Green lady: 83ರ ಹರೆಯದ ಈ ಮಹಿಳೆಗೆ ಹಸಿರು ಬಣ್ಣವೆಂದರೆ ಹುಚ್ಚು ಪ್ರೀತಿ
ತನ್ನ ಹಸಿರು ಬಣ್ಣದ ಪ್ರೀತಿಯಿಂದಲೇ ನೆಟ್ಟಿಗರ ಗಮನ ಸೆಳೆದಿರುವ ಎಲಿಜಬೆತ್ ಗ್ರೀನ್ ಲೇಡಿ ಎಂದೇ ಫೇಮಸ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸಖತ್ ಆಕ್ಟೀವ್ ಆಗಿರುವ ಎಲಿಜಬೆತ್ ತನ್ನ ಅಧಿಕೃತ @greenladyofbrooklyn ಖಾತೆಯಲ್ಲಿ ಹೊಸ ಹೊಸ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ನ್ಯೂಯಾರ್ಕ್‌ನ ನಿವಾಸಿಯಾಗಿರುವ 83 ವರ್ಷದ ಎಲಿಜಬೆತ್ ಸ್ವೀಟ್‌ಹಾರ್ಟ್ ಎಂಬ ಮಹಿಳೆ ತನ್ನ ವಿಭಿನ್ನವಾದ ಜೀವನಶೈಲಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಗ್ರೀನ್ ಲೇಡಿ ಎಂದೇ ಖ್ಯಾತಿ ಪಡೆದುಕೊಂಡಿರುವ ಈಕೆಗೆ ಹಸಿರು ಬಣ್ಣವೆಂದರೆ ಸಖತ್ ಫೇವರೇಟ್. ಹಸಿರು ಬಣ್ಣದ ಮೇಲಿನ ಈಕೆಯ ಪ್ರೀತಿ ಎಷ್ಟರ ಮಟ್ಟಿಗೆ ಇದೆ ಎಂದರೆ ಆಕೆ ಧರಿಸುವ ಬಟ್ಟೆಯಿಂದ ಹಿಡಿದು ಮನೆಯ ಪ್ರತಿಯೊಂದು ವಸ್ತುವನ್ನು ಕೂಡ ಹಸಿರು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ.
ತನ್ನ ಹಸಿರು ಬಣ್ಣದ ಪ್ರೀತಿಯಿಂದಲೇ ನೆಟ್ಟಿಗರ ಗಮನ ಸೆಳೆದಿರುವ ಎಲಿಜಬೆತ್ ಗ್ರೀನ್ ಲೇಡಿ ಎಂದೇ ಫೇಮಸ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸಖತ್ ಆಕ್ಟೀವ್ ಆಗಿರುವ ಎಲಿಜಬೆತ್ ತನ್ನ ಅಧಿಕೃತ @greenladyofbrooklyn ಖಾತೆಯಲ್ಲಿ ಹೊಸ ಹೊಸ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಗ್ರೀನ್ ಲೇಡಿಯ ಇನ್ಸ್ಟಾಗ್ರಾಮ್ ಐಡಿ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಇಲ್ಲಿ ಪುರುಷರು ಕಡ್ಡಾಯವಾಗಿ ಎರಡು ಮದುವೆಯಾಗಲೇಬೇಕು! ʼನೋʼ ಅಂದ್ರೆ ಕಠಿಣ ಶಿಕ್ಷೆ
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಎಲಿಜಬೆತ್ ಸ್ವೀಟ್‌ಹಾರ್ಟ್. ತನ್ನ 83ರ ಇಳಿ ವಯಸ್ಸಿನಲ್ಲೂ ಸಖತ್ ಹ್ಯಾಪಿ ಜೀವನವನ್ನು ನಡೆಸುತ್ತಿದ್ದಾರೆ. ಸದ್ಯ ಇವರ ಜೀವನಶೈಲಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sat, 9 March 24