Viral: ಹರಾಜಿನಲ್ಲಿ 1.4 ಲಕ್ಷ ರೂ.ಗೆ ಮಾರಾಟವಾದ ಲಿಂಬೆಹಣ್ಣು; ಏನಿದರ ವಿಶೇಷತೆ?
ಇಂಗ್ಲೆಂಡಿನಲ್ಲಿ ಒಂದು ಲಿಂಬೆ ಹಣ್ಣು 1.4 ಲಕ್ಷ ರೂ ಗೆ ಹರಾಜಿನ ಮೂಲಕ ಮಾರಾಟವಾಗಿದೆ. ಈ ನಿಂಬೆ 19 ನೇ ಶತಮಾನದಷ್ಟು ಹಳೆಯದಾಗಿದ್ದು, ಇಂಗ್ಲೆಂಡಿನ ಕುಟುಂಬವೊಂದು ಇದನ್ನು ಪತ್ತೆಹಚ್ಚಿದೆ.ಈ ಲಿಂಬೆಗೆ ಯಾಕಿಷ್ಟು ಬೆಲೆ? ಏನಿದರ ವಿಶೇಷತೆ? ಇಲ್ಲಿದೆ ನೋಡಿ ವೈರಲ್ ಪೋಸ್ಟ್
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಖರೀದಿಸುವಾಗ 5ರೂ. ಒಂದು ಲಿಂಬೆ ಅಥವಾ ಕೆಲವೊಮ್ಮೆ 10 ರೂಪಾಯಿಗೆ 3 ಲಿಂಬೆಯನ್ನು ಅಂಗಡಿಯವರು ಕೊಡುವುದುಂಟು. ಆದರೆ 1.4 ಲಕ್ಷ ರೂಪಾಯಿ ಬೆಲೆ ಬಾಳುವ ಲಿಂಬೆ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದೀಗಾ ಇಂಗ್ಲೆಂಡಿನಲ್ಲಿ ಒಂದು ಲಿಂಬೆ ಹಣ್ಣು 1.4 ಲಕ್ಷ ರೂ. ಗೆ ಹರಾಜಿನ ಮೂಲಕ ಮಾರಾಟವಾಗಿದೆ. ಆದರೆ ಒಂದು ಲಿಂಬೆ ಹಣ್ಣು ಅಷ್ಟೊಂದಯ ದುಬಾರಿ ಏಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಕಾಣಬಹುದು. ಆದ್ದರಿಂದ ಈ ಲಿಂಬೆಗೆ ಯಾಕಿಷ್ಟು ಬೆಲೆ? ಏನಿದರ ವಿಶೇಷತೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇಲ್ಲಿದೆ ನೋಡಿ ದುಬಾರಿ ನಿಂಬೆಹಣ್ಣು:
View this post on Instagram
ಈ ನಿಂಬೆ 19 ನೇ ಶತಮಾನದಷ್ಟು ಹಳೆಯದು. ಇಂಗ್ಲೆಂಡಿನ ಕುಟುಂಬವೊಂದು ಈ ನಿಂಬೆ ಹಣ್ಣನ್ನು ಪತ್ತೆಹಚ್ಚಿದೆ. ವರದಿಗಳ ಪ್ರಕಾರ ಇದು 1739ನೇ ಕಾಲದ್ದು, ಜೊತೆಗೆ ನಿಂಬೆಹಣ್ಣಿನ ಮೇಲೆ ಸಂದೇಶಗಳನ್ನು ಬರೆದಿದ್ದು,ಮಿಸ್ ಇ. ಬ್ಯಾಕ್ಸ್ಟರ್‌ಗೆ , ಪಿ. ಲ್ಯೂ ಫ್ರಾಂಚಿನಿ ಅವರು ನವೆಂಬರ್ 3, 1739 ರಂದು ಉಡುಗೊರೆಯಾಗಿ ನೀಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ
ಬ್ರೆಟೆಲ್ ಹರಾಜು ಹೌಸ್ ಮಾಲೀಕ ಡೇವಿಡ್ ಬ್ರೆಟೆಲ್ ಈ ನಿಂಬೆ ಹಣ್ಣನ್ನು ಹರಾಜಿಗೆ ಇಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಅದನ್ನು ಯಾರು ಖರೀದಿಸುತ್ತಾರೆ? ಎಂಬ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ಜನವರಿ 31 ರಂದು ಶತಮಾನದಷ್ಟು ಹಳೆಯದಾದ ಈ ನಿಂಬೆಹಣ್ಣು $1,780 ಅಂದರೆ ಭಾರತದ ಕರೆನ್ಸಿಯ ಪ್ರಕಾರ ಸುಮಾರು 1.4 ಲಕ್ಷ ರೂ. ಗೆ ಮಾರಾಟವಾಯಿತು. ಬ್ರೆಟಲ್ಸ್ ಹರಾಜು ಹೌಸ್ ಇದನ್ನು ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗಪಡಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Sun, 4 February 24