Mental Abuse: ಫಸ್ಟ್ ನೈಟ್ ದಿನದಿಂದಲೇ ಗಂಡು ಮಗು ಹೆರುವಂತೆ ಅತ್ತೆ ಮಾವನಿಂದ ಕಿರುಕುಳ; ಕೋರ್ಟ್ ಮೆಟ್ಟಿಲೇರಿದ ಯುವತಿ
ಫಸ್ಟ್ ನೈಟ್ ದಿನದಿಂದಲೇ ಗಂಡು ಮಗು ಹೆರುವಂತೆ ಅತ್ತೆ ಹಾಗೂ ಮಾವ ಹೇಳುತ್ತಾ ಬಂದಿದ್ದಾರೆ. ಇದಕ್ಕಾಗಿ ಗಂಡು ಮಗು ಆಗುವ ಸಾಧ್ಯತೆಯನ್ನು ಹೆಚ್ಚಿಸಲು ಲೈಂಗಿಕ ಸಂಭೋಗದ ಸಮಯ ಹಾಗೂ ಗರ್ಭ ಧರಿಸುವುದು ಹೇಗೆಂದು ವಿವರವಾದ ಸೂಚನೆ' ಇರುವ ಪುಸ್ತಕವನ್ನು ಆಕೆಗೆ ನೀಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಕೊಲ್ಲಂ: ಪ್ರತೀ ಹೆಣ್ಣಿನ ಜೀವನದಲ್ಲಿ ಮದುವೆ ಎಂಬುದು ಒಂದು ವಿಶೇಷ ಘಟ್ಟ. ಏಕೆಂದರೆ ಮದುವೆಯ ನಂತರ ಹೆಣ್ಣು ತನ್ನ ಮನೆ ಕುಟುಂಬದವರನ್ನು ಬಿಟ್ಟು ತನ್ನೆಲ್ಲ ಭಾವನೆಗಳನ್ನು ಬದಿಗಿಟ್ಟು ಗಂಡನನ್ನು ನಂಬಿ ಅವರ ಮನೆಗೆ ಬರುತ್ತಾಳೆ. ಆದರೆ ಇಲ್ಲೊಬ್ಬಳು ಯುವತಿ ಪತಿಯ ಮನೆಗೆ ಬಂದ ಮೊದಲ ದಿನದಿಂದಲೇ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾ ಬಂದಿದ್ದಾಳೆ. ಫಸ್ಟ್ ನೈಟ್ ದಿನದಿಂದಲೇ ಗಂಡು ಮಗು ಹೆರುವಂತೆ ಅತ್ತೆ ಹಾಗೂ ಮಾವ ಹೇಳುತ್ತಾ ಬಂದಿದ್ದಾರೆ. ಇದಕ್ಕಾಗಿ ಗಂಡು ಮಗು ಆಗುವ ಸಾಧ್ಯತೆಯನ್ನು ಹೆಚ್ಚಿಸಲು ಲೈಂಗಿಕ ಸಂಭೋಗದ ಸಮಯ ಹಾಗೂ ಗರ್ಭ ಧರಿಸುವುದು ಹೇಗೆಂದು ವಿವರವಾದ ಸೂಚನೆ’ ಇರುವ ಪುಸ್ತಕವನ್ನು ಆಕೆಗೆ ನೀಡಲಾಗಿದೆ.
ಪ್ರಾರಂಭದಲ್ಲಿ ಅತ್ತೆ ಮಾವಂದಿರ ಆಸೆಯಂತೆ ಎಲ್ಲಾ ಷರತ್ತುಗಳಿಗೆ ಒಪ್ಪಿಕೊಂಡಿದ್ದ ಯುವತಿಗೆ, ದಿನಕಳೆದಂತೆ ಮಾನಸಿಕ ಹಿಂಸೆಯಾಗತೊಡಗಿದೆ. ಆದರೆ ಎಲ್ಲ ಪ್ರಯತ್ನಗಳ ಬಳಿಕ ಆಕೆಗೆ ಹೆಣ್ಣು ಮಗು ಜನಿಸಿದೆ. ಇದರಿಂದ ಕೋಪಗೊಂಡ ಪತಿ ಹಾಗೂ ಆತನ ಪೋಷಕರು ಆಕೆಯನ್ನು ನಿರ್ಲಕ್ಷ್ಯಿಸುತ್ತಾ ಬಂದಿದ್ದಾರೆ. ಈ ಸಂಬಂಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕೊಲ್ಲಂ ಮೂಲದ ಮಹಿಳೆ, ಮದುವೆಯ ದಿನವೇ ಗಂಡು ಮಗುವನ್ನು ಹೊಂದುವಂತೆ ಸೂಚನೆ ನೀಡಿದ್ದ ಅತ್ತೆ ಮಾವ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಇನ್ನು ಮುಂದೆ ‘ಡಾರ್ಲಿಂಗ್’ ಎಂದು ಕರೆದರೆ ಜೈಲು ಕಂಬಿ ಎಣಿಸಬೇಕಾದಿತು ಎಚ್ಚರ!
“ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ 2012ರಲ್ಲಿ ಮೂವಾಟ್ಟುಪುಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದೆ. ಗಂಡನ ಜೊತೆ ಬೇಗ ಲಂಡನ್ ಗೆ ಹೋಗಬೇಕಾದ್ದರಿಂದ ಗಂಡು ಮಗುವಿಗೆ ಜನ್ಮ ನೀಡಲು ಅತ್ತೆ ಮತ್ತು ಮಾವ ಲೈಂಗಿಕ ಸಂಭೋಗದ ಸಮಯ ಹಾಗೂ ಗರ್ಭ ಧರಿಸುವುದು ಹೇಗೆಂದು ವಿವರವಾದ ಸೂಚನೆ’ ಇರುವ ಪುಸ್ತಕವನ್ನು ನನಗೆ ನೀಡಿದ್ದರು.ಆದರೂ ಕೂಡ 2014ರಲ್ಲಿ ನಾನು ಹೆಣ್ಣು ಮಗುವಿಗೆ ಜನ್ಮನೀಡಿದ್ದೇನೆ. ಇದಾದ ಬಳಿಕ ಒಂದು ಬಾರಿ ಮಾತ್ರ ಪತಿಯ ಮನೆಯವರು ಮಗುವನ್ನು ನೋಡಲು ಬಂದಿದ್ದಾರೆ. ಇದಾದ ಬಳಿಕ ನನ್ನನ್ನು ಅವರ ಕುಟುಂಬದಿಂದ ದೂರ ಇಟ್ಟಿದ್ದಾರೆ. ಈಗ ನನ್ನ ಮಗಳು ನನ್ನ ಹೆತ್ತವರ ಆಶ್ರಯದಲ್ಲಿ ಕೊಲ್ಲಂನಲ್ಲಿದ್ದಾಳೆ” ಎಂದು ಯುವತಿ ದೂರಿನಲ್ಲಿ ಬರೆದುಕೊಂಡಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Wed, 6 March 24