Video Viral: ಮದುವೆಗೆ ಯಾಕೆ ಕರೆದಿಲ್ಲ?; ಮುಕೇಶ್ ಅಂಬಾನಿಯನ್ನು ಪ್ರಶ್ನಿಸಿದ ರಾಖಿ ಸಾವಂತ್
"ಅಂಬಾನಿ ಜೀ ನನ್ನನ್ನು ಮದುವೆಗೆ ಏಕೆ ಆಹ್ವಾನಿಸಲಿಲ್ಲ? ಕರೆದರೆ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೆ. ಹಾಟ್ ಆಗಿ ಡ್ಯಾನ್ಸ್ ಮಾಡುತ್ತಿದ್ದೆ. ನಿಮ್ಮ ಮಗ ಅನಂತ್ ತುಂಬಾ ದಪ್ಪಗಿದ್ದಾನೆ.ನನ್ನ ಬಳಿಗೆ ನಿಮ್ಮ ಮಗನನ್ನು ಕಳಿಸಿ ತೆಳ್ಳಗೆ ಮಾಡಿ ಕಳಿಸುತ್ತೇನೆ ಹಾಗೂ ಎಲ್ಲಾ ರೀತಿಯಲ್ಲೂ ಸಮಾಧಾನ ಮಾಡಿ ಕಳುಹಿಸುತ್ತೇನೆ" ಎಂದು ರಾಖಿ ಹೇಳಿಕೊಂಡಿದ್ದಾಳೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಮಾರ್ಚ್ 1 ರಿಂದ 3ರ ವರೆಗೆ ಅದ್ಧೂರಿಯಾಗಿ ನಡೆದಿದೆ. ಮೂರು ದಿನಗಳ ಕಾಲ ನಡೆದ ಈ ವಿವಾಹ ಪೂರ್ವ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ರಾಮ್ ಚರಣ್, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದಲ್ಲದೇ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಸೇರಿದಂತೆ ಅನೇಕರು ಈ ಸಮಾರಂಭಕ್ಕೆ ಬಂದಿದ್ದರು. ಜೊತೆಗೆ ಹಾಲಿವುಡ್ ಪಾಪ್ ಗಾಯಕಿ ರಿಹಾನ್ನಾ ಪರ್ಫಮೆನ್ಸ್ ನೀಡಿದ್ದರು. ಇದೀಗಾ ಬಾಲಿವುಡ್ ನಟಿ ರಾಖಿ ಸಾವಂತ್ ಅಂಬಾನಿ ಮನೆಯ ಮದುವೆ ಸಮಾರಂಭಕ್ಕೆ ಕರೆದಿಲ್ಲ ಎಂಬ ಕಾರಣಕ್ಕೆ ವಿಡಿಯೋವೊಂದು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಮುಕೇಶ್ ಅಂಬಾನಿಯನ್ನೇ ರಾಖಿ ಸಾವಂತ್ ಪ್ರಶ್ನಿಸಿರುವುದನ್ನು ಕಾಣಬಹುದು.
ವಿಡಿಯೋದಲ್ಲಿ “ಅಂಬಾನಿ ಜೀ ನನ್ನನ್ನು ಮದುವೆಗೆ ಏಕೆ ಆಹ್ವಾನಿಸಲಿಲ್ಲ? ಕರೆದರೆ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೆ. ಕಸ ಗುಡಿಸುತ್ತಿದ್ದೆ, ಪಾತ್ರೆ ತೊಳೆಯುತ್ತಿದ್ದೆ, ಹಾಟ್ ಆಗಿ ಡ್ಯಾನ್ಸ್ ಮಾಡುತ್ತಿದ್ದೆ. ನೀವು ನನ್ನ ಡ್ಯಾನ್ಸ್ ನೋಡಿಲ್ಲ ಅಂತ ಅನ್ನಿಸುತ್ತೆ. ಹಾಲಿವುಡ್ ನಿಂದ ಪಾಪ್ ಸಿಂಗರ್ ಗಳನ್ನು ಕರೆದಿದ್ದೀಯ ಆದರೆ ನನ್ನ ಡಾನ್ಸ್ ಮುಂದೆ ಅವರ ಡ್ಯಾನ್ಸ್ ಏನೂ ಇಲ್ಲ. ನಿಮ್ಮ ಮಗ ಅನಂತ್ ತುಂಬಾ ದಪ್ಪಗಿದ್ದಾನೆ. ನಿಮ್ಮ ಸೊಸೆ ದಾಳಿಂಬೆಯಂತಿದ್ದಾಳೆ. ನನ್ನ ಬಳಿಗೆ ನಿಮ್ಮ ಮಗನನ್ನು ಕಳಿಸಿ ತೆಳ್ಳಗೆ ಮಾಡಿ ಕಳಿಸುತ್ತೇನೆ ಹಾಗೂ ಎಲ್ಲಾ ರೀತಿಯಲ್ಲೂ ಸಮಾಧಾನ ಮಾಡಿ ಕಳುಹಿಸುತ್ತೇನೆ” ಎಂದು ವಿಡಿಯೋ ರಾಖಿ ಹೇಳಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: Mental Abuse: ಫಸ್ಟ್ ನೈಟ್ ದಿನದಿಂದಲೇ ಗಂಡು ಮಗು ಹೆರುವಂತೆ ಅತ್ತೆ ಮಾವನಿಂದ ಕಿರುಕುಳ; ಕೋರ್ಟ್ ಮೆಟ್ಟಿಲೇರಿದ ಯುವತಿ
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಖಿ ಸಾವಂತ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗೆ ಟ್ಯಾಗ್ ಮಾಡಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ ಮಿಲಿಯನ್ ಅಂದರೆ ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ