ಕಾಣೆಯಾದ ಮಗುವನ್ನು ಹುಡುಕಲು ಪೊಲೀಸರಿಗೆ ಸಹಾಯವಾದ ಕಾರ್ಟೂನ್ ಮ್ಯೂಸಿಕ್
"ದುರದೃಷ್ಟವಶಾತ್ ಕಟ್ಟಡಕ್ಕೆ ಹಾಗೂ ಲಿಫ್ಟ್‌ಗೆ ಅಳವಡಿಸಲಾಗಿದ್ದ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲ್ಲಿಲ್ಲ. ಆದ್ದರಿಂದ ಮಗು ಹೊರಗೆ ಹೋಗಿದ್ದಾನೆಯೇ ಅಥವಾ ಮನೆಯೊಳಗೆಯೇ ಇದ್ದಾನೆಯೇ? ಎಂದು ನಮಗೆ ತಿಳಿಯಲು ಸಾಧ್ಯವಾಗಲಿಲ್ಲ" ಎಂದು ಪೊಲೀಸ್ ಅಧಿಕಾರಿ ಕ್ಸು ಹೇಳಿದ್ದಾರೆ.
ಆಗ್ನೇಯ ಚೀನಾದ ಜಿಯಾಂಗ್ಕ್ಸಿ ಪ್ರಾಂತ್ಯದ ‘ಲು’ ಎಂಬ ಹೆಸರಿನ ಎಂಟು ವರ್ಷದ ಮಗು ಫೆಬ್ರವರಿ 16 ರಂದು ಕಾಣೆಯಾಗಿತ್ತು. ಆಟಿಸಂನಿಂದ (ಬೆಳವಣಿಗೆಯ ಅಸ್ವಸ್ಥತೆಯಾಗಿದ್ದು ಅದು ಸಂವಹನ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ) ಬಳಲುತ್ತಿದ್ದ ಈ ಮಗುವನ್ನು ಪೋಷಕರು ಸಾಕಷ್ಟು ಸಮಯದ ವರೆಗೆ ಇಡೀ ಮನೆಯೆಲ್ಲಾ ಹುಡುಕಾಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಗಾಬರಿಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ವಿಶೇಷತೆ ಏನೆಂದರೆ ಪೆಪ್ಪಾ ಪಿಗ್ ಕಾರ್ಟೂನ್ ಮ್ಯೂಸಿಕ್ ಮೂಲಕ ಪೊಲೀಸರು ಸಲೀಸಾಗಿ ಮಗು ಇರುವ ಜಾಗವನ್ನು ಪತ್ತೆ ಹಚ್ಚಿದ್ದಾರೆ.
ಕಾಣೆಯಾಗಿರುವ ಮಗುವನ್ನು ಪತ್ತೆ ಹಚ್ಚಲು ಪೊಲೀಸರ ತಂಡವೊಂದನ್ನು ರಚಿಸಿ, ಪ್ರಾರಂಭದಲ್ಲಿ ಮನೆಯೆಲ್ಲಾ ಹುಡುಕಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ. “ದುರದೃಷ್ಟವಶಾತ್ ಕಟ್ಟಡಕ್ಕೆ ಹಾಗೂ ಲಿಫ್ಟ್‌ಗೆ ಅಳವಡಿಸಲಾಗಿದ್ದ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲ್ಲಿಲ್ಲ. ಆದ್ದರಿಂದ ಮಗು ಹೊರಗೆ ಹೋಗಿದ್ದಾನೆಯೇ ಅಥವಾ ಮನೆಯೊಳಗೆಯೇ ಇದ್ದಾನೆಯೇ? ಎಂದು ನಮಗೆ ತಿಳಿಯಲು ಸಾಧ್ಯವಾಗಲಿಲ್ಲ” ಎಂದು ಪೊಲೀಸ್ ಅಧಿಕಾರಿ ಕ್ಸು ಹೇಳಿದ್ದಾರೆ.
ಇದನ್ನೂ ಓದಿ: ತಮ್ಮನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗಿದ ಧ್ರುವ ಸರ್ಜಾ ಪುತ್ರಿ
ಕಡೆಗೆ ಪೋಷಕರಿಂದ ಮಗುವಿಗೆ ಪೆಪ್ಪಾ ಪಿಗ್ ಕಾರ್ಟೂನ್ ನೋಡುವುದು ತುಂಬಾ ಇಷ್ಟ ಎಂದು ಪೊಲೀಸರಿಗೆ ತಿಳಿದುಬಂದಿದೆ. ಇದರಿಂದ ಮನೆಯ ಮಹಡಿಯ ಮೇಲೆ ಪೆಪ್ಪಾ ಪಿಗ್ ಕಾರ್ಟೂನ್ ಥೀಮ್ ಸಾಂಗ್ ಅನ್ನು ಪ್ಲೇ ಮಾಡಲಾಗಿದೆ. ಸ್ವಲ್ಪ ಸಮಯದಲ್ಲೇ ಮಗುವಿನ ಧ್ವನಿ ಕೇಳಿಸಿದೆ. ಮೆಟ್ಟಿಲುಗಳ ಹತ್ತಿರದ ಮೂರು ಮೀಟರ್ ಎತ್ತರದ ಗೋಡೆಯ ಹಿಂದೆ ಮಗು ಸಿಕ್ಕಿ ಬಿದ್ದಿರುವುದನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ