ಇಲ್ಲಿ ಪುರುಷರು ಕಡ್ಡಾಯವಾಗಿ ಎರಡು ಮದುವೆಯಾಗಲೇಬೇಕು! ʼನೋʼ ಅಂದ್ರೆ ಕಠಿಣ ಶಿಕ್ಷೆ
ಜಗತ್ತಿನ ಪ್ರತಿಯೊಂದು ದೇಶವೂ ತನ್ನದೇ ಆದ ಸಂಪ್ರದಾಯಗಳನ್ನು ಮತ್ತು ಕಾನೂನುಗಳನ್ನು ಹೊಂದಿದೆ. ಆದರೆ ಕೆಲವೊಂದು ದೇಶಗಳ ಸಂಪ್ರದಾಯಗಳು ಮತ್ತು ಆಚರಣೆಗಳು ಇತರರನ್ನು ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತದೆ. ಇಂತಹದ್ದೇ ವಿಚಿತ್ರ ಕಾನೂನೊಂದು ಆಫ್ರಿಕಾ ಖಂಡದ ದೇಶವೊಂದರಲ್ಲಿ ಜಾರಿಯಲ್ಲಿದೆ. ಅದೇನೆಂದರೆ ಇಲ್ಲಿನ ಪುರುಷರು ಕಡ್ಡಾಯವಾಗಿ ಎರಡು ಮದುವೆಯಾಗಲೇಬೇಕು. ಇದಕ್ಕೇನಾದರೂ ಅವರು ನಿರಾಕರಿಸಿದರೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ಯಾವ ದೇಶದಲ್ಲಿ ಈ ಕಾನೂನು ಜಾರಿಯಲ್ಲಿದೆ, ಈ ವಿಚಿತ್ರ ಕಾನೂನಿನ ಹಿಂದಿನ ಕಾರಣವೇನು ಈ ಎಲ್ಲದರ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಜಗತ್ತಿನ ಪ್ರತಿಯೊಂದು ದೇಶವು ತನ್ನದೇ ಆದ ಸಂಪ್ರದಾಯ, ಕಾನೂನುಗಳನ್ನು ಪಾಲಿಸುತ್ತವೆ. ಕೆಲವೊಂದು ದೇಶಗಳು ತಮ್ಮದೇ ಆದ ವಿಭಿನ್ನ ಮತ್ತು ವಿಶಿಷ್ಟ ನಂಬಿಕೆ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಇವೆಲ್ಲದರ ಬಗ್ಗೆ ಕೇಳಿದಾಗ ಖಂಡಿತವಾಗಿಗೂ ಇದೆಂತಹ ವಿಚಿತ್ರ ಆಚರಣೆ ಅಂತ ನಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ. ಇಂತಹದ್ದೇ ವಿಚಿತ್ರ ಕಾನೂನು ಮತ್ತು ಆಚರಣೆಯನ್ನು ಆಫ್ರಿಕಾ ಖಂಡದ ʼಎರಿಟ್ರಿಯಾʼ ದೇಶದಲ್ಲಿ ಪಾಲಿಸಲಾಗುತ್ತದೆ. ಅದೇನೆಂದರೆ ಈ ದೇಶದಲ್ಲಿನ ಪ್ರತಿಯೊಬ್ಬ ಪುರುಷನೂ ಕೂಡ ಕಡ್ಡಾಯವಾಗಿ ಎರಡು ವಿವಾಹವಾಗಲೇಬೇಕು. ಇದಕ್ಕೇನಾದರೂ ಆತ ನಿರಾಕರಿಸಿದೆ ಆತನಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುತ್ತದೆ. ಅರೇ ಏನಿದೂ ವಿಚಿತ್ರ, ಕೇವಲ ರಾಜರ ಕಾಲದಲ್ಲಿ ಬಹುಪತ್ನಿತ್ವ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಈಗಿನ ಕಾಲದಲ್ಲಿ ಯಾವ ದೇಶವು ಕೂಡ ಬಹುಪತ್ನಿತ್ವ ವ್ಯವಸ್ಥೆಗೆ ಬೆಂಬಲವನ್ನು ನೀಡುವುದಿಲ್ಲ. ಆದರೆ ಈ ದೇಶದ ಕಾನೂನು ವ್ಯವಸ್ಥೆ ಯಾಕಾಗಿ ಬಹುಪತ್ನಿತ್ವಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಅಂತ ಯೋಚನೆ ಮಾಡ್ತಿದ್ದೀರಾ? ಅದಕ್ಕೂ ಒಂದು ಕಾರಣವಿದೆ, ಆ ಕುರಿತ ಮಾಹಿತಿ ಇಲ್ಲಿದೆ.
ಇಲ್ಲಿ ಪುರುಷರು ಕಡ್ಡಾಯವಾಗಿ ಎರಡು ವಿವಾಹವಾಗಬೇಕು ಎಂಬ ಕಾನೂನಿನನ್ನು ಏಕೆ ಜಾರಿ ಗೊಳಿಸಲಾಗಿದೆ?
ಎರಿಟ್ರಿಯಾ ದೇಶವು ಪುರುಷರು ಕಡ್ಡಾಯವಾಗಿ ಎರಡು ವಿವಾಹವಾಗಬೇಕು ಎಂಬ ವಿಚಿತ್ರವಾದ ವಿವಾಹ ಕಾನೂನನ್ನು ಹೊಂದಿದೆ. ಈ ವಿಶಿಷ್ಟ ಕಾನೂನು ಜಾರಿ ಮಾಡುವುದರ ಹಿಂದೆ ಒಂದು ಕಾರಣವಿದೆ. ಅದೇನೆಂದರೆ ಎರಿಟ್ರಿಯಾ ದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಮುಖ್ಯ ಕಾರಣ ಇಥಿಯೋಪಿಯಾದೊಂದಿಗೆ ಈ ದೇಶದ ಅಂತರ್ಯುದ್ಧದ ಸಮಯದಲ್ಲಿ ಉಂಟಾದ ಸಾವು ನೋವುಗಳಿಂದ ಇಲ್ಲಿ ಪುರುಷರ ಸಂಖ್ಯೆ ಕಡಿಮೆಯಿದೆ. ಹೌದು ಈ ದೇಶದಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರ ಸಂಖ್ಯೆ ತೀರಾ ಕಡಿಮೆಯಿದೆ. ಈ ಕಾರಣಕ್ಕಾಗಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬ ಪುರುಷನೂ ಎರಡು ವಿವಾಹವಾಗಬೇಕು ಎಂಬ ಕಾನೂನನ್ನು ರೂಪಿಸಲಾಗಿದೆ.
ಇದನ್ನೂ ಓದಿ: ನನ್ ಬಾಯ್ ಫ್ರೆಂಡ್ಗೆ ನಿನ್ಯಾಕೆ ಮೆಸೇಜ್ ಮಾಡ್ತೀಯಾ, ಒಬ್ಬನಿಗಾಗಿ ಇಬ್ಬರು ಯುವತಿಯರ ಜಗಳ
ಏನಾದರೂ ಒಬ್ಬ ಪುರುಷ ಮೊದಲನೇ ಮದುವೆಯಾದ ನಂತರ ಇನ್ನೊಂದು ಮದುವೆಯಾಗಲು ನಿರಾಕರಿಸಿದೆ ಆತನಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ. ಅಷ್ಟೇ ಅಲ್ಲದೆ ಮೊದಲ ಪತ್ನಿ ತನ್ನ ಗಂಡ ಇನ್ನೊಂದು ಮದುವೆಯಾಗುವುದನ್ನು ನಿರಾಕರಿಸಿದರೆ ಆಕೆಗೂ ಜೈಲು ಶಿಕ್ಷೆಯಾಗಬಹುದು. ಈ ಪ್ರಕರಣದಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ. ಈ ದೇಶದಲ್ಲಿ ಗಂಡನ ಮೇಲೆ ಇಬ್ಬರೂ ಪತ್ನಿಯರೂ ಸಮಾನ ಹಕ್ಕನ್ನು ಹೊಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ