Viral Video: ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ ನಾನಾ ರೀತಿಯ ಪಲ್ಯ, ಅಜ್ಜಿಯ ಕೈ ರುಚಿ ಅದ್ಭುತ
ಭಾರತವು ವೈವಿಧ್ಯತೆಯಿಂದ ಕೂಡಿದ್ದು, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಪ್ರದಾಯ, ಆಚಾರ ವಿಚಾರ ಹಾಗೂ ಆಹಾರ ಪದ್ಧತಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಕರ್ನಾಟಕದಲ್ಲಿ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಆಹಾರ ರುಚಿಯನ್ನು ಕಾಣಬಹುದು. ಆದರೆ ಉತ್ತರ ಕರ್ನಾಟಕದಲ್ಲಿ ಖಡಕ್ ರೊಟ್ಟಿ ಹಾಗೂ ಚಟ್ನಿ ಪುಡಿ ಸಿಕ್ಕಾಪಟ್ಟೆ ಫೇಮಸ್. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಾದಾಮಿ ಶ್ರೀ ಬನಶಂಕರಿ ದೇವಸ್ಥಾನ ಪರಿಸರದಲ್ಲಿ ಅಜ್ಜಿಯೊಬ್ಬರು ಖಡಕ್ ಜೋಳ ರೊಟ್ಟಿ, ಸಜ್ಜೆ ರೊಟ್ಟಿ ಹಾಗೂ ರುಚಿಕರವಾದ ಪಲ್ಯವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಜ್ಜಿಯ ಈ ಕೈ ರುಚಿಯ ಈ ವಿಡಿಯೋವೊಂದು ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿವೆ.
ಉತ್ತರ ಕರ್ನಾಟಕದ ಆಹಾರ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದೇ ರುಚಿ ರುಚಿಕರವಾದ ರೊಟ್ಟಿ ಹಾಗೂ ಚಟ್ನಿ ಪುಡಿ . ಈ ಭಾಗದಲ್ಲಿ ತಯಾರಿಸುವ ತಿಂಡಿ, ತಿನಿಸುಗಳೆಂದರೆ ಹಾಗೆಯೇ, ಅದರದ್ದೇ ಆದ ರುಚಿ ಹಾಗೂ ಘಮವಿರುತ್ತದೆ. ಒಮ್ಮೆ ಇದರ ರುಚಿಯನ್ನು ನಾಲಿಗೆಗೆ ಹತ್ತಿಸಿಕೊಂಡರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಖಡಕ್ ರೊಟ್ಟಿಯ ಜೊತೆಗೆ ಪಲ್ಯ, ಚಟ್ನಿಪುಡಿ ಹಾಗೂ ಮಜ್ಜಿಗೆಯಿದ್ದು ಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಾದಾಮಿ ಶ್ರೀ ಬನಶಂಕರಿ ದೇವಸ್ಥಾನದ ಪರಿಸರದಲ್ಲಿ ಅಜ್ಜಿಯೊಬ್ಬರು ಉತ್ತರ ಕರ್ನಾಟಕದ ಶೈಲಿಯ ಊಟವನ್ನು ಕೇವಲ ಮೂವತ್ತು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಶೈಲಿಯ ಈ ಸ್ಪೆಷಲ್ ಊಟವನ್ನು ಮಾರಾಟ ಮಾಡುತ್ತಿರುವ ಅಜ್ಜಿಯ ಹೆಸರು ಹನುಮವ್ವ. ಖಡಕ್ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಪುಂಡಿಪಲ್ಲೇ, ಕೆಂಪು ಮೆಣಸಿನಕಾಯಿ ಚಟ್ಟಿ, ಪುಟಾಣಿ ಚಟ್ಟಿ, ಮೊಸರು, ಮಜ್ಜಿಗೆ ಹೀಗೆ ನಾನಾ ಖಾದ್ಯವನ್ನು ಒಳಗೊಂಡ ಉತ್ತರ ಕರ್ನಾಟಕದ ಊಟಕ್ಕೆ ಕೇವಲ 30 ರೂಪಾಯಿಯಷ್ಟೇ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬರು ರೊಟ್ಟಿ, ವಿಧ ವಿಧವಾದ ಚಟ್ನಿ ಪುಡಿ, ಪಲ್ಯ ಸೇರಿದಂತೆ ಇನ್ನಿತ್ತರ ಪದಾರ್ಥಗಳನ್ನು ಪಾತ್ರೆಯಲ್ಲಿ ತುಂಬಿಕೊಂಡು ತಂದಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಅಜ್ಜಿಯ ಬಳಿ ಆಹಾರ ಪ್ರಿಯರೊಬ್ಬರು ಏನೆಲ್ಲಾ ಇದೆ ಎಂದು ಕೇಳಿದ್ದಾರೆ. ಈ ಅಜ್ಜಿಯು ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಜೊತೆಗೆ ಪುಂಡಿಪಲ್ಲೇ, ಕೆಂಪು ಮೆಣಸಿನಕಾಯಿ ಚಟ್ಟಿ, ಪುಟಾಣಿ ಚಟ್ಟಿ, ಮೊಸರು ಇದೆ ಎಂದಿದ್ದಾರೆ. ಪ್ರೀತಿಯಿಂದ ಬಡಿಸುತ್ತಿರುವ ಅಜ್ಜಿಯ ಈ ಕೈಯಾಡುಗೆಯನ್ನು ಆಹಾರಪ್ರಿಯರೊಬ್ಬರು ಸವಿಯುತ್ತಿರುವುದನ್ನು ನೋಡಬಹುದು. ಕಡಿಮೆ ಬೆಲೆಗೆ ಅಜ್ಜಿಯ ಕೈಯಾಡುಗೆಯನ್ನು ಸವಿಯಲು ಕೆಲವರು ದಿನ ನಿತ್ಯಲು ಬರುತ್ತಿದ್ದಾರೆ ಎನ್ನುವುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ.
ಇದನ್ನೂ ಓದಿ: ಇವರು ಡ್ರೋನ್ ಚಿಂಪಾಂಜಿ, ಭಲೇ ಬುದ್ವಂತ ಈತ
ಈ ವಿಡಿಯೋವೊಂದನ್ನು ‘ನಮ್ಮ ಚಿಕ್ಕೋಡಿ’ ಎನ್ನುವ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿದ್ದು, ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ‘ ಅನ್ನ ಪೂರ್ಣೇಶ್ವರಿ ಅಮ್ಮ ‘ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ’48 ವರ್ಷದಿಂದ ನೋಡುತ್ತಿರುವೆನು ಈ ಅವ್ವನ್ನ ‘ ಎಂದಿದ್ದಾರೆ. ಇನ್ನೊಬ್ಬರು ‘ಮಸ್ತ್ ಇರ್ತದ ನಾ ಟೇಸ್ಟ್ ಮಾಡೇನಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Sat, 9 March 24