ಹರ್ಯಾಣ: ಸೋದರ ಸೊಸೆ ಮದುವೆಗೆ 1.11 ಕೋಟಿ ರೂ. ಕೊಟ್ಟ ಮಾವ, 500 ರೂ. ನೋಟುಗಳ ಬಂಡಲ್ ನೋಡಿ ಬೆಚ್ಚಿಬಿದ್ದ ಜನ
ಮದುವೆಯಲ್ಲಿ ಸಂಬಂಧಿಕರು ಉಡುಗೊರೆಯಾಗಿ ಮದುಮಕ್ಕಳಿಗೆ ಬಟ್ಟೆ, ಇತರೆ ಗೃಹಬಳಕೆಯ ವಸ್ತುಗಳು ಇನ್ನೂ ಕೆಲವರು ನೂರೋ ಇನ್ನೂರೋ ಕೊಡುವುದು ಸಾಮಾನ್ಯ. ಆದರೆ ಯಾರಾದರೂ ಕೋಟಿಗಟ್ಟಲೆ ಹಣ ಕೊಟ್ಟಿದ್ದು ನೋಡಿದ್ದೀರಾ.. ಈ ಸುದ್ದಿ ಓದಿ.
ಹರ್ಯಾಣದಲ್ಲಿ ನಡೆದ ಮದುವೆಯ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಸೋದರ ಸೊಸೆಯ ಮದುವೆಯಲ್ಲಿ ಮಾವ 1.11 ಕೋಟಿ ರೂ. ನೀಡಿದ್ದಾರೆ. 500 ರೂ.ಗಳ ಬಂಡನ್ ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಗುರುದಾಸ್ ಅವರ ಪುತ್ರಿ ಶಿವಾನಿ ಮತ್ತು ಶೀತಲ್ ಅವರ ವಿವಾಹವು ಜಜ್ಜರ್ ಜಿಲ್ಲೆಯ ಸಿಕಂದರಪುರ ಗ್ರಾಮದಲ್ಲಿ ನಡೆಯಿತು. ಇವರ ಮದುವೆ ಪಾಣಿಪತ್‌ನ ಬಾಪೌಲಿ ಗ್ರಾಮದಲ್ಲಿ ನಡೆದಿದೆ.
ಮದುವೆಗೆ ಕೆಲವು ಗಂಟೆಗಳ ಮೊದಲು ಕಾರ್ಯಕ್ರಮ ನಡೆದಿತ್ತು, ದರಲ್ಲಿ, ರೇವಾರಿ ಜಿಲ್ಲೆಯ ಕೈಗಾರಿಕಾ ಪಟ್ಟಣ ಬವಾಲ್‌ನ ಮುಂಡಾವಾಸ್ ಗ್ರಾಮದ ನಿವಾಸಿ, ಹೆಣ್ಣುಮಕ್ಕಳ ತಾಯಿಯ ಚಿಕ್ಕಪ್ಪ, ಓಂಪ್ರಕಾಶ್ ಅವರು ಆಗಮಿಸಿದ್ದರು. ಆಗ ಸೊಸೆಗೆ ದುಡ್ಡಿನ ಬಂಡಲ್ಗಳನ್ನು ತೆಗೆದು ಕೊಡುತ್ತಿದ್ದಂತೆ ಎಲ್ಲರೂ ಆಶ್ಚರ್ಯಚಕಿತರಾದರು. ಉಡುಗೊರೆಯಾಗಿ ಬರೋಬ್ಬರಿ 1.11 ಕೋಟಿ ರೂ. ನೀಡಿದ್ದಾರೆ.
ಓಂ ಪ್ರಕಾಶ್ ಅವರು ತನ್ನ ಇಬ್ಬರು ಸೊಸೆಯರ ಮದುವೆಯಲ್ಲಿ 15 ತೊಲ ಚಿನ್ನ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ನೀಡಿದ್ದರು. ಈ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಿವಾನಿ ಮತ್ತು ಶೀತಲ್ ಅವರ ತಾಯಿಯ ತಮ್ಮ ಓಂಪ್ರಕಾಶ್ ಜಮೀನುದಾರ ಮತ್ತು ಅವರದ್ದು ಶ್ರೀಮಂತ ಕುಟುಂಬ.
ಮತ್ತಷ್ಟು ಓದಿ: Video Viral: ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಮೊದಲ ಪುರುಷ ರೋಬೋಟ್
ಅಕ್ಕನ ಮದುವೆಯನ್ನೂ ಅದ್ಧೂರಿಯಾಗಿ ಏರ್ಪಡಿಸಿದ್ದ ಅವರು ಇದೀಗ ಸೊಸೆಯಂದಿರ ಮದುವೆಯನ್ನೂ ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ.
ಮತ್ತೊಂದು ಘಟನೆ ನಡೆದಿತ್ತು ಹರ್ಯಾಣದ ರೇವಾರಿ ನಗರದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಇಲ್ಲೂ ಕೂಡ ತಾಯಿಯ ತಮ್ಮ ಸೊಸೆ ಮದುವೆಯಲ್ಲಿ ಉಡುಗೊರೆಯಾಗಿ 1 ಕೋಟಿ 1 ಲಕ್ಷ, 11 ಸಾವಿರದ 101ರೂಪಾಯಿ ನಗದು ನೀಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ