Viral Video: ಜಪಾನಿ ಸೂರ್ಯಕಾಂತಿಯರ ಈ ನೃತ್ಯಕ್ಕೆ ವ್ಹಾ! ಎಂದ ನೆಟ್ಟಿಗರು

Aishwarya Rai: 1999ರಲ್ಲಿ ಈ ಸಿನೆಮಾ ತೆರೆಕಂಡಿದೆ. ಐಶ್ವರ್ಯ ರೈ ಅಭಿನಯಿಸಿದ ಈ ಪ್ರಸಿದ್ಧ ಗೀತೆಯನ್ನು ಆಶಾ ಭೋಸ್ಲೆ, ಆದಿತ್ಯ ನಾರಾಯಣ್, ರಿಚಾ ಶರ್ಮಾ ಹಾಡಿದ್ದಾರೆ. ಈಗಲೂ ಈ ಹಾಡು ಕೇಳಿದರೆ ಕುಣಿಯಬೇಕೆಂದು ನಿಮಗೂ ಅನ್ನಿಸುತ್ತೆ. ಯಾವ ಹಾಡಿದು?

Viral Video: ಜಪಾನಿ ಸೂರ್ಯಕಾಂತಿಯರ ಈ ನೃತ್ಯಕ್ಕೆ ವ್ಹಾ! ಎಂದ ನೆಟ್ಟಿಗರು
ಜಪಾನಿ ಸುಂದರಿಯರು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 25, 2022 | 10:27 AM

Japanese Dancers : ಮೇಯೊ ಜಪಾನ್ ಇನ್​ಸ್ಟಾಗ್ರಾಂ ಪುಟಕ್ಕೆ 1.2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ಕಹಿ ಆಗ ಲಗೀ ಲಗ ಜಾಯೇ.. ಐಶ್ವರ್ಯಾ ರೈ ಅಭಿನಯದ ಈ ಹಾಡನ್ನು ಜಪಾನಿ ನೃತ್ಯಗಾರ್ತಿಯರಿಬ್ಬರು ಹೆಜ್ಜೆ ಹಾಕಿದ್ದು ಈಗ ವೈರಲ್ ಆಗಿದೆ. ಈ ವಿಡಿಯೋ 1.3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಹೊಂದಿದೆ. 17,000 ಲೈಕ್ಸ್​ ಕೂಡ ಪಡೆದಿದೆ. ಇದು ಬಾಲಿವುಡ್​ನ ಮಹಾಕಾವ್ಯ! ನೀವು ಈ ವೇಷಭೂಷಣದಲ್ಲಿ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನೀವು ನನ್ನ ಹೈಸ್ಕೂಲಿನ ನೆನಪನ್ನು ಮರಳಿಸಿದ್ದೀರಿ, ನಾನು ಕೂಡ ಈ ಹಾಡಿಗೆ ನೃತ್ಯ ಮಾಡುತ್ತಿದ್ದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವಿಬ್ಬರೂ ಹೊಲದಲ್ಲಿ ಅರಳಿದ ಸೂರ್ಯಕಾಂತಿಯಂತೆ ಕಾಣುತ್ತಿದ್ದೀರಿ. ನಿಮ್ಮ ನಗು ಸೂರ್ಯನಿಗಿಂತ ಪ್ರಕಾಶಮಾನವಾಗಿದೆ ಎಂದು ಇನ್ನೂ ಒಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Mayo Japan (@mayojapan)

ಕಹಿನ್ ಆಗ್ ಲಗೇ ಲಗ್ ಜಾಯೆ ಈ ಹಾಡು 1999 ರಲ್ಲಿ ತೆರೆಕಂಡ ತಾಲ್ ಸಿನೆಮಾದ್ದು. ಆಶಾ ಭೋಂಸ್ಲೆ, ಆದಿತ್ಯ ನಾರಾಯಣ್ ಮತ್ತು ರಿಚಾ ಶರ್ಮಾ ಇದನ್ನು ಹಾಡಿದ್ದಾರೆ. ಇಂದಿಗೂ ಇದು ತನ್ನ ಕಾವು ಉಳಿಸಿಕೊಂಡಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:26 am, Thu, 25 August 22