AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ತಮ್ಮನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗಿದ ಧ್ರುವ ಸರ್ಜಾ ಪುತ್ರಿ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮುದ್ದಿನ ಮಗಳು ರುದ್ರಾಕ್ಷಿ ತನ್ನ ತಮ್ಮ ಹಯಗ್ರೀವನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಮೂರು ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಲೈಕ್​​ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video Viral: ತಮ್ಮನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗಿದ ಧ್ರುವ ಸರ್ಜಾ ಪುತ್ರಿ
ಧ್ರುವ ಸರ್ಜಾ ಅವರ ಮುದ್ದಿನ ಮಗಳು ರುದ್ರಾಕ್ಷಿImage Credit source: instagram
ಅಕ್ಷತಾ ವರ್ಕಾಡಿ
|

Updated on: Mar 02, 2024 | 12:53 PM

Share

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಲ ತಿಂಗಳುಗಳ ಹಿಂದಷ್ಟೇ ತಮ್ಮ ಎರಡನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ.  ಎರಡೂ ಮಕ್ಕಳ ಕ್ಯೂಟ್​​ ಕ್ಯೂಟ್​​ ವಿಡಿಯೋಗಳನ್ನು ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಶೇರ್​​​ ಮಾಡುತ್ತಿರುತ್ತಾರೆ. ಇದೀಗ ಮಗಳ ಮುದ್ದಾದ ಲಾಲಿ ಹಾಡಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದು,ಆ್ಯಕ್ಷನ್ ಪ್ರಿನ್ಸ್ ಪುತ್ರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಸೆಪ್ಟೆಂಬರ್ 18 ರಂದು ಗಣೇಶ ಹಬ್ಬದಂದು ಪ್ರೇರಣಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದ ದಿನವೇ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ತಮ್ಮ ಮಕ್ಕಳ ನಾಮಕರಣವನ್ನು ನೆರವೇರಿಸಿದ್ದರು. ಮಗಳಿಗೆ ‘ರುದ್ರಾಕ್ಷಿ ಡಿ ಸರ್ಜಾ’ ಹಾಗೂ ಮಗನಿಗೆ ‘ಹಯಗ್ರೀವ ಡಿ ಸರ್ಜಾ’ ಎಂದು ಮಕ್ಕಳಿಗೆ ನಾಮಕರಣ ಮಾಡಿದ್ದರು. ಇದೀಗಾ ರುದ್ರಾಕ್ಷಿ ತನ್ನ ತಮ್ಮ ಹಯಗ್ರೀವನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗುತ್ತಿರುವ ವಿಡಿಯೋ ವೈರಲ್​​​ ಆಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಈ ಹೆಡ್​​ ಪೋನ್​​ ಬೆಲೆ ಕೇಳಿದ್ರೆ ನೀವು ಶಾಕ್​​ ಆಗುವುದಂತೂ ಖಂಡಿತಾ

ವಿಡಿಯೋದಲ್ಲಿ ಹಯಗ್ರೀವ ತೊಟ್ಟಿಲ್ಲಲ್ಲಿ ಮಲಗಿರುವುದನ್ನು ಕಾಣಬಹುದು. ಮಗಳು ರುದ್ರಾಕ್ಷಿ ತೊಟ್ಟಿಲ ಬಳಿ ನಿಂತು ತಮ್ಮನಿಗೆ ಲಾಲಿ ಹಾಡಿ ಮಲಗಿಸುತ್ತಾ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಮೂರು ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಲೈಕ್​​ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ