Viral Video: ಇಂಡಿಯನ್ ಐಡಲ್; ಆಡಿಷನ್​ನಲ್ಲಿ ಶ್ರೇಯಾ ಘೋಷಾಲ್ ಅತ್ತಿದ್ದು ಈ ಕಾರಣಕ್ಕೆ

Shreya Ghoshal: ಈಕೆಗೆ ಕಣ್ಣಿಲ್ಲವೆಂದು ನನಗೆ ಅಳು ಬರುತ್ತಿಲ್ಲ. ಈಕೆಯ ಸ್ವರಶುದ್ಧಿ ಮತ್ತು ಹೃದಯದಿಂದ ಹಾಡುವ ರೀತಿಗೆ ಮನ ಸೋಲುತ್ತಿದ್ದೇನೆ. ಎರಡು ದಿನಗಳಿಂದ ಈಕೆಯ ಹಾಡನ್ನು ಕೇಳುತ್ತಲೇ ಇದ್ದೇನೆ, ಈಕೆಯ ಧ್ವನಿಯೇ ಒಂದು ನಶೆ... ಅಂತೆಲ್ಲಾ ನೆಟ್ಟಿಗರು ಮೇನುಕಾ ಪೌಡೆಲ್​ಳನ್ನು ಶ್ಲಾಘಿಸುತ್ತಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಖಂಡಿತ ನೀವು ಕಳೆದುಹೋಗುತ್ತೀರಿ.

Viral Video: ಇಂಡಿಯನ್ ಐಡಲ್; ಆಡಿಷನ್​ನಲ್ಲಿ ಶ್ರೇಯಾ ಘೋಷಾಲ್ ಅತ್ತಿದ್ದು ಈ ಕಾರಣಕ್ಕೆ
ಗಾಯಕಿಯರಾದ ಮೇನುಕಾ ಪೌಡೆಲ್ ಶ್ರೇಯಾ ಘೋಷಾಲ್​
Follow us
|

Updated on:Oct 11, 2023 | 4:10 PM

Indian Idol 14 : ಸೋನಿ ಟಿವಿಯ ಇಂಡಿಯನ್​ ಐಡಲ್​ ಸೀಝನ್​ 14ನ ಆಡಿಷನ್. ವೇದಿಕೆಯ ಮೇಲೆ ಪ್ರಸಿದ್ಧ ಕಲಾವಿದರಾದ ಕುಮಾರ ಸಾನು, ವಿಶಾಲ ದದ್ಲಾನಿ ಮತ್ತು ಶ್ರೇಯಾ ಘೋಷಾಲ್ (Shreya Ghoshal) ಕುಳಿತಿದ್ದಾರೆ. ನೇಪಾಳದ ಗಾಯಕಿ ಯುವತಿ ಮೇನುಕಾ ಪೌಡೆಲ್ (Menuka Poudel)​ ವೇದಿಕೆಯ ಮೇಲೆ ಬಂದು ನಿಲ್ಲುತ್ತಾಳೆ. ಲಗಾನ್​ ಸಿನೆಮಾದ ‘ಓ ಪಾಲಂಹಾರೆ’ ಹಾಡು ಆಕೆಯ ಸುಮಧುರವಾದ ಕಂಠದಿಂದ ಮೂಡಿಬರಲಾರಂಭಿಸುತ್ತದೆ. ಆ ಹಾಡು ಕೇಳುತ್ತಿದ್ದಂತೆ ಭಾವೋನ್ಮತ್ತಳಾದ ಶ್ರೇಯಾ ಕಣ್ಣಲ್ಲಿ ಅರಿವಿಲ್ಲದೇ ನೀರಿಳಿಯಲಾರಂಭಿಸುತ್ತದೆ. ಕೊನೆಯಲ್ಲಿ ಶ್ರೇಯಾ, ನಿಮ್ಮ ಹಾಡನ್ನು ಕೇಳಿ ನಾನು ನಗುತ್ತಿದ್ದೇನೆ, ಅಳುತ್ತಿದ್ದೇನೆ, ಹುಚ್ಚೂ ಹಿಡಿಸಿಕೊಂಡಿದ್ದೇನೆ. ಈ ಸೀಝನ್​ನ ಆಡಿಷನ್​ನಲ್ಲಿ ಹೃದಯದಿಂದ ಸ್ವರ ಹಚ್ಚಿದವರು ನೀವು ಮಾತ್ರ ಎನ್ನುತ್ತಾರೆ.

ಇದನ್ನೂ ಓದಿ : Viral Video: ದೆಹಲಿ; ಮೆಟ್ರೋದಲ್ಲಿ ಉಗಿಯುವ ಆಟ, ಅವನ ಬಾಯಿಯಲ್ಲಿ ಈಕೆ, ಇವಳ ಬಾಯಿಯಲ್ಲಿ ಅವನು

ಮೇನುಕಾ ಮೂಲತಃ ನೇಪಾಳಿ. ಕಣ್ಣುಕಾಣದ ಈಕೆ ಸಂಗೀತದ ಮೂಲಕ ಪ್ರಪಂಚವನ್ನು ನೋಡುತ್ತಿರುವ ಪ್ರತಿಭಾನ್ವಿತೆ. ಇಂಡಿಯನ್​ ಐಡಲ್​ ಸೀಝನ್​ 14ನ ಆಡಿಷನ್​ ಸಮಯದಲ್ಲಿ ಆಕೆ ತೀರ್ಪುಗಾರರನ್ನೇ ಅಳಿಸಿಬಿಟ್ಟಿದ್ದಾಳೆ. ‘ಓ ಪಾಲಂಹಾರೆ’ ಸಾಹಿತ್ಯ ಜಾವೇದ್ ಅಖ್ತರ್. ಸಂಗೀತ ಎ. ಆರ್. ರೆಹಮಾನ್​, ಲತಾ ಮಂಗೇಶ್ಕರ್, ಉದಿತ್ ನಾರಾಯಣ್ ಈ ಹಾಡನ್ನು ಹಾಡಿದ್ದು ಮೇನುಕಾ ಕಂಠದಲ್ಲಿ ಹೇಗೆ ಮೂಡಿ ಬಂದಿದೆ ಕೇಳಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಶ್ರೇಯಾ ಘೋಷಾಲ್​ರನ್ನು ಅಳಿಸಿದ ಮೇನುಕಾ ಪೌಡೆಲ್

ಮೇನುಕಾ ನೇಪಾಳದ ಝಾಪಾ ಮೂಲದವಳು. ಸದ್ಯ ಕಠ್ಮಂಡುವಿನಲ್ಲಿ ವಾಸಿಸುತ್ತಾಳೆ. ಅಂಧಳಾಗಿರುವ ಈಕೆ ಕೇಳುವಿಕೆಯಿಂದಲೇ ಕಲಿಯುತ್ತಾಳೆ. 2018 ರಲ್ಲಿ ನೇಪಾಳ ಟಿವಿ ರಿಯಾಲಿಟಿ ಶೋ ‘ನೇಪಾಳ ಐಡಲ್’ ಮೂಲಕ ಈಕೆ ಜಗತ್ತಿಗೆ ಪರಿಚಿತಳಾದಳು. ನಂತರ ಭಾರತಕ್ಕೆ ಬಂದು, 2018ರಲ್ಲಿ Zee TV ಸಾರೆಗಮಪ’ಗೆ ಆಯ್ಕೆಯಾದಳು. ನೇಪಾಳದಿಂದ ಆಯ್ಕೆಯಾದ ಏಕೈಕ ಸ್ಫರ್ಧಿ ಎಂಬ ಹೆಗ್ಗಳಿಕೆಗೆ ಈಕೆ ಪಾತ್ರಳಾಗಿ ಇತಿಹಾಸವನ್ನೇ ಸೃಷ್ಟಿಸಿದಳು. ಇದಕ್ಕಿಂತ ಮೊದಲು ರೇಡಿಯೋ ನೇಪಾಳದ ಸಂಗೀತ ಸ್ಪರ್ಧೆಯಲ್ಲಿಯೂ ಬಹುಮಾನವನ್ನು ಪಡೆದಿದ್ದಳು.

ಇದನ್ನೂ ಓದಿ : Viral Video: ಜವಾನೀ ಜಾನ್​ ಏ ಮನ್; ಮಗಳೇ ತಾಯಿಯಂತೆ ಕಾಣುತ್ತಿದ್ದಾಳೆ ಎಂದ ನೆಟ್ಟಿಗರು

ಈ ಹಾಡನ್ನು ಕೇಳಿ ಅಳುತ್ತಿದ್ದೇನೆ. ಈಕೆ ಅಂಧಳೆಂದು ಅಲ್ಲ, ಈಕೆಯ ಧ್ವನಿಯಲ್ಲಿರುವ ಶುದ್ಧತೆ ಮತ್ತು ಮಾಧುರ್ಯಕ್ಕಾಗಿ. ದೇವರು ಈಕೆಗೆ ಒಳ್ಳೆಯದನ್ನು ಮಾಡಲಿ. ಇವಳ ಧ್ವನಿ ನನ್ನನ್ನು ಪೂರ್ತಿ ಆವರಿಸಿದೆ. ಎರಡು ದಿನಗಳಿಂದ ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಿದ್ದೇನೆ. ನನಗೆ ಭಾಷೆ ಅರ್ಥವಾಗುತ್ತಿಲ್ಲ. ಆದರೆ ಆಕೆಯ ಧ್ವನಿ ಕೇಳಿ ನಿಜಕ್ಕೂ ಅತ್ತೆ. ಸಂಗೀತದ ಮಾಂತ್ರಿಕತೆ ಎನ್ನುವುದನ್ನು ಈಕೆಯ ಕಂಠದ ಮೂಲಕ ಅನುಭವಿಸಿದೆ. ಈಕೆ ಸಂಗೀತ ಕ್ಷೇತ್ರದಲ್ಲಿ ತುತ್ತತುದಿಯನ್ನು ತಲುಪಲಿ… ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಈ ಹಾಡನ್ನು ಕೇಳಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:07 pm, Wed, 11 October 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ