ಶಾಪಿಂಗ್ ಮಾಲ್ನಲ್ಲಿ ಆ್ಯಡ್ ಬೋರ್ಡ್ನಲ್ಲಿರುವ ಬಾಲಿವುಡ್ ಹೀರೋ ದಿಢೀರ್ ಮಾತನಾಡತೊಡಗಿದರೆ? ಟೈಟಾನ್ ಐಪ್ಲಸ್ ಜಾಹೀರಾತು ಪರಿಗೆ ಜನರು ಅಚ್ಚರಿ
Titan Eye+ Ad: ಶಾಪಿಂಗ್ ಮಾಲ್ನಲ್ಲಿದ್ದವರು ಆಯುಷ್ಮಾನ್ ಖುರಾನ ದಿಢೀರನೇ ಮಾತನಾಡತೊಡಗಿದಾಗ ಶಾಕ್ ಆಗುವುದು, ಬಾಲಿವುಡ್ ನಟ ಟೈಟಾನ್ ಐಪ್ಲಸ್ ಉತ್ಪನ್ನಗಳ ಬಗ್ಗೆ ಲೈವ್ ಆಗಿಯೇ ಪರಿಚಯ ಮಾಡುವುದು, ಜನರ ಜೊತೆ ಲೈವ್ ಆಗಿ ಸಂವಾದ ನಡೆಸುವುದು, ಇವೆಲ್ಲವನ್ನೂ ಬಹಳ ಜಾಣತನದಿಂದ ಟೈಟಾನ್ ಐಪ್ಲಸ್ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ. ಕನ್ನಡಕದ ಕಂಪನಿ ಟೈಟಾನ್ನ 6 ವಿವಿಧ ಉತ್ಪನ್ನಗಳನ್ನು ಏಕಕಾಲದಲ್ಲಿ ಲಾಂಚ್ ಮಾಡಲು ಈ ತಂತ್ರ ಅನುಸರಿಸಲಾಗಿದೆ.
ಮುಂಬೈ, ಅಕ್ಟೋಬರ್ 11: ಸಿನಿಮಾದಂತೆ ಜಾಹೀರಾತು ಕೂಡ ಸದಾ ಕಾಲ ಪರಿವರ್ತನೆ ಹೊಂದಬೇಕಾದ ಕ್ಷೇತ್ರ. ವಿಭಿನ್ನ ವಿಧಾನಗಳ ಮೂಲಕ ಜನರನ್ನು ಸೆಳೆಯಲು ಜಾಹೀರಾತುದಾರರು ಯತ್ನಿಸುತ್ತಿರುತ್ತಾರೆ. ದಶಕಗಳ ಹಿಂದೆ ಇದ್ದ ಜಾಹೀರಾತು ವಿಧಾನ ಈಗ ಇರಲ್ಲ. ಕೆಲ ಜಾಹೀರಾತುಗಳನ್ನು (Advertisements) ನೋಡಲೇ ಒಂದು ಸೊಗಸು, ಅಷ್ಟು ನಾವೀನ್ಯತೆಯಿಂದ ಕೂಡಿರುತ್ತವೆ. ಇತ್ತೀಚೆಗೆ ಆರಂಭಗೊಂಡ ಟೈಟಾನ್ ಐ+ ಸಂಸ್ಥೆಯ ಜಾಹೀರಾತುಗಳು ಇದಕ್ಕೆ ನಿದರ್ಶನ. ಬಾಲಿವುಡ್ ಹೀರೋ ಆಯುಷ್ಮಾನ್ ಖುರಾನ (Ayushmann Khurrana) ಭಾಗಿಯಾಗಿರುವ ಟೈಟಾನ್ ಐ+ (Titan Eye+) ಜಾಹೀರಾತುಗಳ ಬಹಳ ಮಂದಿಯ ಗಮನ ಸೆಳೆಯುತ್ತಿವೆ. ಶಾಪಿಂಗ್ ಮಾಲ್ನಲ್ಲಿ ಊಹ್ ಮಾಲ್ ಕಿಯೋಸ್ಕ್ನಲ್ಲಿ (OOH Mall Kiosk) ಜಾಹೀರಾತಿನಂತಿದ್ದ ಫಲಕದಲ್ಲಿ ನಟ ಅಲ್ಲಿ ಎದುರಿಗಿದ್ದ ಜನರ ಜೊತೆ ಲೈವ್ ಆಗಿ ಮಾತನಾಡತೊಡಗಿದಾಗ ಹೇಗಿದ್ದೀತು? ಟೈಟಾನ್ ಐ+ ಜಾಹೀರಾತು ಇಂಥದ್ದೊಂದು ಘಟನೆಗಳನ್ನು ರೆಕಾರ್ಡ್ ಮಾಡಿ ಆ್ಯಡ್ ಕೆಂಪೇನ್ ಮಾಡುತ್ತಿದೆ.
ಮುಂಬೈನ ಫೀನಿಕ್ಸ್ ಮಾಲ್ನಲ್ಲಿ (Phoenix Mall) ಈ ದೃಶ್ಯಗಳನ್ನು ಜಾಹೀರಾತಿಗಾಗಿ ಚಿತ್ರೀಕರಿಸಲಾಗಿದೆ. ಶಾಪಿಂಗ್ ಮಾಲ್ನಲ್ಲಿದ್ದವರು ಆಯುಷ್ಮಾನ್ ಖುರಾನ ದಿಢೀರನೇ ಮಾತನಾಡತೊಡಗಿದಾಗ ಶಾಕ್ ಆಗುವುದು, ಬಾಲಿವುಡ್ ನಟ ಟೈಟಾನ್ ಐಪ್ಲಸ್ ಉತ್ಪನ್ನಗಳ ಬಗ್ಗೆ ಲೈವ್ ಆಗಿಯೇ ಪರಿಚಯ ಮಾಡುವುದು, ಜನರ ಜೊತೆ ಲೈವ್ ಆಗಿ ಸಂವಾದ ನಡೆಸುವುದು, ಇವೆಲ್ಲವನ್ನೂ ಬಹಳ ಜಾಣತನದಿಂದ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ: Viral Video: ಇಂಡಿಯನ್ ಐಡಲ್; ಆಡಿಷನ್ನಲ್ಲಿ ಶ್ರೇಯಾ ಘೋಷಾಲ್ ಅತ್ತಿದ್ದು ಈ ಕಾರಣಕ್ಕೆ
ಊಹ್ ಮಾಲ್ ಕಿಯೋಸ್ಕ್ನಲ್ಲಿ ಈ ರೀತಿ ಲೈವ್ ಆಗಿ ಮಾತನಾಡಲು ಅವಕಾಶ ಇದೆ. ಮುಂಬೈನ ಫೀನಿಕ್ಸ್ ಮಾಲ್ನಲ್ಲಿ ಇಂತಹ ಕಿಯೋಸ್ಕ್ ಇದೆ. ಟೈಟಾನ್ ಕಂಪನಿಯ ಟೈಟಾನ್ ಐ+ ಬ್ರ್ಯಾಂಡ್ನಲ್ಲಿ ಸ್ಮಾರ್ಟ್ಗ್ಲಾಸ್, ಲಕ್ಷುರಿ ಐಗ್ಲಾಸ್ ಇತ್ಯಾದಿ ಆರು ಉತ್ಪನ್ನಗಳನ್ನು ಏಕಕಾಲದಲ್ಲಿ ಈ ಜಾಹೀರಾತು ಅಭಿಯಾನದ ಮೂಲಕ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಓಜಿಲ್ವಿ ಎಂಬ ಆ್ಯಡ್ ಸಂಸ್ಥೆ ಈ ಜಾಹೀರಾತಿನ ಸೂತ್ರಧಾರ ಎನಿಸಿದೆ. ‘ಈ ಜಾಹೀರಾತು ರೂಪಿಸುವಾಗ ಬಹಳಷ್ಟು ಮೋಜು ಸಿಕ್ಕಿತು. ಒಮ್ಮೆಗೇ ಐದು ವಿಭಿನ್ನ ಉತ್ಪನ್ನಗಳನ್ನು ನಾವು ಬಿಡುಗಡೆ ಮಾಡಬೇಕಿತ್ತು. ಒಂದು ರೀತಿಯಲ್ಲಿ ಕುತೂಹಲ ಮೂಡಿಸುವ ರೀತಿ ಜಾಹೀರಾತು ಇರಬೇಕಿತ್ತು. ಹೀಗಾಗಿ, ತಂತ್ರಜ್ಞಾನ ಮತ್ತು ಕ್ರಿಯಾಶೀಲತೆಯನ್ನು ಬೆಸೆದೆವು’ ಎಂದು ಓಜಿಲ್ವಿ ಬೆಂಗಳೂರು ಸಂಸ್ಥೆಯ ಎಕ್ಸಿಕ್ಯೂಟಿವ್ ಕ್ರಿಯೇಟಿವ್ ಡೈರೆಕ್ಟರ್ ಕಿಶೋರ್ ಮೋಹನದಾಸ್ ಹೇಳುತ್ತಾರೆ.
ಇದನ್ನೂ ಓದಿ: Viral Video: ನಾಗಾಲ್ಯಾಂಡ್ ಸಚಿವರು ವಡಾ ಪಾವ್ ಮಾಡಿದ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಈ ಜಾಹೀರಾತು ಟ್ರೆಂಡಿಂಗ್ನಲ್ಲಿದೆ. ಮುಂಬೈನ ಫೀನಿಕ್ಸ್ ಮಾಲ್ನಲ್ಲಿ ಆಯುಷ್ಮಾನ್ ಖುರಾನ ಜೊತೆ ಲೈವ್ ಆಗಿ ಸಂವಾದದಲ್ಲಿ ಪಾಲ್ಗೊಂಡವರು ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಸಕಾರಾತ್ಮಕ ಸ್ಪಂದನೆ ಬಂದಿದೆ ಎಂದು ಟೈಟಾನ್ ಕಂಪನಿ ಹೇಳಿಕೊಂಡಿದೆ.
ಈ ಜಾಹೀರಾತಿನ ಯೂಟ್ಯೂಬ್ ವಿಡಿಯೋ ಇಲ್ಲಿದೆ… ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ