Pigeon: ಗೂಢಚಾರಿಕೆ ಆರೋಪದಡಿ ಪೊಲೀಸ್ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ
ಗೂಢಚಾರಿಕೆ ಆರೋಪದಡಿ ಕಳೆದ ವರ್ಷ ಮೇ ತಿಂಗಳಿನಿಂದ ಪೊಲೀಸ್ ವಶದಲ್ಲಿದ್ದ ಪಾರಿವಾಳವನ್ನು ಕಡೆಗೂ ಬಿಡುಗಡೆಗೊಳಿಸಲಾಗಿದೆ. ಪಾರಿವಾಳವನ್ನು ಅನಗತ್ಯವಾಗಿ ಸೆರೆಹಿಡಿಯಲಾಗಿದೆ ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದೀಗ ಪಾರಿವಾಳವನ್ನು ಬಿಡುಗಡೆಗೊಳಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚೀನಾದ ಗೂಢಚಾರಿ ಎಂಬ ಆರೋಪದಡಿ ಎಂಟು ತಿಂಗಳ ಹಿಂದೆ ಪೊಲೀಸ್ ಕಸ್ಟಡಿಯಲ್ಲಿದ್ದ ಪಾರಿವಾಳವನ್ನು ಕಡೆಗೂ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಮುಂಬೈ ಬಂದರಿನಲ್ಲಿ ಪಾರಿವಾಳವೊಂದು ಅನುಮಾನಾಸ್ಪದವಾಗಿ ಕಾಣಿಸಿಕೊಂಡಿತ್ತು. ಇದಲ್ಲದೇ ಪಾರಿವಾಳದ ಕಾಲಿನಲ್ಲಿ 2 ಉಂಗುರಗಳು ಕಾಣಿಸಿಕೊಂಡಿದ್ದು, ಈ ಎರಡೂ ಉಂಗುರಗಳ ಮೇಲೆ ಚೈನೀಸ್ ಅಕ್ಷರಗಳಲ್ಲಿ ಏನೋ ಬರೆದಿದ್ದರಿಂದ ಪಾರಿವಾಳದ ಮೂಲಕ ಚೀನಾ ದೇಶ ಬೇಹುಗಾರಿಕೆ ನಡೆಸುತ್ತಿರಬಹುದು ಎಂದು ಶಂಕಿಸಿ ಪೊಲೀಸರು ಪಾರಿವಾಳವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಆದರೆ ಇಲ್ಲಿಯವರೆಗೆ ಪಾರಿವಾಳ ಎಲ್ಲಿಂದ ಬಂತು ಎಂಬುದರ ಕುರಿತು ಸುದೀರ್ಘ ತನಿಖೆ ನಡೆಸಲಾಗಿದ್ದರೂ ಕೂಡ ಏನು ಪ್ರಯೋಜನವಾಗಿಲ್ಲ.
ಗೂಢಚಾರಿಕೆ ಆರೋಪದಡಿ ಬಂಧಿಯಾಗಿದ್ದ ಪಾರಿವಾಳವನ್ನು ಬಿಡುಗಡೆಗೊಳಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. OfficialPETAIndia ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋ ಇದೀಗಾ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: ಹೆಣ್ಣಿನ ಕುರುಹು ಕಾಣದ ವಿಚಿತ್ರ ಗ್ರಾಮವಿದು; ಏನಿದು ‘ವರ್ಜಿನ್ ವಿಲೇಜ್’?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಪಾರಿವಾಳವನ್ನು ಅನಗತ್ಯವಾಗಿ ಸೆರೆಹಿಡಿಯಲಾಗಿದೆ ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪಾರಿವಾಳವನ್ನು ಸ್ವತಂತ್ರಗೊಳಿಸಲು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಇದೀಗಾ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಪಾರಿವಾಳವು ಯಾವುದೇ ಬೇಹುಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಪಾರಿವಾಳವನ್ನು ಪಂಜರದಿಂದ ಬಿಡಿಸಿ ಹೊರಗೆ ಬಿಡಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Sat, 3 February 24