AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಲ್ಮಾನ್​, ಕತ್ರೀನಾಳ ಮಾಶಾಅಲ್ಲಾಹ್​ ಹಾಡಿಗೆ ಯುವತಿಯ ಬೆಲ್ಲೀ ಡ್ಯಾನ್ಸ್; ಬೆರಗಾದ ನೆಟ್ಟಿಗರು

Monday Blues: ಬೆಲ್ಲಿ ಡ್ಯಾನ್ಸ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ, ತುಂಬಾ ಮಡಿವಂತಿಕೆಯಿಂದ ಯೋಚಿಸುತ್ತಿದ್ದೆ. ​ಆದರೆ ಇದನ್ನು ಕಲೆಯಾಗಿ ನೋಡಬೇಕು, ಕಲಾವಿದರ ಪರಿಶ್ರಮ, ಆಸ್ಥೆ, ಕೌಶಲ ಗಮನಿಸಬೇಕು ಎಂದೆನ್ನಿಸಿದ್ದು ಈ ವಿಡಿಯೋ ನೋಡಿದ ಮೇಲೆ ಎಂದು ಕೆಲವರು. ಮಂಡೇ ಬ್ಲ್ಯೂಸ್​ ಮಾಯವಾಯಿತು ಎಂದೂ ಇನ್ನೂ ಕೆಲವರು. ನೀವು?

Viral Video: ಸಲ್ಮಾನ್​, ಕತ್ರೀನಾಳ ಮಾಶಾಅಲ್ಲಾಹ್​ ಹಾಡಿಗೆ ಯುವತಿಯ ಬೆಲ್ಲೀ ಡ್ಯಾನ್ಸ್; ಬೆರಗಾದ ನೆಟ್ಟಿಗರು
ಜೂಹಿ ಶೇಖ್​ ಬೆಲ್ಲೀ ಡ್ಯಾನ್ಸ್​
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Aug 21, 2023 | 11:03 AM

Share

Mashallah: ಸಲ್ಮಾನ್​ ಖಾನ್​ ಮತ್ತು ಕತ್ರೀನಾ ಕೈಫ್​ ಅಭಿನಯದ ‘ಮಾಶಾಅಲ್ಲಾಹ್’ ಹಿಟ್ ಟ್ರ್ಯಾಕ್​ಗೆ ಯುವತಿಯೊಬ್ಬಳು ಬೆಲ್ಲೀ ಡ್ಯಾನ್ಸ್ ಮಾಡಿದ್ದು ಭಾರೀ ವೈರಲ್ ಆಗುತ್ತಿದೆ. ನೆಟ್ಟಿಗರು ಈಕೆಯ ನೃತ್ಯದ ಬೆರಗನ್ನು ಕಂಡು ಶ್ಲಾಘಿಸುತ್ತಿದ್ದಾರೆ. ಮಂಡೇ ಬ್ಲ್ಯೂಸ್ (Monday Blues)​ ಮಂಡೆಯಿಂದ ಓಡಿಹೋಯಿತು ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ನೃತ್ಯಗಾತಿ ಜೂಹಿ ಶೇಖ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ.  ತಿಳಿಹಸಿರು ಉಡುಪು ಹಿತಮಿತವಾದ ಮೇಕಪ್​ನಲ್ಲಿ ಇವರು ಅತ್ಯಂತ ಆಕರ್ಷಕವಾಗಿ ಕಾಣುತ್ತಿದ್ದಾರೆ. ಈತನಕ ಸುಮಾರು 24,000 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ನಾಗರಹಾವಿನ ತಲೆಗೆ ಚುಂಬಿಸಿದ ಯುವತಿ; ಧೈರ್ಯಶಾಲಿಗಳು ಮಾತ್ರ ನೋಡಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೆಲ್ಲೀ ಡ್ಯಾನ್ಸ್ ನೋಡುವುದರಿಂದ ಇಷ್ಟು ವರ್ಷವೂ ಅದ್ಯಾಕೋ ದೂರ ಇದ್ದೆ. ಅರೆಬರೆ ಬಟ್ಟೆಯಲ್ಲಿ ಅದೇನಂಥ ನರ್ತಿಸುತ್ತಾರೋ ಎಂದು ಬೇಸರಿಸಿಕೊಳ್ಳುತ್ತಿದ್ದೆ. ಆದರೆ ಈ ವಿಡಿಯೋ ನೋಡಿದ ಮೇಲೆ ಈಕೆಯ ಕೌಶಲ ನೋಡಿ ಬೆಲ್ಲಿ ಡ್ಯಾನ್ಸ್​ ಬಗ್ಗೆ ಇದ್ದ ಇರಿಸುಮುರುಸು ಕಡಿಮೆಯಾಯಿತು. ನಿಜಕ್ಕೂ ಈಕೆ ಅದ್ಭುತವಾಗಿ ನರ್ತಿಸಿದ್ದಾರೆ. ಹೀಗೆ ನರ್ತಿಸಲು ಈಕೆ ಸಾಕಷ್ಟು ತಾಲೀಮು ಮಾಡಿರುತ್ತಾರೆ ಎನ್ನುವ ಅರಿವು ಕೂಡ ಆಯಿತು ಎಂದಿದ್ದಾರೆ ಒಬ್ಬರು.

ಏಕ್ ಥಾ ಟೈಗರ್ ಟ್ರ್ಯಾಕ್​ಗೆ ಜೂಹಿ ಶೇಖ್​ ಬೆಲ್ಲಿ ಡ್ಯಾನ್ಸ್​​

ಎಂಥ ಛಂದ ನೀವು, ಸೌಮ್ಯವಾದ ನಿಮ್ಮ ಉಡುಗೆತೊಡುಗೆ, ಮೇಕಪ್​, ಡ್ಯಾನ್ಸ್​! ಅದ್ಭುತ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಬೆಲ್ಲೀ ಡ್ಯಾನ್ಸ್​ ನೋಡಿ ನನಗೆ ಈ ಸಿನೆಮಾದ ಮೂಲ ಡ್ಯಾನ್ಸ್​ ನೋಡಬೇಕು ಎನ್ನಿಸಿತು. ನೀವು ಆಕರ್ಷಕವಾಗಿಯೇ ನರ್ತಿಸಿದ್ದೀರಿ, ಒಳ್ಳೆಯದಾಗಲಿ ನಿಮಗೆ ಎಂದಿದ್ದಾರೆ ಮತ್ತೊಬ್ಬರು. 2012 ರಲ್ಲಿ ಬಿಡುಗಡೆಯಾದ ‘ಏಕ್ ಥಾ ಟೈಗರ್’ ಸಿನೆಮಾದ ಹಾಡಿದು. ಕೌಸರ್ ಮುನೀರ್ ಅವರ ಸಾಹಿತ್ಯ, ವಾಜಿದ್ ಮತ್ತು ಶ್ರೇಯಾ ಘೋಷಾಲ್ ಗಾಯನ.

ಮಾಶಾ ಅಲ್ಲಾಹ್​ ಮೂಲ ಹಾಡಿನ ವಿಡಿಯೋ ನೋಡಿ

ನಿಮ್ಮ ರೀಲ್ಸ್ ಅನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ, ಸೋಮವಾರದ ನನ್ನ ಸೋಮಾರಿತನವನ್ನು ನೀವು ನಿಜಕ್ಕೂ ಓಡಿಸಿದ್ದೀರಿ, ನಿಮ್ಮೊಳಗಿನ ಕಲಾವಿದೆಗೆ ಧನ್ಯವಾದ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಉಳಿದ ರೀಲ್ಸ್​​ಗಳನ್ನೂ ನೋಡುತ್ತಾ ಹೋದೆ ಇನ್​ಸ್ಟಾಗ್ರಾಮಿನಲ್ಲಿ, ನೀವು ಪ್ರತಿಭಾವಂತರು ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ 

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್