AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನನ್ ಬಾಯ್ ಫ್ರೆಂಡ್​​​ಗೆ ನಿನ್ಯಾಕೆ ಮೆಸೇಜ್ ಮಾಡ್ತೀಯಾ, ಒಬ್ಬನಿಗಾಗಿ ಇಬ್ಬರು ಯುವತಿಯರ ಜಗಳ

ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ಜಗಳವಾಡುವಂತಹ, ಬೀದಿ ರಂಪ ಮಾಡುವಂತಹ ಕೆಲವು ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬಾಯ್ ಫ್ರೆಂಡ್ ಗೆ ಮೆಸೇಜ್ ಮಾಡಿದ ವಿಚಾರವಾಗಿ ಇಬ್ಬರು  ವಿದ್ಯಾರ್ಥಿನಿಯರು  ಶಾಲಾ ಕ್ಯಾಂಪಸ್ ಒಳಗಡೆಯೇ WWE ಶೈಲಿಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. 

Viral Video: ನನ್ ಬಾಯ್ ಫ್ರೆಂಡ್​​​ಗೆ ನಿನ್ಯಾಕೆ ಮೆಸೇಜ್ ಮಾಡ್ತೀಯಾ, ಒಬ್ಬನಿಗಾಗಿ ಇಬ್ಬರು ಯುವತಿಯರ ಜಗಳ
ಮಾಲಾಶ್ರೀ ಅಂಚನ್​
| Edited By: |

Updated on: Mar 08, 2024 | 2:52 PM

Share

ಬಾಯ್ ಫ್ರೆಂಡ್ ವಿಚಾರವಾಗಿ ಹುಡುಗಿಯರು ಹೊಡೆದಾಡಿಕೊಳ್ಳುವುದು ಹೊಸದೇನಲ್ಲ. ಈ ಮೊದಲು ಕೂಡಾ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ರಂಪ ರಾಮಾಯಣ ಮಾಡಿದಂತ ಸುದ್ದಿಗಳು ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಯಾವುದೇ ಫಾರಿನ್ ಕಂಟ್ರಿಯಲ್ಲಿ  ಬಾಯ್ ಫ್ರೆಂಡ್ ಗೆ ಮೆಸೇಜ್ ಮಾಡಿದ ವಿಚಾರವಾಗಿ  ವಿದ್ಯಾರ್ಥಿನಿಯರಿಬ್ಬರು ಶಾಲೆಯ  ಕ್ಯಾಂಪಸ್ ನಲ್ಲಿಯೇ ಪರಸ್ಪರ ಫೈಟ್ ಶುರು ಮಾಡಿಕೊಂಡಿದ್ದಾರೆ. ಈ ಜಡೆ ಜಗಳದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿದೇಶದಲ್ಲಿನ ಶಾಲೆಯ  ವಿದ್ಯಾರ್ಥಿನಿಯರಿಬ್ಬರು WWE ಶೈಲಿಯಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @Deadlykalesh ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ನೀಲಿ ಬಣ್ಣದ ಪ್ಯಾಂಟ್ ಧರಿಸಿ ಬಂದಂತಹ ವಿದ್ಯಾರ್ಥಿನಿಯೊಬ್ಬಳು ಅಲ್ಲೇ ನಿಂತಿದ್ದ ವಿದ್ಯಾರ್ಥಿನಿಯ ಮೇಲೆ, ಕರಾಟೆ ಶೈಲಿಯಲ್ಲಿ ಕಾಲಿನಿಂದ ಒದೆಯುತ್ತಾಳೆ. ನನ್ ಮೇಲೆ ನೀನ್ಯಾಕೆ ಕೈ ಮಾಡುತ್ತೀಯಾ ಎಂದು ಇನ್ನೊಬ್ಬ ಹುಡುಗಿಯೂ ಕೂಡಾ ಆಕೆಯ ಮೇಲೆ ಕೈ ಮಾಡುತ್ತಾಳೆ. ಹೀಗೆ ಜಗಳ ತಾರಕಕ್ಕೇರಿ, ಇಬ್ಬರೂ ಜುಟ್ಟು ಹಿಡಿದುಕೊಂದು ಹೊಡೆದಾಡಿಕೊಳ್ಳುತ್ತಾರೆ. ಅಲಿದ್ದ ಇತರೆ ವಿದ್ಯಾರ್ಥಿಗಳು ಇವರ ಜಡೆ ಜಗಳವನ್ನು ನೋಡುತ್ತಾ ಎಂಜಾಯ್ ಮಾಡುತ್ತಾ, ಶಿಳ್ಳೆ ಹೊಡೆಯುತ್ತಾ ನಿಂತಿದ್ದರು. ಕೊನೆಗೆ ಪೊಲೀಸರೊಬ್ಬರು ಮಧ್ಯ ಪ್ರವೇಶಿಸಿ ಇವರಿಬ್ಬರ ಜಗಳವನ್ನು ನಿಲ್ಲಿಸಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದಂತಹ ಯುವತಿಯನ್ನು ಹಿಡಿದುಕೊಂಡು ಹೋಗುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ದೇವ್ರೆ ಎಲ್ಲಾ ಸಬ್ಜೆಕ್ಟ್​​​​​ಗಳಲ್ಲೂ 99 ಅಂಕ ಬಂದ್ರೆ ಸಾಕಪ್ಪ, ಮಕ್ಕಳ ವಿಶೇಷ ಹೋಮ-ಹವನ

ಮಾರ್ಚ್ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ  40 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಯಾವುದೇ ದೇಶವಿರಲಿ ಈ ಹುಡುಗಿಯರು ಹುಡುಗರ ವಿಚಾರಕ್ಕಾಗಿ ಜಗಳವಾಡುವುದು ಕಮ್ಮಿಯಿಲ್ಲʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವರ ಜಡೆ ಜಗಳವನ್ನು ಅಲ್ಲಿದ್ದ ಎಲ್ಲರೂ ಬಹಳ ಎಂಜಾಯ್ ಮಾಡುತ್ತ ವೀಕ್ಷಿಸುತ್ತಿದ್ದ ದೃಶ್ಯ ನೋಡಲು ತುಂಬಾ ತಮಾಷೆಯಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅರೇ ಈ ದೃಶ್ಯವನ್ನು ನೋಡಿ ನನಗಂತೂ ನಗು ತಡೆಯಲಾಗಲಿಲ್ಲʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ