Video Viral: ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಮೊದಲ ಪುರುಷ ರೋಬೋಟ್

ಘಟನೆಗೆ ಸಂಬಂಧಿಸಿದ 7 ಸೆಕೆಂಡ್ ಗಳ ವಿಡಿಯೋ ಇದೀಗ ವೈರಲ್ ಆಗಿದೆ. ಅದರಲ್ಲಿ, ವರದಿಗಾರ್ತಿ ರಾವ್ಯಾ ಕಸ್ಸೆಮ್, ಸಂದರ್ಶನ ಮಾಡುತ್ತಿರುವಾಗ ರೋಬೋಟ್ ಕೈ ಎತ್ತಿ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

Video Viral: ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಮೊದಲ ಪುರುಷ ರೋಬೋಟ್
ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ರೋಬೋಟ್
Follow us
ಅಕ್ಷತಾ ವರ್ಕಾಡಿ
|

Updated on: Mar 07, 2024 | 3:57 PM

ಸೌದಿ ಅರೇಬಿಯಾದ ಮೊದಲ ಪುರುಷ ಹುಮನಾಯ್ಡ್ ರೋಬೋಟ್ ‘ಮುಹಮ್ಮದ್’ ಅನ್ನು ಇತ್ತೀಚೆಗೆ ರಿಯಾದ್‌ನಲ್ಲಿ ನಡೆದ ಡೀಪ್‌ಫಾಸ್ಟ್‌ನ ಎರಡನೇ ಆವೃತ್ತಿಯಲ್ಲಿ ಅನಾವರಣಗೊಳಿಸಲಾಯಿತು. ಈ ಬಿಡುಗಡೆಯ ಸಮಯದಲ್ಲಿ ಮಹಿಳಾ ವರದಿಗಾರ್ತಿಯೊಬ್ಬಳು ರೋಬೋಟ್​ನ್ನೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದು, ಈ ವೇಳೆ ವರದಿಗಾರ್ತಿಯನ್ನು ರೋಬೋಟ್ ಅನುಚಿತವಾಗಿ ಸ್ಪರ್ಶಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಘಟನೆಗೆ ಸಂಬಂಧಿಸಿದ 7 ಸೆಕೆಂಡ್ ಗಳ ವಿಡಿಯೋ ಇದೀಗ ವೈರಲ್ ಆಗಿದೆ. ಅದರಲ್ಲಿ, ವರದಿಗಾರ್ತಿ ರಾವ್ಯಾ ಕಸ್ಸೆಮ್, ಸಂದರ್ಶನ ಮಾಡುತ್ತಿರುವಾಗ ರೋಬೋಟ್ ಕೈ ಎತ್ತಿ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಕಾಮೆಂಟ್​​ ಮೂಲಕ ಪ್ರತಿಕ್ರಿಯಿಸಿದ್ದಾರೆ. “ರೋಬೋಟ್ ‘ಮುಹಮ್ಮದ್’ಗೆ ವರದಿಗಾರ್ತಿ ಸಾಕಷ್ಟು ಹತ್ತಿರದಲ್ಲಿ ನಿಂತಿದ್ದರಿಂದ ಮುಂದೆ ಸಾಮಾನ್ಯವಾಗಿ ರೋಬೋಟ್​​ ಕೈ ಚಾಚಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಗೆ ಯಾಕೆ ಕರೆದಿಲ್ಲ?; ಮುಕೇಶ್‌ ಅಂಬಾನಿಯನ್ನು ಪ್ರಶ್ನಿಸಿದ ರಾಖಿ ಸಾವಂತ್‌

ಗಲ್ಫ್ ಬಿಸಿನೆಸ್ ವರದಿಯ ಪ್ರಕಾರ ಮೊಹಮ್ಮದ್, ಹುಮನಾಯ್ಡ್ ರೋಬೋಟ್ ಅರೇಬಿಕ್ ಭಾಷೆಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ, ಮಾತಾನಾಡಿದೆ. QSS ಸಿಸ್ಟಮ್ಸ್ ಮತ್ತು ಸಾರಾಗೆ ಪುರುಷ ಪ್ರತಿರೂಪವಾಗಿ ಅಭಿವೃದ್ಧಿಪಡಿಸಿದ ರೋಬೇಟ್​​ ಮೊಹಮ್ಮದ್ . “ನಾನು ಮುಹಮ್ಮದ್, ಮನುಷ್ಯನ ರೂಪದಲ್ಲಿನ ಮೊದಲ ಸೌದಿ ರೋಬೋಟ್. ನನ್ನನ್ನು ಸೌದಿ ಅರೇಬಿಯಾ ಸಾಮ್ರಾಜ್ಯದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಇಲ್ಲಿ ತಯಾರಿಸಿ ಅಭಿವೃದ್ಧಿಪಡಿಸಲಾಗಿದೆ” ಎಂದು ಹೇಳಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ