Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಗರಹಾವಿನ ತಲೆಗೆ ಚುಂಬಿಸಿದ ಯುವತಿ; ಧೈರ್ಯಶಾಲಿಗಳು ಮಾತ್ರ ನೋಡಿ

Snakes : ವೇದಿಕೆಯ ಸುತ್ತಲೂ ಪ್ರೇಕ್ಷಕರು ನೆರೆದಿದ್ದಾರೆ. ಹಿಜಾಬ್​ ಧರಿಸಿದ ಇಬ್ಬರು ಹೆಣ್ಣುಮಕ್ಕಳು ನಾಗರಹಾವಿನ ಬಳಿ ಇದ್ದಾರೆ. ದೈತ್ಯ ನಾಗರಹಾವನ್ನು ಒಬ್ಬಾಕೆ ಹಿಡಿದುಕೊಂಡಿದ್ಧಾಳೆ ಇನ್ನೊಬ್ಬಾಕೆ ಯಶಸ್ವಿಯಾಗಿ ಅದರ ತಲೆಗೆ ಚುಂಬಿಸಿದ್ದಾಳೆ. ಈ ವಿಡಿಯೋ ಭಯಾನಕವಾಗಿದೆ ಎನ್ನುತ್ತಿದ್ಧಾರೆ ನೆಟ್ಟಿಗರು. ಇನ್ನೂ ಕೆಲವರು ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Viral Video: ನಾಗರಹಾವಿನ ತಲೆಗೆ ಚುಂಬಿಸಿದ ಯುವತಿ; ಧೈರ್ಯಶಾಲಿಗಳು ಮಾತ್ರ ನೋಡಿ
ಹಿಜಾಬ್ ಧರಿಸಿದ ಯುವತಿ ನಾಗರಹಾವಿನ ನೆತ್ತಿಗೆ ಚುಂಬಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Aug 19, 2023 | 6:48 PM

Cobra: ಇತ್ತೀಚೆಗಷ್ಟೇ ಯುವತಿಯೊಬ್ಬಳು ಪ್ರವಾಸಕ್ಕೆ ಹೋದಾಗ ಹಾವಿಗೆ ಚುಂಬಿಸಲು ಹೋಗಿ ಕಚ್ಚಿಸಿಕೊಂಡ ಹಳೆಯ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದಿರಿ. ಇದೀಗ ಹಿಜಾಬ್​ (Hijab) ಧರಿಸಿದ ಯುವತಿಯೊಬ್ಬಳು ಕೋಪಗೊಂಡ ನಾಗರಹಾವಿನ ತಲೆಗೆ ಮುತ್ತನ್ನು ಕೊಟ್ಟ ನಾಲ್ಕು ವರ್ಷದ ಹಿಂದಿನ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ವೇದಿಕೆಯ ಮೇಲೆ ನಿರ್ಭೀತಿಯಿಂದ ಉಪಾಯವಾಗಿ ಹಾವಿನ ತಲೆಗೆ ಈ ಯುವತಿ ಮುತ್ತನ್ನು ಕೊಡುತ್ತಿರುವ ವಿಡಿಯೋ ನೋಡುತ್ತಿದ್ದರೆ ಎಂಥವರಿಗೂ ಒಂದು ಕ್ಷಣ ಎದೆ ಝಲ್ ಎನ್ನುವಂತಿದೆ. ಇನ್ನೊಬ್ಬ ಹಿಜಾಬ್​ಧಾರಿಣಿ ಅದನ್ನು ಆತುದಿಗೆ ಹಿಡಿದುಕೊಂಡಿದ್ದಾಳೆ ಈಕೆ ಧೈರ್ಯದಿಂದ ಮುತ್ತನ್ನು ಕೊಟ್ಟಿದ್ದಾಳೇ. ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯೆಗಳ ಮಳೆ ಸುರಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಕರಿದೋಸೆ ವೀಣಕ್ಕ; ಬೀದಿಬದಿ ಹೋಟೆಲ್ ಶುರುಮಾಡಿದ ಸಾಫ್ಟ್​ವೇರ್ ಎಂಜಿನಿಯರ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ದೈತ್ಯ ನಾಗರಹಾವಿನ ಗಮನವನ್ನು ಕಪ್ಪುಬಟ್ಟೆಯ ಮೂಲಕ ಬೇರೆಡೆ ಸೆಳೆದು ಧೈರ್ಯದಿಂದ ಅದರ ನೆತ್ತಿಯನ್ನು ಮೆಲ್ಲನೆ ಚುಂಬಿಸುವ ಚಾಣಾಕ್ಷತನ ನೋಡಿ! @Bellashariman ಎಂಬ Instagram ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನೀವು ಎಷ್ಟು ದಿನ ಬದುಕುತ್ತೀರಿ ಎನ್ನುವುದು ಮುಖ್ಯವಲ್ಲ, ಹೇಗೆ ಬದುಕುತ್ತೀರಿ ಎನ್ನುವುದು ಮುಖ್ಯ ಎಂಬ ಕ್ಯಾಪ್ಷನ್​ ಈ ವಿಡಿಯೋಗೆ ಕೊಡಲಾಗಿದೆ.

ಯುವತಿಯೊಬ್ಬಳು ನಾಗರಹಾವಿನ ನೆತ್ತಿಗೆ ಚುಂಬಿಸುತ್ತಿರುವ ವಿಡಿಯೋ

ಈತನಕ ಈ ವಿಡಿಯೋ ಅನ್ನು ಸುಮಾರು 15,000 ಜನರು ನೋಡಿದ್ದಾರೆ. ಅನೇಕರು ಈ ಯುವತಿಯ ಧೈರ್ಯ ಸಾಹವನ್ನು ಕೊಂಡಾಡಿದ್ಧಾರೆ. ಅಲ್ಲದೇ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ. ಯಾಕೆ ಇಂಥ ಕ್ರೂರಪ್ರಾಣಿಗಳೊಂದಿಗೆ ಪ್ರದರ್ಶನಕ್ಕೆ ಇಳಿದಿದ್ದೀರಿ ಎಂದು ಕೇಳಿದ್ದಾರೆ ಒಬ್ಬರು. ನಿಜಕ್ಕೂ ಇದು ಅದ್ಭುತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಎಷ್ಟೊಂದು ಜನರಿಗೆ ನಾಗರಹಾವನ್ನು ಚುಂಬಿಸುವ ಹುಚ್ಚು ಹಿಡಿದಿದೆಯಲ್ಲ, ಏನಾದರೂ ಕಾರಣವಿದೆಯೇ? ಇಂಥ ಮಾರಣಾಂತಿಕ ಸಾಹಸಕ್ಕೆ ಯಾಕೆ ಬೀಳುತ್ತಿದ್ದಾರೆ ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: 88ರ ಅಜ್ಜ 85ರ ಅಜ್ಜಿ 66ನೇ ವಿವಾಹ ವಾರ್ಷಿಕೋತ್ಸವಕ್ಕೆ ಏರಿದ್ದು ಮೌಂಟ್​ ವಾಷಿಂಗ್ಟನ್!

ಧೈರ್ಯಶಾಲಿ ಹುಡುಗಿ, ಒಳ್ಳೆಯದಾಗಲಿ ಎಂದು ಕೆಲವರು ಹಾರೈಸಿದ್ದಾರೆ. ತಮ್ಮ ನಿರ್ಭಯತೆಯನ್ನು ಪ್ರದರ್ಶಿಸಲು ಇವರು ವನ್ಯಪ್ರಾಣಿಗಳನ್ನು ಕಷ್ಟಕ್ಕೆ ತಳ್ಳುತ್ತಿದ್ದಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:45 pm, Sat, 19 August 23

ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?