Viral Video: 88ರ ಅಜ್ಜ 85ರ ಅಜ್ಜಿ 66ನೇ ವಿವಾಹ ವಾರ್ಷಿಕೋತ್ಸವಕ್ಕೆ ಏರಿದ್ದು ಮೌಂಟ್​ ವಾಷಿಂಗ್ಟನ್!

Mount Washington : ನಿಜಕ್ಕೂ ಇವರು ದಾಖಲೆ ಬರೆದ ಜೋಡಿ. ಈಗಿನ ಪೀಳಿಗೆಗೆ ಇವರು ಆದರ್ಶಪ್ರಾಯರು. ಗಟ್ಟಿಮುಟ್ಟಾದ ಇವರ ಆಯಸ್ಸು, ಆರೋಗ್ಯ ಮತ್ತು ಮದುವೆಯ ವಾರ್ಷಿಕೋತ್ಸವವನ್ನು ಇಂಥ ಸಾಹಸಮಯವಾಗಿ ಆಚರಿಸಿಕೊಳ್ಳುವುದು ಅಪರೂಪದಲ್ಲಿ ಅಪರೂಪ ಎಂದು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ನೀವು ನಮಗೆ ಸ್ಫೂರ್ತಿ ಎನ್ನುತ್ತಿದ್ದಾರೆ.

Viral Video: 88ರ ಅಜ್ಜ 85ರ ಅಜ್ಜಿ 66ನೇ ವಿವಾಹ ವಾರ್ಷಿಕೋತ್ಸವಕ್ಕೆ ಏರಿದ್ದು ಮೌಂಟ್​ ವಾಷಿಂಗ್ಟನ್!
ಮೌಂಟ್ ವಾಷಿಂಗ್ಟನ್​ ಏರುತ್ತಿರುವ ವೃದ್ಧದಂಪತಿ
Follow us
ಶ್ರೀದೇವಿ ಕಳಸದ
|

Updated on:Aug 19, 2023 | 5:01 PM

Wedding Anniversary: ಊಟ ಮಾಡಿದ ನಂತರ ನನ್ನ ಬೆಡ್ರೂಮ್​ಗೆ ಹೋಗಲು ಮೆಟ್ಟಿಲುಗಳನ್ನು ಏರಬೇಕು,  ಅದಕ್ಕೇ ನಾನಿನ್ನೂ ಕಷ್ಟಪಡುತ್ತಿದ್ದೇನೆ. ಪ್ರತೀ ವರ್ಷ ನಾವು ಇಲ್ಲಿಗೆ ಬರುತ್ತೇವೆ ಎಂದು ಆಕೆ ಹೇಳಿದ್ದಾಳೆ, ಕೇಳಿಸಿಕೊಳ್ಳಿ. 66 ವರ್ಷ ನೀವು ದಾಂಪತ್ಯವನ್ನು ಹೇಗೆ ನಿಭಾಯಿಸಿದಿರಿ? ನನ್ನ ವಯಸ್ಸೇ 60 ಈಗಾಗಲೇ ನಾನು ನಾಲ್ಕು ಮದುವೆಗಳನ್ನು ಆದೆ. ನಿಮ್ಮ ಈ ಪ್ರೀತಿ ಮತ್ತು ಹವ್ಯಾಸವೇ (Love and Hobby) ನಿಮ್ಮ ಆಯಸ್ಸದ ಗುಟ್ಟು ಇರಬೇಕು… ಹೀಗೆ ನೆಟ್ಟಿಗರು ಈ ವಿಡಿಯೋದಡಿ ಪ್ರತಿಕ್ರಿಯಿಸಿ ಈ ಜೋಡಿಗೆ ಶುಭಹಾರೈಸಿದ್ದಾರೆ. ಅಜ್ಜನಿಗೆ 88, ಅಜ್ಜಿಗೆ 85. 66ನೇ ವಿವಾಹ ವಾರ್ಷಿಕೋತ್ಸವವನ್ನು ಇವರಿಬ್ಬರು ಮೌಂಟ್ ವಾಷಿಂಗ್ಟನ್ ಮೇಲೆ ಏರಿ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ‘ಹಸು ಸಾಕಿದ್ರೆ ಹೆಣ್ಣು ಕೊಡಲ್ಲ ಅಂತೀರಿ ಯಾಕೆ?’ ಪರವಿರೋಧ ಚರ್ಚೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಳಿವಯಸ್ಸಿನಲ್ಲಿರುವ ಈ ದಂಪತಿ ನ್ಯೂ ಹ್ಯಾಂಪ್​ಶೈರ್​ನಲ್ಲಿ ಮೌಂಟ್​ ವಾಷಿಂಗ್ಟನ್​ ಏರುವ ವಿಡಿಯೋ ಇದೀಗ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. 3 ದಿನಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ 8 ಲಕ್ಷ  ಜನರು ನೋಡಿದ್ದಾರೆ. 55,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಸಿದ್ದಾರೆ.

ಮೌಂಟ್ ವಾಷಿಂಗ್ಟನ್​ ಏರಿದ ಈ ಜೋಡಿಯ ವಿಡಿಯೋ ನೋಡಿ

ಈ ಅಜ್ಜಿ ನಿಜಕ್ಕೂ ತುಂಬಾ ಸುಂದರವಾಗಿದ್ದಾರೆ ಎಂದಿದ್ದಾರೆ ಒಬ್ಬರು. ಎಂಥ ಅದ್ಭುತವಾದ ಜೋಡಿ ಇವರು ಎಂದಿದ್ದಾರೆ ಮತ್ತೊಬ್ಬರು. ನನಗೂ ಮತ್ತು ನನ್ನ ಪತಿಗೂ ಈ ವಿಡಿಯೋ ಸ್ಫೂರ್ತಿ ನೀಡಿತು ಎಂದಿದ್ದಾರೆ ಇನ್ನೊಬ್ಬರು. ಮದುವೆಯ ವಾರ್ಷಿಕೋತ್ಸವದ ಶುಭಾಷಯಗಳು ನಿಮಗೆ ಎಂದು ಅನೇಕರು ಹಾರೈಸಿದ್ದಾರೆ. ನಿಮ್ಮ ಆರೋಗ್ಯ, ಆತ್ಮವಿಶ್ವಾಸ ಮತ್ತು ಉತ್ಸಾಹ ನಮಗೆಲ್ಲರಿಗೂ ಮಾದರಿ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್​ ಎರಚಿದ ಮಹಿಳೆಯ ಬಂಧನ

ಆಧುನಿಕ ಕಾಲದಲ್ಲಿ ದಾಂಪತ್ಯವು ಅರ್ಥವನ್ನೇ ಕಳೆದುಕೊಂಡಿದೆ ನಿಮ್ಮನ್ನು ನೋಡಿ ನಾವೆಲ್ಲ ಪಾಠ ಕಲಿಯಬೇಕಿದೆ, ಆದರೆ ಅದು ಬಹುಶಃ ಕಷ್ಟವೆನ್ನಿಸುತ್ತದೆ ಎಂದಿದ್ದಾರೆ ಒಬ್ಬರು. ಆಕೆ 85 ಅಕ್ಕ 58ರಂತೆ ಕಾಣುತ್ತಿದ್ದಾರೆ, ಆತನೂ ಕೂಡ ಆಕರ್ಷಕವಾಗಿದ್ದಾನೆ ಎನ್ನುತ್ತಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:57 pm, Sat, 19 August 23

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು