Viral Video: ಕರಿದೋಸೆ ವೀಣಕ್ಕ; ಬೀದಿಬದಿ ಹೋಟೆಲ್ ಶುರುಮಾಡಿದ ಸಾಫ್ಟ್​ವೇರ್ ಎಂಜಿನಿಯರ್

Woman Empowerment : ಸಾಫ್ಟ್​ವೇರ್ ಕೆಲಸ ಬಿಟ್ಟು ಬೀದಿಬದಿ ಹೋಟೆಲ್ ಇಟ್ಟುಕೊಂಡ ಕಷ್ಟಜೀವಿ ವೀಣಕ್ಕನ ಬಗ್ಗೆ ವಿಡಿಯೋ ಇಲ್ಲಿದೆ. ಬೆಂಗಳೂರಿನ ಜೆಪಿ ನಗರದ ಬಳಿ ಈಕೆ ಬೆಳಗ್ಗೆಯಿಂದ 7ರಿಂದ 11ರತನಕ ದುಡಿಯುತ್ತಾರೆ. ರುಚಿರುಚಿಯಾದ ವೆರೈಟಿ ದೋಸೆಯನ್ನು ಇವರು ಮಾಡುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರ ಚರ್ಚೆ ಮಾತ್ರ ಬೇರೆಕಡೆಯೇ ತಿರುಗಿದೆ!

Viral Video: ಕರಿದೋಸೆ ವೀಣಕ್ಕ; ಬೀದಿಬದಿ ಹೋಟೆಲ್ ಶುರುಮಾಡಿದ ಸಾಫ್ಟ್​ವೇರ್ ಎಂಜಿನಿಯರ್
ಕರಿದೋಸೆ ವೀಣಕ್ಕ
Follow us
ಶ್ರೀದೇವಿ ಕಳಸದ
|

Updated on:Aug 19, 2023 | 6:13 PM

Woman : ‘ನಾನು ಆ್ಯಕ್ಸಿಡೆಂಟ್​ಗೆ ಒಳಗಾದೆ. ಅದಕ್ಕಿಂತ ಮೊದಲು ಬ್ಯಾಂಕಿಂಗ್ ಕ್ಷೇತ್ರ, ಸಾಫ್ಟ್​ವೇರ್ ಟೆಸ್ಟಿಂಗ್ (Software Testing) ಕೆಲಸ ಮಾಡುತ್ತಿದ್ದೆ. ಆ ಕೆಲಸ ಕಷ್ಟವೆನ್ನಿಸಿದಾಗ ನನ್ನದೇ ಆದ ಸಣ್ಣ ಉದ್ಯಮ ಮಾಡಬೇಕೆಂಬ ಮನಸ್ಸಾಯಿತು. ಆಗ ಶುರುಮಾಡಿದ್ದೇ ಈ ಕರಿದೋಸೆ ಹೋಟೆಲ್. ಜೆ.ಪಿ. ನಗರದ 7ನೇ ಹಂತದಲ್ಲಿರುವ ಬ್ರಿಗೇಡ್​ ಮಿಲೇನಿಯಮ್​ ಬಳಿ  ಬೆಳಗ್ಗೆ 7ರಿಂದ 11ರವರೆಗೆ ದೋಸೆಕೆಲಸದಲ್ಲಿ ಮುಳುಗಿರುತ್ತೇನೆ. ಮಟನ್ ದೋಸೆ, ಪ್ರಾನ್ಸ್ ದೋಸೆ, ಎಗ್ ದೋಸೆ, ಚಿಕನ್ ರೋಸ್ಟ್​ ದೋಸೆ, ಶೇರ್ವಾ ಎಗ್ ದೋಸೆ ಹೀಗೆ ಹತ್ತಾರು ಬಗೆಯ ದೋಸೆ ಮಾಡುತ್ತೇನೆ’ ಬೆಂಗಳೂರಿನಲ್ಲಿರುವ ಜನರು ಕರಿದೋಸೆ ವೀಣಕ್ಕನ ವೆರೈಟೆ ದೋಸೆಯನ್ನು ಹುಡುಕಿಕೊಂಡು ಬಂದು ಸವಿಯುತ್ತಾರೆ.

ಇದನ್ನೂ ಓದಿ : Viral Video: 88ರ ಅಜ್ಜ 85ರ ಅಜ್ಜಿ 66ನೇ ವಿವಾಹ ವಾರ್ಷಿಕೋತ್ಸವಕ್ಕೆ ಏರಿದ್ದು ಮೌಂಟ್​ ವಾಷಿಂಗ್ಟನ್!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಜು. 29ರಂದು ಕನ್ನಡ ಫುಡ್ ಚಾನೆಲ್​ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಸುಮಾರು 61,000 ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸುತ್ತ ಮಹಿಳೆ ಉದ್ಯಮದಲ್ಲಿ ತೊಡಗಿಕೊಂಡರೆ ಕಷ್ಟಜೀವಿ ಎನ್ನುತ್ತೀರಿ, ಆದರೆ ಅದೇ ಪುರುಷನಿಗೆ? ಎಂದು ಅನೇಕರು ಈ ವಿಡಿಯೋದಡಿ ಚರ್ಚಿಸಿದ್ದಾರೆ.

ವೀಣಕ್ಕನ ದೋಸೆ ಹೋಟೆಲ್ ನೋಡಿ

ಇದನ್ನೇ ಹುಡುಗರು ಮಾಡಿದರೆ ಸಪೋರ್ಟ್ ಮಾಡ್ತೀರಾ? ಕೆಲಸ ಬಿಟ್ಟು ರಸ್ತೆಬದಿ ದೋಸೆ ಹಾಕ್ತಾರೆ ಅಂದ್ರೆ ಯಾರು ಹೆಣ್ಣು ಕೊಡ್ತಾರೆ ಗುರು? ಎಂದಿದ್ದಾರೆ ಒಬ್ಬರು. ಹೌದು ಹುಡುಗರು ಪಾಪ ದುಡಿಮೆನೇ ಇಲ್ಲದೇ ರಸ್ತೆಯಲ್ಲಿ ತಿರುಗಾಡ್ತಾ ಇದ್ದಾರಲ್ವಾ? ಎಂದು ಕೇಳಿದ್ದಾರೆ ಇನ್ನೊಬ್ಬರು. ಹೆಣ್ಣುಮಕ್ಕಳು ಬಿಝಿನೆಸ್ ಮಾಡೋದು ಅಷ್ಟು ಸುಲಭ ಇಲ್ಲ, ಮನೆಯವರೂ ಕೂಡ ಬಿಝಿನೆಸ್ ಮಾಡು ಅಂತ ಹೇಳಲ್ಲ. ಅದಕ್ಕೋಸ್ಕರ ಇಂಥವರಿಗೆ ಸಪೋರ್ಟ್ ಮಾಡಿ ಅಂತ ಹೇಳಿದ್ದು ಎಂದು ಮತ್ತೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ‘ಹಸು ಸಾಕಿದ್ರೆ ಹೆಣ್ಣು ಕೊಡಲ್ಲ ಅಂತೀರಿ ಯಾಕೆ?’ ಪರವಿರೋಧ ಚರ್ಚೆ

ಅದೇನ್ ಗುರು ಎಲ್ಲಾ ಸಾಫ್ಟ್​ವೇರ್​ನವರೆಲ್ಲಾ ಯಾಕೆ ಹೀಗೆ ಬೀದಿಗೆ ಬಂದು ಹೋಟೆಲ್ ಮಾಡ್ತಿದಾರೆ? ಹೋಟೆಲ್ ಮ್ಯಾನೇಜ್​ಮೆಂಟ್ ಮತ್ತು ಎಂಬಿಎ ಮಾಡಿದವರೆಲ್ಲ ಏನು ಮಾಡ್ತಿದಾರೆ? ಎಂದು ಕೇಳಿದ್ದಾರೆ ಒಬ್ಬರು. ಹೆಣ್ಣುಮಗಳು ಗಂಡುಮಕ್ಕಳು ಮಾಡುವ ಕೆಲಸ ಮಾಡಿದರೆ ಸಬಲೆ, ಕಷ್ಟಜೀವಿ, ಸ್ವಾವಲಂಬಿ, ಶ್ರೇಷ್ಠ ಮಹಿಳೆ. ಅದೇ ಗಂಡಸು ಮಾಡಿದರೆ ನಿರುದ್ಯೋಗಿ, ಅನಕ್ಷರಸ್ಥ ಅಲ್ಲವಾ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:05 pm, Sat, 19 August 23

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು