Viral Video: ತನ್ನ ದಾಖಲೆ ತಾನೇ ಮುರಿದ ಎಡ್ವರ್ ಸ್ನೈಡರ್

Helicopter Spins : ಈ ವ್ಯಕ್ತಿ ಇದೀಗ 171 ಬಾರಿ ಹೆಲಿಕಾಪ್ಟರ್ ಸ್ಪಿನ್​ ಮಾಡಿ ಮತ್ತೊಮ್ಮೆ ದಾಖಲೆ ಸೃಷ್ಟಿಸಿದ್ದಾರೆ. 2021ರಲ್ಲಿ ಗಿಝಾದ ಪಿರಮಿಡ್‌ಗಳ ಮೇಲೆ ಈ ವ್ಯಕ್ತಿ 160 ಬಾರಿ ತಿರುಗುವ ಮೂಲಕ ಮೊದಲ ಬಾರಿಗೆ ದಾಖಲೆ ಸೃಷ್ಟಿಸಿದ್ದರು.

Viral Video: ತನ್ನ ದಾಖಲೆ ತಾನೇ ಮುರಿದ ಎಡ್ವರ್ ಸ್ನೈಡರ್
ಸ್ಕೈಸರ್ಫಿಂಗ್​ನಲ್ಲಿ ನಿರತ ಎಡ್ವರ್ಡ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 25, 2022 | 11:04 AM

GWR : ಸ್ಕೈಸರ್ಫಿಂಗ್ ಮಾಡುವ ವ್ಯಕ್ತಿಯೊಬ್ಬರು ಹೆಲಿಕಾಪ್ಟರ್ ಸ್ಪಿನ್ ಮಾಡುತ್ತಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಗಿನ್ನೀಸ್ ವರ್ಲ್ಡ್​ ರೆಕಾರ್ಡ್​ (GWR) ತನ್ನ ಇನ್​ಸ್ಟಾಗ್ರಾಂ ಪುಟದಲ್ಲಿ ದಾಖಲೆಗೈದ ವಿವಿಧ ಸಾಹಸಮಯ ವಿಡಿಯೋಗಳನ್ನು ಹಂಚಿಕೊಳ್ಳುತ್ತದೆ. ಇಲ್ಲಿ ಸ್ಕೈಸರ್ಫಿಂಗ್ ಮಾಡುತ್ತಿರುವ ಎಡ್ವರ್ಡ್​ ಸ್ನೈಡರ್ (Edward Snyder) ಈ ವ್ಯಕ್ತಿ 171 ಬಾರಿ ಹೆಲಿಕಾಪ್ಟರ್ ಸ್ಪಿನ್​ ಮಾಡಿ ತಾನು ಮಾಡಿದ ದಾಖಲೆಯನ್ನು ತಾನೇ ಮುರಿದಿರುವುದು ವಿಶೇಷ. 2021ರಲ್ಲಿ ಗಿಝಾದ ಪಿರಮಿಡ್‌ಗಳ ಮೇಲೆ ಈ ವ್ಯಕ್ತಿ 160 ಬಾರಿ ತಿರುಗುವ ಮೂಲಕ ಮೊದಲ ಬಾರಿಗೆ ದಾಖಲೆ ಸೃಷ್ಟಿಸಿದ್ದರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Guinness World Records (@guinnessworldrecords)

ಇತ್ತೀಚಿನ ಈ ವಿಡಿಯೋದಲ್ಲಿ ಸ್ನೈಡರ್ ಸಾವಿರಾರು ಅಡಿ ಎತ್ತರದ ವಿಮಾನದಿಂದ ಜಿಗಿಯುವುದನ್ನು ನೋಡಬಹುದಾಗಿದೆ. ನಂತರ ನಿರಂತರವಾಗಿ ಅವರು ಹೆಲಿಕಾಪ್ಟರ್ ಸ್ಪಿನ್​ ಮಾಡುವ ದೃಶ್ಯವಂತೂ ಅದ್ಭುತ. ಈ ಅದ್ಭುತ ಕ್ಲಿಪ್ ಸುಮಾರು 2.7 ಲಕ್ಷ ವೀಕ್ಷಕರನ್ನು ಹೊಂದಿದೆ. ಅನೇಕರು ಇವರ ಈ ಸಾಹಸಕ್ಕೆ ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:02 am, Thu, 25 August 22