Viral Video: ಮಾಜಿ ಪ್ರಿಯಕರನಿಗೆ 2 ಕೋಟಿ ರೂ. ಮೌಲ್ಯದ ಕಾರು ಗಿಫ್ಟ್ ಕೊಟ್ಟ ಯುವತಿ
ಸಾಮಾಜಿಕ ಜಾಲತಾಣ ಪ್ರಭಾವಿ ಅನ್ನಾ ಪೌಲ್ ಇನ್ಸ್ಟಾಗ್ರಾಮ್ನಲ್ಲಿ 24ಲಕ್ಷ ಫಾಲೋವರ್ಸ್ಗಳನ್ನು ಹೊಂದಿದ್ದಾಳೆ. ಇತ್ತೀಚೆಗಷ್ಟೇ ಈಕೆ ತನ್ನ ಮಾಜಿ ಪ್ರಿಯಕರನಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಬೆಲೆ ಬಾಳುವ ಐಷಾರಾಮಿ ಕಾರನ್ನು ಗಿಫ್ಟ್ ಆಗಿ ನೀಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಒಮ್ಮೆ ಪ್ರೇಮಿಗಳ ನಡುವೆ ಬಿರುಕು ಉಂಟಾದರೆ ಪರಸ್ಪರ ದ್ವೇಷ ಹೆಚ್ಚುತ್ತಾ ಹೋಗುತ್ತದೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ಮಾಜಿ ಪ್ರಿಯಕರನಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಬೆಲೆ ಬಾಳುವ ಐಷಾರಾಮಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾಳೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿದ್ದಾಳೆ. ಇಂತಹ ಮಾಜಿ ಪ್ರಿಯತಮೆ ನನಗೂ ಇರಬೇಕಿತ್ತು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಪ್ರಭಾವಿ ಅನ್ನಾ ಪೌಲ್ ಎಂಬ ಯುವತಿ ತನ್ನ ಮಾಜಿ ಪ್ರಿಯಕರನಿಂದ ಬೇರ್ಪಟ್ಟ ನಂತರ ಆತನಿಗೆ ದುಬಾರಿ ಉಡುಗೊರೆ ನೀಡಿ ಸುದ್ದಿಯಲ್ಲಿದ್ದಾಳೆ. ಮಾಜಿ ಪ್ರಿಯಕರನಿಗೆ 2 ಕೋಟಿ ರೂ. ಮೌಲ್ಯದ ಕಾರು ಗಿಫ್ಟ್ ಕೊಟ್ಟ ವಿಡಿಯೋವನ್ನು ಆಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅನ್ನಾ ಪೌಲ್ ಹಂಚಿಕೊಂಡ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯವಾಗಲೆಂದು ಪೊಲೀಸ್ ವೇಷ ತೊಟ್ಟು ಬಂದ ಅಣ್ಣ
ಪ್ರೀತಿ ಮುರಿದು ಬಿದ್ದರೂ ಕೂಡ ಇವರಿಬ್ಬರ ನಡುವಿನ ಸಂಬಂಧ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಗೊಂದಲಕ್ಕೀಡುಮಾಡಿದೆ. ಯಾಕೆಂದರೆ ಕಳೆದ ಎಂಟು ವರ್ಷಗಳ ಕಾಲ ಡೇಟಿಂಗ್ ಮಾಡಿ ಆಗಸ್ಟ್ 2023 ರಲ್ಲಿ ಇವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿತ್ತು. ಇದೀಗಾ ಮತ್ತೆ ಒಂದಾಗಿ ಎಂದು ಅಭಿಮಾನಿಗಳು ತಮ್ಮ ಆಸೆಯನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Fri, 23 February 24