ್ಯಾನ್ಸ್ ;ವಿಡಿಯೋ ವೈರಲ್​​

ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆಯ ಮಧ್ಯದಲ್ಲಿ ಯುವತಿಯೊಬ್ಬಳು ಭೂಲ್ ಭುಲಯ್ಯ ಸಿನಿಮಾದ 'ಮಂಜುಲಿಕಾ'ನಂತೆ ನೃತ್ಯ ಮಾಡುವುದನ್ನು ಕಾಣಬಹುದು. ಯುವತಿಯ ಅವತಾರ ಕಂಡು ಒಂದು ಕ್ಷಣ ಸಾರ್ವಜನಿಕರು ಶಾಕ್​ ಆಗಿದ್ದಾರೆ.

Video Viral: ನಡುರಸ್ತೆಯಲ್ಲೇ ಯುವತಿಯ ವಿಚಿತ್ರ ಡ್ಯಾನ್ಸ್ ;ವಿಡಿಯೋ ವೈರಲ್​​
ಅಕ್ಷತಾ ವರ್ಕಾಡಿ
|

Updated on: May 16, 2024 | 4:51 PM

Share

ಇತ್ತೀಚಿನ ದಿನಗಳಲ್ಲಿ ರೀಲ್ಸ್​​ ಹುಚ್ಚು ಹೆಚ್ಚಾಗಿದೆ. ಮಾರ್ಕೆಟ್​​ನಿಂದ ಹಿಡಿದು ಮೆಟ್ರೋ, ರೈಲ್ವೇ ಸ್ಟೇಷನ್​​ ಎಲ್ಲೆಂದರಲ್ಲಿ ರೀಲ್ಸ್​​ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಯುವತಿಯೊಬ್ಬಳು ನಡುರಸ್ತೆಯಲ್ಲೇ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಯುವತಿ ಅವತಾರ ಕಂಡು ಒಂದು ಕ್ಷಣ ಸಾರ್ವಜನಿಕರು ಶಾಕ್​ ಆಗಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಕೂಡ ವಿಡಿಯೋದಲ್ಲಿ ತೋರಿಸಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆಯ ಮಧ್ಯದಲ್ಲಿ ಯುವತಿಯೊಬ್ಬಳು ಭೂಲ್ ಭುಲಯ್ಯ ಸಿನಿಮಾದ ‘ಮಂಜುಲಿಕಾ’ನಂತೆ ನೃತ್ಯ ಮಾಡುವುದನ್ನು ಕಾಣಬಹುದು. ಯುವತಿಯನ್ನು ಮೇಘಾಲಯದ ಶಿಲ್ಲಾಂಗ್‌ನ ಇನ್‌ಸ್ಟಾಗ್ರಾಮ್ ಪ್ರಭಾವಿ ಪ್ರೀತಿ ಥಾಪಾ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಈಕೆ ಹಸಿರು ಸೀರೆಯಲ್ಲಿ ವಿಚಿತ್ರ ಕೂದಲು ಹಾಗೂ ಮೇಕಪ್‌ನೊಂದಿಗೆ ರಸ್ತೆಯ ಮಧ್ಯದಲ್ಲಿ ವಿಕಾರವಾಗಿ ನೃತ್ಯ ಮಾಡುವುದನ್ನು ಕಾಣಬಹುದು.

ಇದನ್ನೂ ಓದಿ: ಅಮ್ಮಾ ನಾನು ಕಳ್ಳನನ್ನು ಹಿಡಿದುಬಿಟ್ಟೆ,  ಮೆಟ್ರೋದಲ್ಲಿ ಜೇಬುಗಳ್ಳನನ್ನು ಹಿಡಿದ ಯೂಟ್ಯೂಬರ್

ಪ್ರೀತಿ ಥಾಪಾ ಸ್ವತಃ ತನ್ನ @preetithapasoss ಇನ್‌ಸ್ಟಾ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​​​ ಆಗಿದೆ. ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, ಪ್ರಿಯ ಮಂಜುಲಿಕಾ ದಯವಿಟ್ಟು ಸಂಚಾರ ನಿಯಮಗಳನ್ನು ಅನುಸರಿಸಿ. ಮತ್ತೊಬ್ಬ ಬಳಕೆದಾರರು ಜನರು ಇಂತಹ ಹುಚ್ಚುತನವನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ