Viral Video: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ

ಈ ಜಗತ್ತಿನಲ್ಲಿ ಜನರನ್ನು ಅಚ್ಚರಿಗೊಳಿಸುವ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ. ಇಂತಹ ಹಲವು ವಿಷಯಗಳ ಕುರಿತ  ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.  ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಆಂಧ್ರಪ್ರದೇಶದ ಸಾಯಿ ತಿರುಮಲ ನಿಧಿ ಎಂಬವರು ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ, ಈ ಮೂಲಕ  ವಿಶ್ವ ದಾಖಲೆಯನ್ನು ಬರೆದಿದ್ದಾರೆ. 

Viral Video: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ
ವೈರಕ್​​ ವಿಡಿಯೋ ಇಲ್ಲಿದೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 23, 2024 | 12:45 PM

ಶ್ರಮ ಮತ್ತು ಸಮಯ ಎರಡನ್ನೂ ಉಳಿಸುವುದಕ್ಕಾಗಿ ಇಂದಿನ ಬಿಡುವಿಲ್ಲದ ಜೀವನದಲ್ಲಿ ಪ್ರತಿಯೊಬ್ಬರೂ ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್ ಗಳನ್ನೇ ಬಳಸುತ್ತಿದ್ದಾರೆ.  ಈಗೀಗ ಮಾರುಕಟ್ಟೆಯಲ್ಲಿ ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್, ಸೆಮಿ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಸೇರಿದಂತೆ  ಹಾಗೂ ಅವುಗಳ ಸುಲಭ ಬಳಕೆಗಾಗಿ  ವಿವಿಧ ಬಗೆಯ ಪ್ರೋಗ್ರಾಮ್ ಗಳೊಂದಿಗೆ ಎಲ್.ಇ.ಡಿ ಕಂಟ್ರೋಲ್ ಪ್ಯಾನಲ್ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ವಾಷಿಂಗ್ ಮೆಷಿನ್ ಗಳು ಲಭ್ಯವಿದೆ. ಹೀಗೆ ನೀವು ಅತ್ಯಾಧುನಿಕ ತಂತ್ರಜ್ಞಾನಗಳನ್ನೆಲ್ಲಾ ಒಳಗೊಂಡಿರುವ ವಾಷಿಂಗ್ ಮೆಷಿನ್ ಗಳನ್ನು ನೋಡಿರುತ್ತೀರಿ ಅಲ್ವಾ. ಆದರೆ ಎಂದಾದರೂ ವಿಶ್ವದ ಅತೀ ಚಿಕ್ಕ ವಾಷಿಂಗ್ ಮೆಷಿನ್ ಅನ್ನು ನೋಡಿದ್ದೀರಾ? ಹಾಗಿದ್ದರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ.

ಆಂಧ್ರಪ್ರದೇಶದ ನಿವಾಸಿ ಸಾಯಿ ತಿರುಮಲ ನಿಧಿ ಎಂಬವರು ಈ ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸುವ ಮೂಲಕ  ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಸಾಯಿ ತಿರುಮಲ ನಿಧಿ ಅವರು ತಯಾರಿಸಿದ ಈ ವಾಷಿಂಗ್ ಮೆಷಿನ್  1.45 × 1.61 × 1.69 (37 mm × 41mm × 43mm) ಇಂಚಿನದ್ದಾಗಿದೆ. ಈ ಕುರಿತ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (@guinnssworldrecords) ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ  ಸಾಯಿ ತಿರುಮಲ ನಿಧಿ ಅವರು ಪುಟ್ಟ ವಾಷಿಂಗ್ ಮೆಷಿನ್ ಅನ್ನು ತಯಾರಿಸಿ ಬಳಿಕ ಆ ಮೆಷಿನ್ ಗೆ ಒಂದು ಸಣ್ಣ ತುಂಡು ಬಟ್ಟೆ,  ಡಿಟೆರ್ಜಂಟ್ ಪೌಡರ್ ಮತ್ತು ನೀರನ್ನು ಹಾಕಿ ಈ ವಾಷಿಂಗ್ ಮೆಷಿನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತೋರಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯವಾಗಲೆಂದು ಪೊಲೀಸ್​​​ ವೇಷ ತೊಟ್ಟು ಬಂದ ಅಣ್ಣ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಮೂರುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಹೆಮ್ಮೆಯ ವಿಷಯʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇರುವೆಗಳಿಗೆ ಬಟ್ಟೆ ತೊಳೆಯಲು ಈ ಹುಡುಗ ವಾಷಿಂಗ್ ಮೆಷಿನ್ ತಯಾರಿಸಿದ್ದಾನೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ವಾಷಿಂಗ್ ಮೆಷಿನ್ ತುಂಬಾ ಮುದ್ದಾಗಿದೆʼ ಎಂದು ಹೇಳಿದ್ದಾರೆ.  ಇನ್ನೂ ಅನೇಕರು ಈ ಯುವಕನ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Fri, 23 February 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ