AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದಾಹ ನೀಗಿಸಲು ಬಂದ ಚಿರತೆಯ ಮೇಲೆರಗಿದ ಮೊಸಳೆ; ಮುಂದೆನಾಯ್ತು ನೋಡಿ

ವನ್ಯ ಜೀವಿಗಳಿಗೆ ಸಂಬಂಧಿಸಿದ ವಿಡಿಯೋಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತವೆ. ಅವುಗಳಲ್ಲಿ ಪ್ರಾಣಿಗಳ ನಡುವಿನ ಘೋರ ಕಾಳಗದ ಕೆಲವೊಂದು ವಿಡಿಯೋಗಳು ತುಂಬಾ ಭಯಾನಕವಾಗಿರುತ್ತವೆ. ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಸರೋವರದ ಬಳಿ ದಾಹ ನೀಗಿಸಲು ಬಂದಂತಹ ಚಿರತೆಯನ್ನೇ ಮೊಸಳೆಯೊಂದು ನುಂಗಿ ನೀರು ಕುಡಿದಿದೆ.

Viral Video: ದಾಹ ನೀಗಿಸಲು ಬಂದ   ಚಿರತೆಯ ಮೇಲೆರಗಿದ  ಮೊಸಳೆ; ಮುಂದೆನಾಯ್ತು ನೋಡಿ
A crocodile attacked a leopard Image Credit source: Pinterest
ಮಾಲಾಶ್ರೀ ಅಂಚನ್​
| Edited By: |

Updated on: Feb 04, 2024 | 5:37 PM

Share

ವನ್ಯ ಲೋಕದಲ್ಲಿ ಬೇಟೆಗಾಗಿ ಪ್ರಾಣಿಗಳ ನಡುವೆ ಪರಸ್ಪರ ಕಾದಾಟಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಹೊಂಚು ಹಾಕಿ ಬೇಟೆಯಾಡುವುದೆಂದರೆ ಹುಲಿ, ಚಿರತೆ ಮುಂತಾದ ಬಲಿಷ್ಠ ಜೀವಿಗಳಿಗೆ ಬಲು ಸುಲಭ. ಅದರಲ್ಲೂ ಚಿರತೆಗಳು ಬೇಟೆಯಲ್ಲಿ ಪಳಗಿದ ಪ್ರಾಣಿಗಳು. ಅವುಗಳು ಗುರಿ ಇಟ್ಟು ಬೇಟೆಗಿಳಿದರೆ ಅದರಲ್ಲಿ ವಿಫಲವಾಗುವುದು ಬಹಳ ಕಡಿಮೆ. ಆದರೆ ಇಲ್ಲೊಂದು ಚಿರತೆ ಮಾತ್ರ ದುರಾದೃಷ್ಟವಶಾತ್ ಮೊಸಳೆಯ ದಾಳಿಗೆ ಬಲಿಯಾಗಿದೆ. ಹೌದು ಸರೋವರದ ಬಳಿ ದಾಹ ತಣಿಸಿಕೊಳ್ಳಲೆಂದು ಬಂದಂತಹ ಚಿರತೆಯನ್ನು ಮೊಸಳೆಯೊಂದು ಹೊಂಚು ಹಾಕಿ ಬೇಟೆಯಾಡಿದೆ. ಈ ಭಯಾನಕ ಶಿಕಾರಿಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚಿರತೆ ಮಾತ್ರವಲ್ಲ ನೀರಿನಲ್ಲಿರುವ ಮೊಸಳೆಗಳು ಕೂಡಾ ಹೊಂಚು ಹಾಕಿ ಬೇಟೆಯಾಡುವುದರಲ್ಲಿ ಎತ್ತಿದ ಕೈ. ಈ ಮೊಸಳೆಗಳು ಸರೋವರ, ನದಿ, ಕೆರೆಯ ಬಳಿ ನೀರು ಕುಡಿಯಲು ಬರುವಂತಹ ದೈತ್ಯ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಈಗ ಅದೇ ರೀತಿ ದೈತ್ಯ ಮೊಸಳೆಯೊಂದು ಸರೋವರದ ಬಳಿ ದಾಹ ತಣಿಸಿಕೊಳ್ಳಲು ಬಂದಂತಹ ಚಿರತೆಯನ್ನೇ ನುಂಗಿ ನೀರು ಕುಡಿದಿದೆ. ಈ ವೈರಲ್ ವಿಡಿಯೋವನ್ನು @TheBrutalNature ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಬಾಯಾರಿದ ಚಿರತೆಯೊಂದು ದಾಹ ತಣಿಸಲು ಸರೋವರದ ಬಳಿ ಬರುವ ದೃಶ್ಯವನ್ನು ಕಾಣಬಹುದು. ಅತ್ತ ಸರೋವರದಲ್ಲಿದ್ದ ಮೊಸಳೆ ಇವತ್ತಿನ ಆಹಾರಕ್ಕೆ ಯಾವುದಾದರೂ ಪ್ರಾಣಿ ಸಿಗುತ್ತಾ ಅಂತ ಹೊಂಚು ಹಾಕುತ್ತಾ ಕಾದು ಕುಳಿತಿತ್ತು. ಅಷ್ಟರಲ್ಲಿ ಈ ಚಿರತೆ, ನೀರು ಕುಡಿಯಲು ಸರೋವರಕ್ಕೆ ಇಳಿದೇ ಬಿಡುತ್ತೆ. ಇದೇ ಬೇಟೆಗೆ ಒಳ್ಳೆ ಕ್ಷಣ ಎಂದು ಭಾವಿಸಿದ ಮೊಸಳೆ ಚಿರತೆಯ ಮೇಲೆರಗಿ, ಅದರ ಕುತ್ತಿಗೆಯನ್ನು ಕಚ್ಚಿಹಿಡಿದು ನೀರಿಗೆ ಎಳೆದೊಯ್ದು ಬಂದಿದೆ. ಜೀವ ಉಳಿಸುವ ಸಲುವಾಗಿ ಚಿರತೆ ಹೋರಾಡಿದರೂ, ಜಯಿಸದೆ ಮೊಸಳೆಯ ಬಾಯಿಗೆ ಆಹಾರವಾಗಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡಂತಹ ಮೊಸಳೆಗೆ ಆಹಾರವಾದ ಚಿರತೆಯ ಸಂಗಾತಿ ದುಃಖತಪ್ತವಾಗಿ ಕುಳಿತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ಫೆಬ್ರವರಿ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಮೂರು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ದೃಶ್ಯ ಕಾಣಲು ತುಂಬಾ ಭಯಾನಕವಾಗಿದೆʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬೇಟೆಗಾರನನ್ನೇ ಬೇಟೆಯಾಡಿದ ಮೊಸಳೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಕ್ರೇಜಿಯಾಗಿದೆʼ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?