Andhra Pradesh: ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಮಗು ಸಾವು
ನಿಂಬೆಹಣ್ಣು ಮಗುವಿನ ಜೀವವನ್ನೇ ಬಲಿ ತೆಗೆದುಕೊಂಡಿದೆ. ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಪುಟ್ಟ ಹಸುಗೂಸು ಸಾವನ್ನಪ್ಪಿರುವ ಘಟನೆ ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲದ ಮಲ್ಲೇನಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಆಂಧ್ರಪ್ರದೇಶ: ಮದುವೆಯಾಗಿ 7 ವರ್ಷಗಳ ವರೆಗೆ ಮಕ್ಕಳಿಲ್ಲ ಎಂಬ ದು:ಖದಲ್ಲಿದ್ದ ದಂಪತಿಗೆ 8 ತಿಂಗಳ ಹಿಂದೆ ಹೆಣ್ಣು ಮಗುವೊಂದರ ಜನನವಾಗಿದೆ. ಇನ್ನೇನು ತಮ್ಮ ಎಲ್ಲಾ ಕಷ್ಟಗಳು ಮುಗಿದು ಮಗುವಿನೊಂದಿಗೆ ಸುಖ ಜೀವನ ನಡೆಸಬೇಕು ಅನ್ನುವಷ್ಟರಲ್ಲಿ ದಂಪತಿಗಳ ಜೀವನದಲ್ಲಿ ಆಘಾತವೇ ಎದುರಾಗಿದೆ. ನಿಂಬೆಹಣ್ಣು ಮಗುವಿನ ಜೀವವನ್ನೇ ಬಲಿ ತೆಗೆದುಕೊಂಡಿದೆ. ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಪುಟ್ಟ ಹಸುಗೂಸು ಸಾವನ್ನಪ್ಪಿರುವ ಘಟನೆ ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲದ ಮಲ್ಲೇನಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲ ಮಲ್ಲೇನಿಪಲ್ಲಿಯ ಸಾಕಿದೀಪ ಮತ್ತು ಗೋವಿಂದರಾಜ್ ಅವರ ಹೆಣ್ಣು ಮಗು ಜಸ್ವಿತಾ (9 ತಿಂಗಳು). ಮನೆಯ ಜಗುಳಿಯಲ್ಲಿ ಆಟವಾಡುತ್ತಿದ್ದ ಮಗು ಜಗುಲಿಯ ಮೇಲೆ ಬಿದ್ದ ನಿಂಬೆಹಣ್ಣನ್ನು ಬಾಯಿಗೆ ಹಾಕಿಕೊಂಡಿದೆ. ಇದನ್ನು ಗಮನಿಸಿದ ತಾಯಿ ಕೂಡಲೇ ಅದನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಮಗು ಅದಾಗಲೇ ನುಂಗಿದ್ದರಿಂದ ಲಿಂಬೆ ಹಣ್ಣು ಗಂಟಲಲ್ಲಿ ಸಿಕ್ಕಿಕೊಂಡಿದ್ದು, ಉಸಿರಾಟದ ತೊಂದರೆ ಉಂಟಾಗಿದೆ.
ಇದನ್ನೂ ಓದಿ: 3 ಲಕ್ಷಕ್ಕೂ ಹೆಚ್ಚು ನಗದು ಹೊಂದಿದ್ದ ನೋಟಿನ ಕಂತನ್ನು ಹರಿದು ತಿಂದ ಸಾಕು ನಾಯಿ
ತಕ್ಷಣ ಪೆದವಡುಗೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆದರೆ, ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮಗುವಿನ ಸಾವಿನ ಸುದ್ದಿ ದಂಪತಿಗಳಿಗೆ ಆಘಾತವನ್ನುಂಟು ಮಾಡಿದೆ. ಮದುವೆಯಾಗಿ 7 ವರ್ಷಗಳ ಬಳಿಕ ದೇವರ ವರಪ್ರಸಾದವೆಂದು ನಂಬಿದ್ದ ಈ ಪುಟ್ಟ ಮಗುವಿನ ಸಾವು ಇಡೀ ಕುಟುಂಬವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Thu, 11 January 24