AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದೇವ್ರೆ ಎಲ್ಲಾ ಸಬ್ಜೆಕ್ಟ್​​​​​ಗಳಲ್ಲೂ 99 ಅಂಕ ಬಂದ್ರೆ ಸಾಕಪ್ಪ, ಮಕ್ಕಳ ವಿಶೇಷ  ಹೋಮ-ಹವನ

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಹಾಸ್ಯಮಯ  ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಪರೀಕ್ಷೆಯಲ್ಲಿ ಉತ್ತಮ ಅಂಕ ಬರಲೆಂದು  ಮೂವರು ಮಕ್ಕಳು  ವಿಶೇಷ ಹೋಮವನ್ನು ಮಾಡಿದ್ದಾರೆ.  ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

Viral Video: ದೇವ್ರೆ ಎಲ್ಲಾ ಸಬ್ಜೆಕ್ಟ್​​​​​ಗಳಲ್ಲೂ 99 ಅಂಕ ಬಂದ್ರೆ ಸಾಕಪ್ಪ, ಮಕ್ಕಳ ವಿಶೇಷ  ಹೋಮ-ಹವನ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2024 | 2:30 PM

ಮಾರ್ಚ್ ತಿಂಗಳು ಪರೀಕ್ಷೆಯ ಸಮಯ. ಶಾಲಾ ಮಕ್ಕಳಂತೂ ಪರೀಕ್ಷೆಯಲ್ಲಿ ಪಾಸ್ ಆಗಬೇಕು, ಒಳ್ಳೆಯ ಅಂಕ ತೆಗೆದು ಪೋಷಕರ ಕೈಯಲ್ಲಿ ಭೇಷ್ ಅನಿಸಿಕೊಳ್ಳಬೇಕೆಂದು  ಹಗಲು ರಾತ್ರಿ ಪರೀಕ್ಷೆಗೆ ಓದುತ್ತಿರುತ್ತಾರೆ. ಇನ್ನೂ ಈ ಬ್ಯಾಕ್ ಬೆಂಚ್ ಸ್ಟೂಡೆಂಟ್ ಗಳು ಜಸ್ಟ್ ಪಾಸ್ ಆದ್ರೆ ಸಾಕಪ್ಪಾ ಎನ್ನುತ್ತಾ ಕೊನೆಯ ಕ್ಷಣದಲ್ಲಿ ಪರೀಕ್ಷೆಗೆ ತಯಾರಾಗುತ್ತಾರೆ. ಆದ್ರೆ ಇಲ್ಲೊಂದು ವಿದ್ಯಾರ್ಥಿಗಳ ಗುಂಪು ನಮಗೆ ಓದಿದ್ದು ತಲೆಗೆ ಹತ್ತೋಲ್ಲ ಹಾಗಾಗಿ ದೇವ್ರೆ ನೀನೇ  ಪ್ರತಿಯೊಂದು ವಿಷಯಗಳಲ್ಲೂ 100 ರಲ್ಲಿ 99 ಅಂಕ ಬರುವ ಹಾಗೆ ಮಾಡು,  ಇನ್ನೋನು ಬೇಡ ಎಂದು ದೇವರಿಗೆ ವಿಶೇಷ ಹೋಮವನ್ನು ಮಾಡಿದ್ದಾರೆ. ಈ ಫನ್ನಿ ವಿಡಿಯೋ ಇದೀಗಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯಜ್ಞ ಕುಂಡದ ಮುಂದೆ ಕುಳಿತ ಮೂವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪ್ರತಿಯೊಂದು ವಿಷಯದಲ್ಲೂ 99 ಅಂಕ ಬರಲೆಂದು ವಿಶೇಷ ಹೋಮವನ್ನು ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ಶೋಭ್ನಾ ಯಾದವ್ (@ShobhnaYadav) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಆಯ್ತಲ್ಲಾ, ಇನ್ನೂ ಈ ಮಕ್ಕಳು ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲೂ 99 ಅಂಕವನ್ನು ಪಡೆಯುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂಬ ತಮಾಷಯೆ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳು ಇಟ್ಟಿಗೆಯಿಂದ ಪುಟ್ಟ ಅಗ್ನಿ ಕುಂಡವೊಂದನ್ನು ರಚಿಸಿ, ಅದರ ಮುಂದೆ ಪುಸ್ತಕಗಳನ್ನಿಟ್ಟು, ಹೋಮ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.  ವಿದ್ಯಾರ್ಥಿಗಳು  ಇಂಗ್ಲೀಷ್ ಸಬ್ಜೆಟ್ ಅಲ್ಲಿ 99 ಅಂಕ ಬರಲಿ ಸ್ವಾಹಾ,  ಹಿಂದಿಯಲ್ಲಿ 99 ಅಂಕ ಬರಲಿ ಸ್ವಾಹಾ… ಹೀಗೆ ಪ್ರತಿಯೊಂದು ವಿಷಯದಲ್ಲೂ 99 ಅಂಕಗಳು ಬರಲಿ ಎಂದು ಸ್ವಾಹಾ ಹೇಳುತ್ತಾ ಹೋಮ-ಹವನನ್ನು ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನನ್ನ ಅತ್ತೆ ಸಾಯಬೇಕು ಸ್ವಾಮಿ, ಅತ್ತೆಯ ಸಾವಿಗೆ ದೇವರ ಬಳಿ ಸೊಸೆಯ ಡೀಲ್

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಮೂರು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕೆಲ ದಿನಗಳ ಹಿಂದೆ ನನಗೂ ಪರೀಕ್ಷೆ ಇತ್ತು. ಆ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯಲು ನಾನು ಕೂಡ ಇದೇ ತಂತ್ರವನ್ನು ಅಳವಡಿಸಬೇಕಿತ್ತುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಕೂಡಾ ಇದೇ ತಂತ್ರವನ್ನು ಅಳವಡಿಸಿಕೊಳ್ಳಬೇಕುʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಮಕ್ಕಳ ತರ್ಲೆ ಕೆಲಸವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ