Viral Video: ನಿಮಗೊಂದು ದೋಸಾ ಪ್ರಿಂಟರ್ ಬೇಕಾ?

Dosa Printer : ಚೆನ್ನೈನ ಸ್ಟಾರ್ಟ್​ಅಪ್​ ಕಂಪೆನಿಯೊಂದು ಆವಿಷ್ಕಾರ ಮಾಡಿದ ಈ ದೋಸಾ ಪ್ರಿಂಟರ್ ಬಗ್ಗೆ ಆನ್​ಲೈನ್​ನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Viral Video: ನಿಮಗೊಂದು ದೋಸಾ ಪ್ರಿಂಟರ್ ಬೇಕಾ?
ಎವಾಚೆಫ್ ದೋಸಾ ಪ್ರಿಂಟರ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 25, 2022 | 11:48 AM

Viral Video : ತಂತ್ರಜ್ಞಾನದ ನಾಗಾಲೋಟ ದಿನವೂ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಹುಯ್ಯುತ್ತಲೇ ಇರುತ್ತದೆ ದಿನಾ ಬೆಳಗ್ಗೆ ದೋಸೆ ಹುಯ್ದಂತೆ. ಮಾರುಕಟ್ಟೆಗೆ ಬರುತ್ತಿರುವ ಯಂತ್ರಗಳಂತೂ ಮನುಷ್ಯನಿಗೆ ಹೊಸ ಆವಿಷ್ಕಾರಗಳ ಗರಿಗರಿಯಾದ ರುಚಿರುಚಿಯಾದ ಪರಿಹಾರಗಳನ್ನು ತೋರಿಸುತ್ತಲೇ ಇರುತ್ತವೆ. ಈಗಿಲ್ಲಿ ಚೆನ್ನೈನ ಎವೊಚೆಫ್ ಎಂಬ ಸ್ಟಾರ್ಟ್​ಅಪ್ ಕಂಪೆನಿ ಅಡುಗೆಮನೆಗೆ ಸಂಬಂಧಿಸಿದ ಪ್ರಿಂಟಿಂಗ್ ಮಶೀನ್ ಪರಿಚಯಿಸಿದೆ. ಅಡುಗೆಮನೆ? ಗೊಂದಲ ಯಾರಿಗೂ ಸಹಜ. ಒಮ್ಮೆ ಈ ವಿಡಿಯೋ ನೋಡಿ. ನಿಮ್ಮನ್ನು ದಾಸ ಅಥವಾ ದಾಸೀತನ ಮಾಡಿಕೊಳ್ಳುವ ಎಲ್ಲ ಗುಣಗಳೂ ಇದಕ್ಕಿವೆ ಅನ್ನಿಸದೇ ಇರದು!

ಈ ಪ್ರಿಂಟರ್​ನ ಒಡಲಿಗೆ ಹಿಟ್ಟು ಹುಯ್ದರೆ, ಗರಿಗರಿಯಾದ ದೋಸೆಗಳು ಒಂದೇ ನಿಮಿಷದಲ್ಲಿ ನಿಮ್ಮ ಪ್ಲೇಟನ್ನು ಅಲಂಕರಿಸುತ್ತವೆ. ಎಷ್ಟು ದಪ್ಪ ಬೇಕು ಎಷ್ಟು ತೆಳು ಬೇಕು ಎನ್ನುವುದನ್ನು ಡಿಜಿಟಲೈಸ್ಡ್​ ಬಟನ್ ಮೂಲಕ ಸೆಟ್ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಹಾಗೆಯೇ ತುಪ್ಪ ಸವರಬೇಕಾ? ಬೆಣ್ಣೆ ಸವರಬೇಕಾ ಅಥವಾ ಚೀಸ್​ ಹಾಕಬೇಕಾ? ನಿಮ್ಮ ಆಯ್ಕೆಯಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು.

ಸಾಕಷ್ಟು ಮಂದಿ ಸಾಕಷ್ಟು ನಮೂನೆಯಾಗಿ ಪ್ರತಿಕ್ರಿಯಿಸಿದ್ದಾರೆ. ಪರಂಪರಾಗತ ಮತ್ತು ಮನೆರುಚಿಯ ಘಮವನ್ನು ಇದು ತಂದುಕೊಡುವುದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೊಂದು ಪ್ರಯೋಜನವಿಲ್ಲದ ಆವಿಷ್ಕಾರ. ದೋಸೆ ಹುಯ್ಯುವುದು ದೊಡ್ಡ ವಿಷಯವಲ್ಲ, ದೋಸೆಯ ಹಿಟ್ಟು ತಯಾರಿಸುವುದರಲ್ಲಿ ಪಾಕದ ಹದ ಅಡಗಿರುವುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

Evochef Dosa Maker ಎಂದರೆ EC Flip ಆನ್​ಲೈನ್​ನಲ್ಲಿ ಇದರ ಬೆಲೆ ರೂ. 15,999

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:41 am, Thu, 25 August 22

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು