Family Photos: ಮನೆಯ ಹಿರಿಯರಿಗೆ ಫೋಟೋ ಕ್ಲಿಕ್ಕಿಸುವ ಮೂಲಕ ಸಂತೋಷದ ವಿದಾಯ ಹೇಳಿದ ಕುಟುಂಬ

ಅಂತ್ಯಕ್ರಿಯೆ ವೇಳೆ ಫೋಟೋ ಕ್ಲಿಕ್ ಮಾಡಿರುವ ಫೋಟೋ ವೈರಲ್ ಆಗಿದೆ. ನಡೆದ ಅಂತ್ಯಕ್ರಿಯೆಯಲ್ಲಿ ಕ್ಲಿಕ್ಕಿಸಿದ ಫೋಟೋವೊಂದು ಸಾಮಾಜಿಕ ಕುಟುಂಬದ ಸದಸ್ಯರು ಸಾವನ್ನಪ್ಪಿ ವ್ಯಕ್ತಿಯ ಪಟ್ಟಿಗೆಯ ಮುಂದೆ ಖುಷಿಯಿಂದ ಪೋಸ್ ಕೊಟ್ಟು ಫೋಟೋ ಕ್ಲಿಕ್ ಮಾಡಿದ್ದಾರೆ.

Family Photos: ಮನೆಯ ಹಿರಿಯರಿಗೆ ಫೋಟೋ ಕ್ಲಿಕ್ಕಿಸುವ ಮೂಲಕ ಸಂತೋಷದ ವಿದಾಯ ಹೇಳಿದ ಕುಟುಂಬ
At least 40 people were present for the "family photo".
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 24, 2022 | 5:05 PM

ಕೇರಳ: ಕೇರಳದಲ್ಲೊಂದು ವಿಚಿತ್ರವಾದ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆ ವೇಳೆ ಫೋಟೋ ಕ್ಲಿಕ್ ಮಾಡಿರುವ ಫೋಟೋ ವೈರಲ್ ಆಗಿದೆ. ನಡೆದ ಅಂತ್ಯಕ್ರಿಯೆಯಲ್ಲಿ ಕ್ಲಿಕ್ಕಿಸಿದ ಫೋಟೋವೊಂದು ಸಾಮಾಜಿಕ ಕುಟುಂಬದ ಸದಸ್ಯರು ಸಾವನ್ನಪ್ಪಿ ವ್ಯಕ್ತಿಯ ಪಟ್ಟಿಗೆಯ ಮುಂದೆ ಖುಷಿಯಿಂದ ಪೋಸ್ ಕೊಟ್ಟು ಫೋಟೋ ಕ್ಲಿಕ್ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಪಥನತಿಟ್ಟಾ ಜಿಲ್ಲೆಯ ಮಲಪಲ್ಲಿ ಗ್ರಾಮದಲ್ಲಿ ಕಳೆದ ವಾರ 95 ವರ್ಷದ ಮರಿಯಮ್ಮ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು ಆಗಾ ಈ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಆಗಸ್ಟ್ 17 ರಂದು ಮರಿಯಮ್ಮ ನಿಧನರಾದರು. ಕುಟುಂಬದ 40 ಸದಸ್ಯರು ಕುಟುಂಬದ ಛಾಯಾಚಿತ್ರಕ್ಕಾಗಿ ಅಂತ್ಯಕ್ರಿಯೆಯಲ್ಲಿ ನೆರೆದಿರುವಾಗ ನಗುತ್ತಿರುವ ಫೋಟೋ ಒಂದನ್ನು ಕ್ಲಿಕ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದು, ಕೇರಳ ಸಚಿವ ವಿ ಸಿನ್ವನ್‌ಕುಟ್ಟಿ ಕೂಡ ಸೇರಿಕೊಂಡಿದ್ದಾರೆ.

ಮರಿಯಮ್ಮ ಅವರ ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಒಂದು ವರ್ಷ ಹಾಸಿಗೆ ಹಿಡಿದಿದ್ದರು, ಕಳೆದ ಕೆಲವು ವಾರಗಳಿಂದ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. ಆಕೆಗೆ ಒಂಬತ್ತು ಮಕ್ಕಳು ಮತ್ತು 19 ಮೊಮ್ಮಕ್ಕಳು ಇದ್ದಾರೆ, ಎಲ್ಲರೂ ಬೇರೆ ಬೇರೆ ನೆಲೆಸಿದ್ದಾರೆ. ಈ ಕಾರಣದಿಂದ ಆಕೆಯ ಜೊತೆಗೆ ಒಂದು ಕೊನೆಯ ಫೋಟೋವನ್ನು ಕ್ಲಿಕಿಸುವ ಎಂದು ಮರಿಯಮ್ಮನ ಜೊತೆಗೆ ಫೋಟೋವೊಂದನ್ನು ಕ್ಲಿಕ್ ಮಾಡಿದ್ದಾರೆ.

ಈ ಬಗ್ಗೆ ಸಂಬಂಧಿ ಬಾಬು ಉಮ್ಮನ್ ಮಾತನಾಡಿ, ಮರಿಯಮ್ಮ ಅವರು 95 ವರ್ಷಗಳ ಕಾಲ ಸುಖವಾಗಿ ಬದುಕಿದ್ದು, ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಪ್ರೀತಿಸುತ್ತಿದ್ದರು. ಕುಟುಂಬವು ಅವಳೊಂದಿಗೆ ಕಳೆದ ಕ್ಷಣಗಳನ್ನು ನೆನಪಿಟ್ಟುಕೊಳ್ಳಲು ಫೋಟೋವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಅಂತ್ಯಕ್ರಿಯೆಯ ಪ್ರಾರ್ಥನೆಯ ನಂತರ ಶುಕ್ರವಾರ ಮುಂಜಾನೆ 2.15 ರ ಸುಮಾರಿಗೆ ಫೋಟೋ ತೆಗೆಯಲಾಗಿದೆ ಎಂದು ಹೇಳಲಾಗಿದೆ. ಫೋಟೊ ತೆಗೆದು ಆಕೆ ಜೊತೆಗಿನ ನೆನಪುಗಳನ್ನು ತಮ್ಮ ಜೊತೆಗೆ ಉಳಿಸಬೇಕೆಂಬುದು ಮನೆಯವರ ಆಸೆಯಾಗಿತ್ತು ಎಂದರು.

ಕೇರಳದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಕುಟುಂಬದ ಪರವಾಗಿ ಮಾತನಾಡಿದರು. ಇದು ದುಃಖದ ಕ್ಷಣ ಹೌದು ಆದರೆ ಅವರಿಗೆ ವಿದಾಯ ಹೇಳಬೇಕಾದ್ದು ನಮ್ಮ ಕರ್ತವ್ಯ , ಎಂದೆಂದಿಗೂ ಸಂತೋಷದಿಂದ ಬದುಕಿದವರಿಗೆ ಮುಗುಳ್ನಗೆಯ ವಿದಾಯ ನೀಡುವುದಕ್ಕಿಂತ ಹೆಚ್ಚಿನ ಸಂತೋಷ ಏನು? ಈ ಫೋಟೋಗೆ ಬೇರೆ ಅರ್ಥವನ್ನು ನೀಡುವ ಅಗತ್ಯ ಇಲ್ಲ ಎಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಕೆಲವು ಬಳಕೆದಾರರು ಸಂತೋಷದಿಂದ ಪೋಸ್ ನೀಡಿದ್ದಕ್ಕಾಗಿ ಕುಟುಂಬವನ್ನು ಟೀಕಿಸಿದರೆ, ಇತರರು ಫೋಟೋದಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರನ್ನು ಸಮರ್ಥಿಸಿಕೊಂಡಿದ್ದಾರೆ.

Published On - 5:05 pm, Wed, 24 August 22

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ