AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಯಿ, ಬೆಕ್ಕಿನಂತೆ ನೊಣಕ್ಕೂ ಟ್ರೈನಿಂಗ್ ಕೊಡ್ತಾರೆ ಈ ವ್ಯಕ್ತಿ; ವಿಡಿಯೋ ವೈರಲ್​​

ನೊಣವನ್ನು ಸಾಕುಪ್ರಾಣಿಯನ್ನಾಗಿ ಮಾಡಿ ತನ್ನ ಇಚ್ಛೆಯಂತೆ ಅದಕ್ಕೆ ತರಬೇತಿ ನೀಡುತ್ತಿರುವ ವ್ಯಕ್ತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​​ ಆಗಿದೆ. ವೀಡಿಯೊದಲ್ಲಿ ನೊಣವು ಹಾರುತ್ತಾ ವ್ಯಕ್ತಿ ಹೇಳಿದಂತೆ ಮಾಡುತ್ತಿರುವುದನ್ನು ಕಾಣಬಹುದು. ಕೇವಲ 20 ಸೆಕೆಂಡ್ ಗಳ ಈ ವೀಡಿಯೋ ಇದುವರೆಗೆ 3.9 ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ.

Viral Video: ನಾಯಿ, ಬೆಕ್ಕಿನಂತೆ ನೊಣಕ್ಕೂ ಟ್ರೈನಿಂಗ್ ಕೊಡ್ತಾರೆ ಈ ವ್ಯಕ್ತಿ; ವಿಡಿಯೋ ವೈರಲ್​​
ನೊಣಕ್ಕೂ ಟ್ರೈನಿಂಗ್Image Credit source: Pinterest
ಅಕ್ಷತಾ ವರ್ಕಾಡಿ
|

Updated on:Feb 05, 2024 | 12:16 PM

Share

ಸಾಮಾನ್ಯವಾಗಿ ನಾಯಿ ಬೆಕ್ಕುಗಳಿಗೆ ತರಬೇತಿ ನೀಡುವುದನ್ನು ನೀಡುವುದನ್ನು ನೀಡು ನೋಡಿರುತ್ತೀರಿ, ಆದ್ರೆ ನೊಣಗಳಿಗೂ ತರಬೇತಿ ನೀಡಬಹುದೆಂದು ನೀವು ಎಂದಾದರೂ ಊಹಿಸಿದ್ದೀರಾ? ಇದೀಗಾ ವ್ಯಕ್ತಿಯೊಬ್ಬ ನೊಣಕ್ಕೆ ಟ್ರೈನಿಂಗ್​ ಕೊಟ್ಟು ತನಗೆ ಬೇಕಾದಂತೆ ನೊಣವನ್ನು ಕುಣಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಈ ವಿಡಿಯೋ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ. ವೀಡಿಯೊದಲ್ಲಿ ನೊಣವು ಹಾರುತ್ತಾ ವ್ಯಕ್ತಿ ಹೇಳಿದಂತೆ ಮಾಡುತ್ತಿರುವುದನ್ನು ಕಾಣಬಹುದು. ಇದು ಹೇಗೆ ಸಾಧ್ಯ ಅಂತಾ ನಿಮಗೂ ಯೋಚನೆ ಬರುವುದಂತೂ ಖಂಡಿತಾ.

ವಾಸ್ತವವಾಗಿ, ಈ ವೀಡಿಯೊದಲ್ಲಿ, ವ್ಯಕ್ತಿಯ ಸಿಗ್ನಲ್‌ಗಳ ಆಧಾರ ಮೇಲೆ ನೊಣವು ಹಾರುವುದು ಮತ್ತು ಅಲ್ಲಿಂದ ಇಲ್ಲಿಗೆ ಓಡಾಡುತ್ತಿರುವುದು ಕಾಣಬಹುದು. ಆ ವ್ಯಕ್ತಿ ನೊಣವನ್ನು ಸಾಕುಪ್ರಾಣಿಯನ್ನಾಗಿ ಮಾಡಿ ತನ್ನ ಇಚ್ಛೆಯಂತೆ ಅದಕ್ಕೆ ತರಬೇತಿ ನೀಡಿದಂತಿದೆ. ನೊಣವು ಪ್ಲಾಸ್ಟಿಕ್ ಟೋಕನ್ ಮೇಲೆ ಕುಳಿತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು ಮತ್ತು ವ್ಯಕ್ತಿಯು ಸನ್ನೆ ಮಾಡಿ ತನ್ನ ಬೆರಳಿನ ಬಳಿ ಬರುವಂತೆ ಕೇಳುತ್ತಾನೆ. ಆಗ ನೊಣ ಬೇಗನೆ ಅವನ ಬೆರಳಿನ ಬಳಿ ಹೋಗುತ್ತದೆ. ನಂತರ ಆ ಟೋಕನ್ ಅನ್ನು ಮುಂದಕ್ಕೆ ತಳ್ಳುತ್ತಾ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ಈ ವೀಡಿಯೊವನ್ನು @TheFigen ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 20 ಸೆಕೆಂಡ್ ಗಳ ಈ ವೀಡಿಯೋವನ್ನು ಇದುವರೆಗೆ 39 ಮಿಲಿಯನ್ ಅಂದರೆ 3.9 ಕೋಟಿಗೂ ಹೆಚ್ಚು ನೆಟ್ಟಿಗರನ್ನು ತಲುಪಿದೆ. ಜೊತೆಗೆ 2 ಲಕ್ಷ 47 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಸಾಕಷ್ಟು ನೆಟ್ಟಿಗರು ಈ ವ್ಯಕ್ತಿಯ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:15 pm, Mon, 5 February 24