Anant Ambani: ಪುತ್ರ ಅನಂತ್ನ ಮಾತಿಗೆ ತಂದೆ ಮುಕೇಶ್ ಅಂಬಾನಿ ಭಾವುಕ: ವಿಡಿಯೋ ವೈರಲ್
Anant Ambani-Radhika Merchant Pre Wedding: ಭಾರತದ ಖ್ಯಾತ ಉದ್ಯಮಿ, ಏಷ್ಯಾದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಮನೆಯಲ್ಲೀಗ ಮದುವೆ ಸಂಭ್ರಮ ಜೋರಾಗಿದೆ. ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಶುರುವಾಗಿವೆ. ಮಾರ್ಚ್ 1 ರಿಂದ 3ರವರೆಗೆ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ನಡೆದಿದ್ದು, ಈ ಸಂದರ್ಭದಲ್ಲಿ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಪುತ್ರನ ಮಾತುಗಳನ್ನು ಕೇಳಿ ಭಾವುಕರಾಗಿದ್ದಾರೆ. ಸದ್ಯ ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ಭಾರತದ ಖ್ಯಾತ ಉದ್ಯಮಿ, ಏಷ್ಯಾದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಮನೆಯಲ್ಲೀಗ ಮದುವೆ ಸಂಭ್ರಮ ಜೋರಾಗಿದೆ. ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಯ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಶುರುವಾಗಿವೆ. ಗುಜರಾತ್ನ ಜಾಮ್ನಗರದಲ್ಲಿ ಅನ್ನ ಸೇವೆಯ ಮೂಲಕ ಮದುವೆ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದ್ದಾರೆ. ಜುಲೈ 12 ರಂದು ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ವಿವಾಹ ನಡೆಯಲಿದೆ. ಇದಕ್ಕೂ ಮುನ್ನ ಮಾರ್ಚ್ 1 ರಿಂದ 3ರವರೆಗೆ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ನಡೆದಿದ್ದು, ಈ ಸಂದರ್ಭದಲ್ಲಿ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಪುತ್ರನ ಮಾತುಗಳನ್ನು ಕೇಳಿ ಭಾವುಕರಾಗಿದ್ದಾರೆ. ಸದ್ಯ ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳ ಎರಡನೇ ದಿನವಾದ ಇಂದು ಅನಂತ್ ಅಂಬಾನಿ ಈ ಸುಂದರ ಕ್ಷಣವನ್ನು ತನ್ನ ಹೆತ್ತವರಿಗೆ ಧನ್ಯವಾದ ಹೇಳಲು ಬಯಸಿದರು. ಬಾಲ್ಯದಿಂದಲೂ ಅವರು ಅನುಭವಿಸುತ್ತಿರುವ ಆರೋಗ್ಯ ಸವಾಲುಗಳ ಬಗ್ಗೆ ಮತ್ತು ಅವರ ಪೋಷಕರು ಹೇಗೆ ಅದನ್ನು ನಿಭಾಯಿಸಿದರು ಎಂಬುದರ ಕುರಿತು ಮಾತನಾಡಿದ್ದಾರೆ.
ಅನಂತ್ ಅಂಬಾನಿಯ ಭಾವುಕ ಮಾತುಗಳು
View this post on Instagram
‘ನನ್ನ ಜೀವನವು ಸಂಪೂರ್ಣ ಗುಲಾಬಿ ಹೂವುಗಳಿಂದ ತುಂಬಿರಲಿಲ್ಲ. ಮುಳ್ಳಿನ ನೋವು ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ, ಆದರೆ ನನ್ನ ತಂದೆ ಮತ್ತು ತಾಯಿ ನಾನು ಆ ನೋವು ಅನುಭವಿಸಲು ಬಿಟ್ಟಿಲ್ಲ. ಅವರು ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ಅನಂತ್ ಅಂಬಾನಿ ಭಾವುಕ ನುಡಿಗಳನ್ನಾಡಿದ್ದಾರೆ. ದೂರದಲ್ಲಿ ಪುತ್ರನ ಮಾತುಗಳನ್ನು ಕೇಳುತ್ತಿದ್ದ ಮುಕೇಶ್ ಅಂಬಾನಿಯವರು ಕೂಡ ಒಂದು ಕ್ಷಣ ಭಾವುಕರಾಗಿದ್ದಾರೆ.
ಇದನ್ನೂ ಓದಿ: Viral Post : ಅಂಬಾನಿ ಕಾರ್ಯಕ್ರಮಕ್ಕೆ ಮಾರ್ಕ್ ಜುಕರ್‌ಬರ್ಗ್ ಪತ್ನಿ ಧರಿಸಿದ ಬಟ್ಟೆಯ ಬೆಲೆ 10 ಲಕ್ಷ ರೂ.
3 ದಿನಗಳ ಕಾಲ ನಡೆಯಲಿರುವ ಈ ಅದ್ದೂರಿ ಕಾರ್ಯಕ್ರಮಕ್ಕೆ ದೇಶ-ವಿದೇಶಗಳ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಮಾರ್ಕ್ ಜುಕರ್‌ಬರ್ಗ್, ಸುಂದರ್ ಪಿಚೈ, ಬಿಲ್‌ಗೇಟ್ಸ್. ಸಚಿನ್ ತೆಂಡ್ಕೂಲರ್, ಎಂಎಸ್ ಧೋನಿ, ಸಲ್ಮಾನ್ ಖಾನ್ ಸೇರಿದಂತೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ರಂಗದ ಗಣ್ಯರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Anant Ambani: ನಯ, ವಿನಯ, ವಿಧೇಯ ಅನಂತ; ಅಣ್ಣ ರಾಮನಂತೆ, ಅಕ್ಕ ದೇವತೆಯಂತೆ; ಭಾವಿ ಪತ್ನಿ ಏನಂತೆ?
ಪ್ರಿವೆಡ್ಡಿಂಗ್ ಕಾರ್ಯಕ್ರಮಕ್ಕೂ ಮುನ್ನ ಜಾಮ್ನಗರದ ರಿಲಯನ್ಸ್ ಟೌನ್ಶಿಪ್ ಬಳಿಯ ಜೋಗ್ವಾಡ್ ಗ್ರಾಮಸ್ಥರಿಗೆ ಅನ್ನ ಸೇವೆ ಕಾರ್ಯಕ್ರಮ ನಡೆಸಲಾಗಿದೆ. ಖುದ್ದು ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಹಾಗೂ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಗ್ರಾಮದ ಜನರಿಗೆ ಗುಜರಾತಿ ಆಹಾರ ಬಡಿಸಿದರು. ಸುಮಾರು 51 ಸಾವಿರ ಮಂದಿ ಹಳ್ಳಿಗರು ಊಟದಲ್ಲಿ ಭಾಗಿಯಾಗಿ ವಿವಿಧ ಭಕ್ಷ್ಯಗಳನ್ನು ಸವಿದರು.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.