ಊದಿಕೊಂಡ ಮುಖದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಮೂಗಿನೊಳಗಿತ್ತು 150 ಹುಳುಗಳು
ಫೆಬ್ರವರಿ 9 ರಂದು ಆಸ್ಪತ್ರೆಗೆ ಭೇಟಿ ನೀಡಿದಾಗ ಸಮಸ್ಯೆ ಉಲ್ಬಣಗೊಂಡಿರುವುದು ವೈದ್ಯರಿಂದ ತಿಳಿದುಬಂದಿದೆ. ತಜ್ಞ ಡಾ. ಡೇವಿಡ್ ಕಾರ್ಲ್ಸನ್ ಸಂಪೂರ್ಣ ಪರೀಕ್ಷೆ ನಡೆಸಿದಾಗ ಮೂಗಿನೊಳಗೆ 150ಕ್ಕೂ ಅಧಿಕ ಹುಳುಗಳ ಮೊಟ್ಟೆ ಪತ್ತೆಯಾಗಿದೆ.
ವ್ಯಕ್ತಿಯೊರ್ವನ ಮೂಗಿನೊಳಗಿನಿಂದ ವೈದ್ಯರು 150ಕ್ಕೂ ಅಧಿಕ ಹುಳುಗಳ ಮೊಟ್ಟೆಯನ್ನು ಹೊರತೆಗೆದಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಕಳೆದ ಅಕ್ಟೋಬರ್ ತಿಂಗಳಿನಿಂದ ಮೂಗಿನ ರಕ್ತಸ್ರಾವ ಹಾಗೂ ತಲೆ ನೋವಿನಿಂದ ಬಳಲುತ್ತಿದ್ದ ಈತ ಸೈನಸ್ ಎಂದು ನಿರ್ಲಕ್ಷ್ಯಿಸುತ್ತಾ ಬಂದಿದ್ದಾನೆ. ಆದರೆ ತಿಂಗಳುಗಳ ಹಿಂದೆ ಮುಖ, ಕಣ್ಣು ಊದಿಕೊಳ್ಳಲು ಪ್ರಾರಂಭವಾಗಿದೆ. ಇದರಿಂದಾಗಿ ಫೆಬ್ರವರಿ 9 ರಂದು HCA ಫ್ಲೋರಿಡಾ ಸ್ಮಾರಕ ಆಸ್ಪತ್ರೆಗೆ ಭೇಟಿ ನೀಡಿದಾಗ ಸಮಸ್ಯೆ ಉಲ್ಬಣಗೊಂಡಿರುವುದು ವೈದ್ಯರಿಂದ ತಿಳಿದುಬಂದಿದೆ. ತಜ್ಞ ಡಾ. ಡೇವಿಡ್ ಕಾರ್ಲ್ಸನ್ ಸಂಪೂರ್ಣ ಪರೀಕ್ಷೆ ನಡೆಸಿದಾಗ ಮೂಗಿನೊಳಗೆ 150ಕ್ಕೂ ಅಧಿಕ ಹುಳುಗಳ ಮೊಟ್ಟೆ ಪತ್ತೆಯಾಗಿದೆ.
ಕೆಲವು ನಸುಗೆಂಪು ಬೆರಳಿನ ತುದಿಯಷ್ಟು ದೊಡ್ಡದಾದ ಕೀಟಗಳು ಆಹಾರ ನೀಡುತ್ತಿದ್ದವು. ಕೆಲವು ಅಂಗಾಂಶದೊಳಗೆ ಬಿಲ ವಿಸರ್ಜನೆ ಮತ್ತು ಉರಿಯೂತವನ್ನು ಉಂಟುಮಾಡುತ್ತವೆ. ಇದರಿಂದ ಮುಖ ಊದಿಕೊಳ್ಳಲು ಪ್ರಾರಂಭವಾಗಿ ಪ್ರಾಣಕ್ಕೂ ಅಪಾಯವನ್ನುಂಟು ಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ
ಆಸ್ಪತ್ರೆಯ ವೈದ್ಯಕೀಯ ತಂಡವು ಆತನ ಮೂಗಿನೊಳಗಿನಿಂದ 150ಕ್ಕೂ ಅಧಿಕ ಹುಳುಗಳ ಮೊಟ್ಟೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸಾ ಕೊಠಡಿಯಿಂದ ಗ್ರಾಫಿಕ್ ಫೂಟೇಜ್ ಲಾರ್ವಾಗಳ ಹೊರತೆಗೆಯುವಿಕೆಯನ್ನು ಬಹಿರಂಗಪಡಿಸಿತು, ಇದು ಮೆದುಳಿನ ಕೆಳಗಿರುವ ತಲೆಬುರುಡೆಯ ತಳಕ್ಕೆ ಅಪಾಯಕಾರಿಯಾಗಿ ಹತ್ತಿರದಲ್ಲಿತ್ತು ಎಂದು ವೈದ್ಯರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ