ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಂತಾನಹರಣ ಚಿಕಿತ್ಸೆ ಮಾಡಿ ವೈದ್ಯರ ಎಡವಟ್ಟು
ಈ ಕುರಿತು ಜಾರ್ಜ್ ಅವರ ವಕೀಲ ಡಿಯಾಗೋ ಲ್ಯಾರೆ ಮಾತನಾಡಿ,"ವೈದ್ಯರ ಈ ಮಟ್ಟದ ನಿರ್ಲಕ್ಷ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಯಾಕೆಂದರೆ ನನ್ನ ಕಕ್ಷಿದಾರ ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದರೂ, ಕೂಡ ಅವರು ಹೊಸ ಸಂಬಂಧದಲ್ಲಿದ್ದಾರೆ ಮತ್ತು ಭವಿಷ್ಯದಲ್ಲಿ ತಮ್ಮ ಹೊಸ ಸಂಗಾತಿಯೊಂದಿಗೆ ಮಗುವಿಗೆ ಪಡೆಯಲು ಯೋಜನೆಯನ್ನು ಹೊಂದಿದ್ದರು" ಎಂದು ಹೇಳಿಕೊಂಡಿದ್ದಾರೆ.
ಅರ್ಜೆಂಟೀನಾದ ವ್ಯಕ್ತಿಯೊಬ್ಬ ತನ್ನ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಶಸ್ತ್ರಚಿಕಿತ್ಸೆಗೆ ಮಾಡಿದ ಬಳಿಕ ಆತನಿಗೆ ಪ್ರಜ್ಞೆ ಬಂದಾಗ ವಾಸ್ತವ ವಿಷಯ ತಿಳಿದು ದಂಗಾಗಿ ಹೋಗಿದ್ದಾನೆ. ಅಷ್ಟಕ್ಕೂ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಿಸಬೇಕಿದ್ದ ವೈದ್ಯರು,ಆಕಸ್ಮಿಕವಾಗಿ ಸಂತಾನಹರಣ ಚಿಕಿತ್ಸೆ ಮಾಡಿ ಕಳುಹಿಸಿರುವುದು ವರದಿಯಾಗಿದೆ.
ಜಾರ್ಜ್ ಬೇಸೆಟೊ(41) ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ಅರ್ಜೆಂಟೀನಾದ ಕಾರ್ಡೋಬಾದಲ್ಲಿರುವ ಫ್ಲೋರೆನ್ಸಿಯೊ ಡಿಯಾಜ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಗಾಗಿ ಫೆಬ್ರವರಿ 28, ಮಂಗಳವಾರದಂದು ದಿನ ನಿಗದಿಪಡಿಸಲಾಗಿತ್ತು. ಆದರೆ ಏನೋ ಕಾರಣ ಹೇಳಿ ಶಸ್ತ್ರಚಿಕಿತ್ಸೆಯನ್ನು ಬುಧವಾರಕ್ಕೆ ಮುಂದೂಡಿದ್ದರು. ಶಸ್ತ್ರಚಿಕಿತ್ಸೆಯ ದಿನದಂದು, ಆಸ್ಪತ್ರೆಯ ಸಿಬ್ಬಂದಿ ರೋಗಿಯ ಕೋಣೆಗೆ ಬಂದು, ಅವನನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಒಂದು ವಿಷಯವನ್ನೂ ಕೇಳದೆ ಅಥವಾ ಹೆಲ್ತ್ ಚಾರ್ಟ್ ಅನ್ನು ಪರಿಶೀಲಿಸದೆ, ಅವನನ್ನು ಆಪರೇಷನ್ ಕೋಣೆಗೆ ಕರೆದೊಯ್ದದಿದ್ದಾರೆ.
ಇದನ್ನೂ ಓದಿ: ತಮ್ಮನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗಿದ ಧ್ರುವ ಸರ್ಜಾ ಪುತ್ರಿ
ಜಾರ್ಜ್ ತನ್ನ ಶಸ್ತ್ರಚಿಕಿತ್ಸೆಯಿಂದ ಎಚ್ಚರಗೊಂಡಾಗ, ಏನಾಯಿತು ಎಂದು ಅವರಿಗೆ ತಿಳಿದಿರಲಿಲ್ಲ, ಆದರೆ ನಂತರ ವೈದ್ಯರು ಅವನನ್ನು ಪರೀಕ್ಷಿಸಲು ಬಂದಾಗ ಸಂತಾನಹರಣ ಚಿಕಿತ್ಸೆ ಪೂರ್ಣಗೊಂಡಿರುವುದಾಗಿ ಕೇಳಿ ದಂಗಾಗಿ ಹೋಗಿದ್ದಾನೆ. ಇದಾದ ಬಳಿಕ ಆತನ ಸಮಸ್ಯೆಗೆ ಮತ್ತೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಈ ಕುರಿತು ಜಾರ್ಜ್ ಅವರ ವಕೀಲ ಡಿಯಾಗೋ ಲ್ಯಾರೆ ಮಾತನಾಡಿ,”ವೈದ್ಯರ ಈ ಮಟ್ಟದ ನಿರ್ಲಕ್ಷ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಯಾಕೆಂದರೆ ನನ್ನ ಕಕ್ಷಿದಾರ ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದರೂ, ಕೂಡ ಅವರು ಹೊಸ ಸಂಬಂಧದಲ್ಲಿದ್ದಾರೆ ಮತ್ತು ಭವಿಷ್ಯದಲ್ಲಿ ತಮ್ಮ ಹೊಸ ಸಂಗಾತಿಯೊಂದಿಗೆ ಮಗುವಿಗೆ ಪಡೆಯಲು ಯೋಜನೆಯನ್ನು ಹೊಂದಿದ್ದರು” ಎಂದು ಹೇಳಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ