AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆಗೆ ರೆಡಿಯಾದ 13ರ ಬಾಲಕ, ಮೊದ್ಲು ಮದುವೆ ಆಮೇಲೆ ಓದು

ಬಾಲಕಿಯನ್ನು ಮದುವೆಯಾಗಲು ಅವಕಾಶ ನೀಡಿದರೆ ಮಾತ್ರ ಓದು ಮುಂದುವರಿಸುವುದಾಗಿ ಹುಡುಗ ಹಠ ಹಿಡಿದಿದ್ದು, ಇದರಿಂದ ಕುಟುಂಬಸ್ಥರು ನಿಶ್ಚಿತಾರ್ಥ ಮಾಡಿಸಿದ್ದಾರೆ ಎಂದು ವರದಿಯಾಗಿದೆ. @salaam_pakistan ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

Viral Video: ಮದುವೆಗೆ ರೆಡಿಯಾದ 13ರ ಬಾಲಕ, ಮೊದ್ಲು ಮದುವೆ ಆಮೇಲೆ ಓದು
ಅಕ್ಷತಾ ವರ್ಕಾಡಿ
| Edited By: |

Updated on: Apr 27, 2024 | 5:16 PM

Share

ಪಾಕಿಸ್ತಾನದ ನಿಶ್ಚಿತಾರ್ಥದ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಿಶ್ಚಿತಾರ್ಥದ ವಿಶೇಷತೆ ಏನೆಂದರೆ ವರನಿಗೆ ಹದಿಮೂರು ಮತ್ತು ವಧುವಿಗೆ ಹನ್ನೆರಡು ವರ್ಷ.  13 ವರ್ಷದ ಬಾಲಕ ಮತ್ತು 12 ವರ್ಷದ ಬಾಲಕಿ ವಿವಾಹವಾಗಲು ಮುಂದಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದೇಶದಲ್ಲಿ ಮದುವೆಗೆ ಕನಿಷ್ಠ ವಯಸ್ಸಿನ ಕಾನೂನು ನಿರ್ಬಂಧಗಳ ಹೊರತಾಗಿಯೂ, ಎರಡು ಕುಟುಂಬಗಳ ಒಪ್ಪಿಗೆಯಿಂದಲೇ ಈ ಪುಟ್ಟ ಮಕ್ಕಳಿಗೆ ನಿಶ್ಚಿತಾರ್ಥ ಮಾಡಲಾಗಿದೆ.  “ನನಗೆ ಮದುವೆ ಮಾಡಿಸಿದರೆ ಮಾತ್ರ ನಾನು ಸ್ಕೂಲಿಗೆ ಹೋಗುವೆ” ಎಂದು ಪಟ್ಟು ಹಿಡಿದು ಕೂತಿದ್ದರಿಂದ ಬಾಲಕನ ಆಸೆಯಂತೆ ಮದುವೆ ಮಾಡಿಸಲು ಮುಂದಾಗಿದ್ದೇವೆ ಎಂದು ಪೋಷಕರು ಹೇಳಿಕೊಂಡಿರುವುದು ವರದಿಯಾಗಿದೆ.

ಬಾಲಕಿಯನ್ನು ಮದುವೆಯಾಗಲು ಅವಕಾಶ ನೀಡಿದರೆ ಮಾತ್ರ ಓದು ಮುಂದುವರಿಸುವುದಾಗಿ ಹುಡುಗ ಹಠ ಹಿಡಿದಿದ್ದು, ಇದರಿಂದ ಕುಟುಂಬಸ್ಥರು ನಿಶ್ಚಿತಾರ್ಥ ಮಾಡಿಸಿದ್ದಾರೆ ಎಂದು ವರದಿಯಾಗಿದೆ. @salaam_pakistan ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ.”ಹುಡುಗನ ತಂದೆ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಮಗ ಮದುವೆಯಾಗಲು ಪಟ್ಟು ಹಿಡಿದಿದ್ದಾನೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. “ಇದು ನಿಜವಲ್ಲ.ಅವರು ಕಂಟೆಂಟ್ ಕ್ರಿಯೇಟರ್, ಮೊದಲೇ ಪ್ಲಾನ್​ ಮಾಡಿ ವಿಡಿಯೋ ಮಾಡಲಾಗಿದೆ” ಎಂದು ಕಾಮೆಂಟ್​​ನಲ್ಲಿ ಮತ್ತೊಬ್ಬರು ಬರೆದುಕೊಂಡಿದ್ದಾರೆ. ಆದರೆ ಈ ವಿಡಿಯೋ ಎಷ್ಟು ನಿಜ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ