Viral Post: ಊಟ ಇಲ್ಲ, ನೀರು ಇಲ್ಲ, ಓನ್ಲಿ ಕೋಕಾ-ಕೋಲಾ, ಇದುವೇ ಈ ವ್ಯಕ್ತಿಯ ಆಹಾರ
ಕೋಕಾ-ಕೋಲಾ ಸೇರಿದಂತೆ ಇತರ ತಂಪು ಪಾನೀಯಗಳನ್ನು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಈ ಪಾನೀಯಗಳನ್ನು ಹೆಚ್ಚಿನ ಜನರು ಅಷ್ಟಾಗಿ ಸೇವನೆ ಮಾಡೋಕೆ ಹೋಗಲ್ಲ. ಆದರೆ ಇಲ್ಲೊಬ್ಬ ಆಸಾಮಿ ಕಳೆದ ಐವತ್ತು ವರ್ಷಗಳಿಂದ ಒಂದು ತೊಟ್ಟು ನೀರನ್ನು ಸೇವಿಸದೆ ಬರೀ ಕೋಕಾ-ಕೋಲಾವನ್ನೇ ಕುಡಿದು ಜೀವನ ಸಾಗಿಸುತ್ತಿದ್ದಾನೆ. ಈ ಕುರಿತ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಬ್ಬಬ್ಬಾ ಬರೀ ಕೋಕ್ ಸೇವಿಸಿ ಈ ವ್ಯಕ್ತಿ ಬದುಕುಳಿದಿದ್ದಾನೆ ಅಂದ್ರೆ ನಂಬೋಕೆ ಆಗ್ತಿಲ್ಲ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.
ನಮಗೆ ಆಹಾರ ಎಷ್ಟು ಅವಶ್ಯಕವೋ ನೀರು ಕೂಡಾ ಅಷ್ಟೇ ಅವಶ್ಯಕ. ಆರೋಗ್ಯವಂತ ವ್ಯಕ್ತಿ ದಿನಕ್ಕೆ ಕನಿಷ್ಟ 2 ಲೀಟರ್ ಆದರೂ ನೀರನ್ನು ಕುಡಿಯಬೇಕು ಎನ್ನುತ್ತದೆ ವೈದ್ಯಲೋಕ. ಹೌದು ನೀರು ದೇಹದ ನಿರ್ಜಲೀಕರಣವನ್ನು ತಡೆಯುವುದು ಮಾತ್ರವಲ್ಲದೆ ದೇಹಕ್ಕೆ ಚೈತನ್ಯವನ್ನು ತರುತ್ತದೆ. ಇದೇ ಕಾರಣಕ್ಕೆ ಆರೋಗ್ಯದ ದೃಷ್ಟಿಯಿಂದ ಹಾಗೂ ಬಾಯಾರಿಕೆಯನ್ನು ನೀಗಿಸಲು ಪ್ರತಿಯೊಬ್ಬರೂ ಕೂಡಾ ನೀರನ್ನು ಸೇವನೆ ಮಾಡ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ಕಳೆದ 50 ವರ್ಷಗಳಿಂದ ನೀರನ್ನು ಸೇವಿಸಲೇ ಇಲ್ಲವಂತೆ. ಈತ ಬರೀ ಕೋಕಾ-ಕೋಲಾವನ್ನೇ ಸೇವನೆ ಮಾಡಿ ಜೀವನ ನಡೆಸುತ್ತಿದ್ದಾನೆ. ಈ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನೀರಿನ ಬದಲಿಗೆ ಬರೀ ಕೋಲಾವನ್ನೇ ಸೇವನೆ ಮಾಡುತ್ತಿರುವ ಈ ವ್ಯಕ್ತಿಯ ಹೆಸರು ರಾಬರ್ಟೊ ಪೆಡ್ರೇರಾ. ಬ್ರೆಜಿಲ್ ನ ಬಹಿಯಾದ ನಿವಾಸಿಯಾಗಿರುವ 70 ವರ್ಷ ವಯಸ್ಸಿನ ರಾಬರ್ಟೊ ತನಗೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿದ್ದರೂ ಸಹ ಇಂದಿಗೂ ಕೋಕಾ-ಕೋಲಾವನ್ನೇ ಕುಡಿಯುತ್ತಿದ್ದಾನೆ. ಮಾತ್ರೆ ಸೇವಿಸಲು ಸಹ ನೀರಿನ ಬದಲಿಗೆ ಕೋಕಾ-ಕೋಲಾವನ್ನು ಉಪಯೋಗಿಸುತ್ತಿದ್ದಾನೆ. ಈತನನ್ನು ವಿಶ್ವದ ನಂಬರ್ ಒನ್ ಕೋಕಾ-ಕೋಲಾ ಅಭಿಮಾನಿ ಎಂದ್ರೆ ತಪ್ಪಾಗಲಾರದು.
E meu padrinho que o ÚNICO líquido que ele bebe há mais de 30 anos é Coca Cola. Sim, ele não bebe nenhum outro líquido que não seja Coca Cola, nem água. A imagem da direita não me deixa mentir pic.twitter.com/s8cAqn719Z
— João Victor 🃏 (@ijoaovv) February 24, 2024
ಆಡಿಟಿ ಸೆಂಟ್ರಲ್ ನ್ಯೂಸ್ ವೆಬ್ಸೈಟ್ ವರದಿಯ ಪ್ರಕಾರ, ರಾಬರ್ಟೊ ಕಳೆದ 50 ವರ್ಷಗಳಿಂದ ನೀರಿನ ಬದಲಿಗೆ ಕೇವಲ ಕೋಕಾ-ಕೋಲಾವನ್ನು ಮಾತ್ರ ಸೇವನೆ ಮಾಡುತ್ತಿದ್ದಾನೆ. ದೇಹದ ನಿರ್ಜಲೀಕರಣವನ್ನು ತಪ್ಪಿಸಲು ಕೇವಲ ಕೋಕ್ ಮಾತ್ರ ಕುಡಿಯುತ್ತಾರೆ. ಅಷ್ಟೇ ಅಲ್ಲದೆ ಐಸ್ ಕ್ರೀಮ್ ಗೂ ಕೋಕ್ ಮಿಕ್ಸ್ ಮಾಡುತ್ತಾನಂತೆ.
ಇದನ್ನೂ ಓದಿ: ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ ನಾನಾ ರೀತಿಯ ಪಲ್ಯ, ಅಜ್ಜಿಯ ಕೈ ರುಚಿ ಅದ್ಭುತ
ರಾಬರ್ಟೊ ಪೆಡ್ರೇರಾಗೆ ನೀರೆಂದರೆ ಬಹಳ ಕೋಪವಂತೆ. ಇದೇ ಕಾರಣಕ್ಕೆ ತನ್ನ ದಾಹ ತಣಿಸಲು ನೀರಿನ ಬದಲಿಗೆ ಬರಿ ಕೋಕ್ ಮಾತ್ರ ಸೇವನೆ ಮಾಡೋದು ಅಂತ ಹೇಳಿದ್ದಾನೆ. ಜೊತೆಗೆ ಕೋಕಾ-ಕೋಲಾ ಆರೋಗ್ಯಕ್ಕೆ ಹಾನಿಕಾರವಾಗಿದ್ದರೆ, ನಾನು ಇಷ್ಟು ವರ್ಷ ಬದುಕ್ತಾನೆ ಇರ್ತಿರ್ಲಿಲ್ಲ ಎಂದು ಕೋಲಾವನ್ನು ಹೊಗಲಿದ್ದಾನೆ. ಅಷ್ಟೇ ಅಲ್ಲದೇ 3 ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರಾಬರ್ಟೊ ಔಷಧಿಗಳನ್ನು ನೀರಿನ ಬದಲಾಗಿ, ಕೋಕಾ-ಕೋಲಾದೊಂದಿಗೆ ಸೇವನೆ ಮಾಡುತ್ತೇನೆ ಎಂದು ಚಾರ್ಟ್ ಅಲ್ಲಿ ಸ್ಪಷ್ಟವಾಗಿ ಬರೆದಿದ್ದರು ಎಂದು ರಾಬರ್ಟ್ ಮೊಮ್ಮಗ ಹೇಳಿಕೊಂಡಿದ್ದಾರೆ. ಈ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಬರ್ಟೊ ಮೊಮ್ಮಗ (@ijoaovv) ಈ ಕುರಿತ ಪೋಸ್ಟ್ ಒಂದನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ತಾತ 30 ವರ್ಷಗಳಿಂದ ಕೇವಲ ಕೋಕಾಕೋಲಾವನ್ನು ಮಾತ್ರ ಸೇವನೆ ಮಾಡುತ್ತಿದ್ದಾರೆ. ಹೌದು ಅವರು ಕೋಕ್ ಹೊರತು ಪಡಿಸಿ ಬೇರೆ ಯಾವುದೇ ದ್ರವ ಪದಾರ್ಥವನ್ನು ಸೇವಿಸುವುದಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 3.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 29 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಂದು ಹನಿ ನೀರನ್ನು ಸೇವಿಸದೆಯೂ ಅನಾರೋಗ್ಯಕರ ಕೋಕಾ-ಕೋಲಾವನ್ನು ಸೇವನೆ ಮಾಡಿ ಇಷ್ಟು ವರ್ಷ ಈ ವ್ಯಕ್ತಿ ಬದುಕಿದ್ದಾನೆ ಅಂದ್ರೆ ನಂಬೋಕೆ ಆಗ್ತಿಲ್ಲ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ