3 ಲಕ್ಷಕ್ಕೂ ಹೆಚ್ಚು ನಗದು ಹೊಂದಿದ್ದ ನೋಟಿನ ಕಂತನ್ನು ಹರಿದು ತಿಂದ ಸಾಕು ನಾಯಿ
ಮನೆಯಲ್ಲಿಟ್ಟಿದ್ದ $4,000 (3,32,640.80 ರೂಪಾಯಿ) ನಾಪತ್ತೆಯಾಗಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಾಕು ನಾಯಿ ನೋಟುಗಳನ್ನು ಜಗಿಯುತ್ತಿರುವುದು ಕಂಡು ಬಂದಿದೆ. ಸಾಕಷ್ಟು ನೋಟುಗಳನ್ನು ಜಗಿದು ತಿಂದಿದ್ದು, ಉಳಿದದ್ದನ್ನು ಚೂರು ಚೂರಾಗಿ ಹರಿದು ಹಾಕಿದೆ.
ಮನೆಯಲ್ಲಿ ಇಟ್ಟಿದ್ದ ನಗದು ಕಾಣಿಯಾಗಿದೆ. ದಂಪತಿಗಳು ಮನೆ ಇಡೀ ಹುಡುಕಿದರೂ ದುಡ್ಡಿನ ಕಂತು ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಮನೆಯ ಮೂಲೆಯಲ್ಲಿ ಹರಿದು ಚೂರು ಚೂರಾಗಿ ಹೋಗಿದ್ದ ನೋಟುಗಳು ಪತ್ತೆಯಾಗಿವೆ. ದುಡ್ಡಿನ ಕಂತೆಯನ್ನು ಆಟದ ಸಾಮಾನು ಎಂದು ತಿಳಿದ ಮನೆಯ ಸಾಕು ನಾಯಿ ಹರಿದು ತಿಂದು ಹಾಕಿದೆ. ಮುದ್ದಿನಿಂದ ಸಾಕಿದ ನಾಯಿಯನ್ನು ಹೊಡೆಯಲಾಗದೆ ಮಾಲೀಕರು ದಿಕ್ಕು ತೋಚದ ಸ್ಥಿತಿಯಲ್ಲಿ ಕುಳಿತ್ತಿದ್ದಾರೆ. ಕಡೆಗೆ ಚೂರು ಚೂರಾದ ನೋಟಿನ ಜೊತೆಗೆ, ನಾಯಿ ನುಂಗಿದ್ದ ನೋಟುಗಳನ್ನು ವಾಪಸ್ ಪಡೆಯಲು ದಂಪತಿಗಳು ವಿಚಿತ್ರ ಮಾರ್ಗವನ್ನು ಆಯ್ದುಕೊಂಡಿದ್ದಾರೆ.
ಪೆನ್ಸಿಲ್ವೇನಿಯಾದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮನೆಯಲ್ಲಿಟ್ಟಿದ್ದ $4,000 (3,32,640.80 ರೂಪಾಯಿ) ನಾಪತ್ತೆಯಾಗಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರ ಸಾಕು ನಾಯಿ ನೋಟುಗಳನ್ನು ಜಗಿಯುತ್ತಿರುವುದು ಕಂಡು ಬಂದಿದೆ. ಸಾಕಷ್ಟು ನೋಟುಗಳನ್ನು ಜಗಿದು ತಿಂದಿದ್ದು, ಉಳಿದದ್ದನ್ನು ಚೂರು ಚೂರಾಗಿ ಹರಿದು ಹಾಕಿದೆ. ನಾಯಿ ಕರೆನ್ಸಿ ನೋಟುಗಳನ್ನು ತಿಂದು ಉಳಿದ ನೋಟುಗಳನ್ನು ಹರಿದು ಹಾಕಿರುವುದನ್ನು ಅರಿತ ದಂಪತಿ ಕೂಡಲೇ ತಮ್ಮ ನಾಯಿಯನ್ನು ಪಶುವೈದ್ಯರ ಬಳಿ ಕರೆದೊಯ್ದಿದ್ದಾರೆ. ಬಳಿಕ ಬ್ಯಾಂಕ್ಗೆ ತೆರಳಿದ ದಂಪತಿಗಳು ಘಟನೆಯನ್ನು ವಿವರಿಸಿದ್ದಾರೆ. ನೋಟುಗಳ ಕ್ರಮಸಂಖ್ಯೆ ಸಿಕ್ಕರೆ ಬ್ಯಾಂಕ್ ಗೆ ಜಮಾ ಮಾಡಬಹುದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ದಂಪತಿಗಳು ಹರಿದ ನೋಟುಗಳನ್ನು ಹುಡುಕತೊಡಗಿದ್ದು,ಇದಕ್ಕಾಗಿ ನಾಯಿಯ ಮಲ ಮತ್ತು ವಾಂತಿ ಎತ್ತಿಕೊಂಡು ಅದರಲ್ಲಿ ನೋಟುಗಳನ್ನು ಹುಡುಕತೊಡಗಿದ್ದಾರೆ. ಬಳಿಕ ಆ ನೋಟುಗಳನ್ನು ಸ್ವಚ್ಛಗೊಳಿಸಿ ನೋಟುಗಳನ್ನು ಜೋಡಿಸಿದ್ದಾರೆ.
View this post on Instagram
ಇದನ್ನೂ ಓದಿ: ಮೋಸ ಮಾಡಿದ ಪ್ರಿಯಕರನ ಮೇಲೆ ಸೇಡು ತೀರಿಸಿಕೊಂಡ ಯುವತಿ; ಸರ್ಕಾರದಿಂದ ಸಿಕ್ತು ಬಂಪರ್ ಆಫರ್
ಹಲವು ಗಂಟೆಗಳ ಹರಸಾಹಸದ ನಂತರ ದಂಪತಿಗೆ 3,550 ಡಾಲರ್ (2 ಲಕ್ಷದ 95 ಸಾವಿರದ 137 ರೂ.) ಮೌಲ್ಯದ ನೋಟುಗಳು ಸಿಕ್ಕಿವೆ. ಕೆಲವು ನೋಟುಗಳ ಕ್ರಮಸಂಖ್ಯೆಗಳನ್ನು ಸಂಗ್ರಹಿಸಲಾಗಿದೆ. ಈ ವಿಡಿಯೋವನ್ನು ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ನಾಯಿಯ ಮಲದಲ್ಲಿ ನೋಟುಗಳನ್ನು ಹುಡುಕುತ್ತಿರುವುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ