Viral Video: ಬಾಯಿಂದ ಬಾಯಿಗೆ ಉಸಿರು ಕೊಟ್ಟು ಊಸರವಳ್ಳಿಯ ಜೀವ ಉಳಿಸಿದ ವ್ಯಕ್ತಿ; ವಿಡಿಯೋ ವೈರಲ್
ಸಾಮಾನ್ಯವಾಗಿ ಹಲ್ಲಿ, ಜಿರಳೆ, ಈ ಊಸರವಳ್ಳಿಯಂತಹ ಜೀವಿಗಳನ್ನು ನೋಡಿದಾಗ 'ಛೀ.......' ಅಂತ ಅನ್ನುವವರೇ ಹೆಚ್ಚು. ಇದಲ್ಲದೇ ಇವುಗಳನ್ನು ನೋಡಿ ಹೆದರಿ ಓಡಿ ಹೋಗುವವರು ಇದ್ದಾರೆ. ಆದ್ರೆ ಇಲ್ಲೊಬ್ಬರು ಬಾಯಿಂದ ಬಾಯಿಗೆ ಉಸಿರು ನೀಡಿ ಊಸರವಳ್ಳಿಗೆ ಮರುಜೀವ ನೀಡಿದ್ದಾರೆ.
ಸಾಮಾಜಿಕ ಜಾಲತಾಣ (Social Media) ದಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಕೆಲವೊಂದು ವಿಡಿಯೋಗಳು ನೆಟ್ಟಿಗರ ಮನ ಗೆಲ್ಲುತ್ತದೆ. ಅಂತದ್ದೇ ವಿಡಿಯೋ ಒಂದು ಇದೀಗಾ ಎಲ್ಲೆಡೆ ವೈರಲ್ ಆಗಿದೆ. ಹೌದು ರಸ್ತೆ ಬದಿಯಲ್ಲಿ ಸತ್ತ ರೀತಿಯಲ್ಲಿ ಬಿದ್ದಿದ್ದ ಊಸರವಳ್ಳಿಗೆ(Chameleon) ಸಿಪಿಆರ್ ನೀಡಿ ರಕ್ಷಿಸಿದ ವಿಡಿಯೋ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral) ಆಗಿದೆ. ಸಾಮಾನ್ಯವಾಗಿ ಹಲ್ಲಿ, ಜಿರಳೆ, ಈ ಊಸರವಳ್ಳಿಯಂತಹ ಜೀವಿಗಳನ್ನು ನೋಡಿದಾಗ ‘ಛೀ…….’ ಅಂತ ಅನ್ನುವವರೇ ಹೆಚ್ಚು. ಇದಲ್ಲದೇ ಇವುಗಳನ್ನು ನೋಡಿ ಹೆದರಿ ಓಡಿ ಹೋಗುವವರು ಇದ್ದಾರೆ. ಆದ್ರೆ ಇಲ್ಲೊಬ್ಬರು ಬಾಯಿಂದ ಬಾಯಿಗೆ ಉಸಿರು ನೀಡಿ ಊಸರವಳ್ಳಿಗೆ ಮರುಜೀವ ನೀಡಿದ್ದಾರೆ. ಹೃದಯ ಬಡಿತ ನಿಲ್ಲಿಸಿ ಹೆಣದಂತಿದ್ದ ಈ ಜೀವಿಗೆ ಮರು ಜೀವ ನೀಡಿ ತನ್ನ ಮನೆಯಲ್ಲಿಯೇ ಸಾಕು ಪ್ರಾಣಿಯಂತೆ ಮುದ್ದಾಗಿ ಸಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ‘ಮಾನವೀಯತೆ ಇನ್ನೂ ಭೂಮಿಯ ಮೇಲೆ ಅಸ್ತಿತ್ವದಲ್ಲಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಸಿಪಿಆರ್ ನೀಡಿ ಊಸರವಳ್ಳಿಯ ಜೀವ ಉಳಿಸಿದ ವೈರಲ್ ವಿಡಿಯೋ ಇಲ್ಲಿದೆ ನೋಡಿ:
He is amazing!pic.twitter.com/IVdDqn14pU
— Figen (@TheFigen_) October 10, 2023
ಇದನ್ನೂ ಓದಿ: 5 ಕೋಟಿ ರೂ ಬೆಲೆಯ ವಿಶ್ವದ ಅತ್ಯಂತ ದುಬಾರಿ ಹಾಸಿಗೆ; ಇದರ ವಿಶೇಷತೆ ಏನು ಗೊತ್ತಾ?
@TheFigen_ ಎಂಬ ಟ್ವಿಟರ್(‘X’) ಬಳಕೆದಾರರು ಈ ವಿಡಿಯೋವನ್ನು ಅಕ್ಟೋಬರ್ 10 ರಂದು ಹಂಚಿಕೊಂಡಿದ್ದು, ಇದೀಗಾಗಲೇ ಕೇವಲ 2ದಿನಗಳಲ್ಲಿ 8.1 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಸಿಪಿಆರ್ ನೀಡುವ ಮೂಲಕ ಸತ್ತ ಜೀವವನ್ನು ಉಳಿಸಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆ ವ್ಯಕ್ತಿ ತನ್ನ ಕೈಗಳಿಂದ ಬಲವಾಗಿ ಊಸರವಳ್ಳಿಯ ಎದೆಯನ್ನು ಪಂಪ್ ಮಾಡುತ್ತಲೇ ಇರುತ್ತಾರೆ. ಇದಾದ ಬಳಿಕ ಅವರು ತನ್ನ ಬಾಯಿಂದ ಅದರ ಬಾಯಿಗೆ ಉಸಿರು ನೀಡಿ , ಕೊನೆಗೆ ಪ್ರಥಮ ಚಿಕಿತ್ಸೆ ನೀಡಿ ಆ ಜೀವಿಗೆ ಮರುಜೀವವನ್ನು ನೀಡಿರುವುದನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: