Viral Video: ಥ್ರಿಲ್ಲಿಂಗ್​ ವೆಡ್ಡಿಂಗ್​; ಗುಂಡಿಗೆ ಗಟ್ಟಿ ಇದ್ದವರಷ್ಟೇ ಈ ಮದುವೆಗೆ ಬಂದಿದ್ದರು

Marriage : ಮದುವೆ ಎಂದರೆ ಗುಂಡಿಗೆ ಬೀಳುವುದು ಎನ್ನುತ್ತಾರೆ, ಇವರು ಅಕ್ಷರಶಃ ಬಿದ್ದಿದ್ದಾರೆ! ಇಂದಿನ ಪೀಳಿಗೆಗೆ ಅಸಾಂಪ್ರದಾಯಿಕತೆಯಲ್ಲಿ ಹೆಚ್ಚು ಒಲವು. ಗುಂಡಿಗೆ ಗಟ್ಟಿ ಇದ್ದಲ್ಲಿ ನೀವೂ ಈ ಸ್ಕೈಡೈವ್​ ಮದುವೆ ನೋಡಬಹುದು.

Viral Video: ಥ್ರಿಲ್ಲಿಂಗ್​ ವೆಡ್ಡಿಂಗ್​; ಗುಂಡಿಗೆ ಗಟ್ಟಿ ಇದ್ದವರಷ್ಟೇ ಈ ಮದುವೆಗೆ ಬಂದಿದ್ದರು
ಸ್ಕೈಡೈವ್​ ಮೂಲಕ ಮದುವೆಯಾದ ಜೋಡಿ
Follow us
ಶ್ರೀದೇವಿ ಕಳಸದ
|

Updated on:Jul 29, 2023 | 12:20 PM

Wedding : ಸಮಾಜ ಕುಟುಂಬಕ್ಕಿಂತ ಮನಸಿನ ಮಾತು ಕೇಳುವ ಮನೋಭಾವ ಇಂದಿನ ಯುವಪೀಳಿಗೆಯದು  ತಮ್ಮ ತಮ್ಮ ಆಸಕ್ತಿಗಳ ಮೂಲಕ ಬದುಕನ್ನು ರಸಮಯವಾಗಿಸಿಕೊಳ್ಳುವ ಜಾಣ್ಮೆ ತಾಳ್ಮೆ ಅವರಿಗಿದೆ. ಆ ಕಾರಣಕ್ಕಾಗಿಯೇ ಅವರು ಸಿದ್ಧ ಮಾದರಿಗಳನ್ನು ಹಂತಹಂತದಲ್ಲಿ ಒಡೆಯುತ್ತ ಹೆಚ್ಚೆಚ್ಚು ಸಾಹಸದೆಡೆ ತೆರೆದುಕೊಳ್ಳುತ್ತಿದ್ದಾರೆ. ತಮಗೂ ತಮ್ಮನ್ನು ಸುತ್ತುವರಿದ ಆಪ್ತರಿಗೂ ಖುಷಿ ಎನ್ನಿಸುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಮದುವೆ. ಎತ್ತರದ ಪರ್ವತದ ಮೇಲಿಂದ ಸ್ಕೈಡೈವ್ (Skydive) ಮಾಡುವ ಮೂಲಕ ಈ ಜೋಡಿ ತಮ್ಮ ಮದುವೆಯನ್ನು ನೋಡುಗರ ನೆನಪಿನಲ್ಲಿ ಉಳಿಯುವಂತೆ ಮತ್ತು ವಿಶೇಷವೆನ್ನಿಸುವಂತೆ ಆಚರಿಸಿಕೊಂಡಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by La libreta morada | Mariana (@lalibretamorada)

ಮದುವೆ ಎಂದಾಗ ಅದೊಂದು ಶೃಂಗಾರಮಯ ವಾತಾವರಣದಿಂದ ಕೂಡಿದ ಸಮಾರಂಭ. ಆದರೆ ಈ ವಿಡಿಯೋದಲ್ಲಿ ನೀವು ನೋಡಿದ್ದು ಸಾಹಸಮಯ ಮತ್ತು ಸೃಜನಶೀಲ ವಾತಾವರಣದಲ್ಲಿ ನಡೆದ ಮದುವೆ. ಎತ್ತರದ ಬೆಟ್ಟದ ಮೇಲೆ ಮದುವೆಗೆ ಬಂದ ಅತಿಥಿಗಳು ನಿಂತಿದ್ದಾರೆ. ಮದುಮಕ್ಕಳು ಇಬ್ಬರು ಅತಿಥಿಗಳೊಂದಿಗೆ ಅಲ್ಲಿಂದ ಸ್ಕೈಡೈವ್ ಮಾಡುತ್ತಾರೆ.

ಇದನ್ನೂ ಓದಿ : Viral Video: ಜಪಾನ್​; ನಾಗರಿಕ ಜಿಂಕೆಸಾರಂಗಗಳ ಅಪರೂಪದ ವಿಡಿಯೋ

ಧೈರ್ಯಶಾಲಿ ಜೋಡಿಯ ಹೆಸರು ಪ್ರಿಸಿಲ್ಲಾ ಆಂಟ್​ ಮತ್ತು ಫಿಲಿಪ್ಪೋ ಲೆಕ್ವೆರ್ಸ್​. ಇವರಿಬ್ಬರ ಈ ಸಾಹಸಮಯ ಮದುವೆಯ ವಿಡಿಯೋ ಅನ್ನು ಐದು ದಿನಗಳ ಹಿಂದೆ ಇನ್​ಸ್ಟಾನಲ್ಲಿ ಪೋಸ್ಟ್ ಮಾಡಲಾಗಿದೆ. ಜಾಲತಾಣಿಗರು ಈ ವಿಡಿಯೋ ಅನ್ನು ಅಚ್ಚರಿಯಿಂದ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ. ಇವರ ಧೈರ್ಯ ಮತ್ತು ಸಾಹಸಕ್ಕೆ ನಿಜಕ್ಕೂ ಸಲಾಂ ಎನ್ನುತ್ತಿದ್ದಾರೆ. ಅತಿಥಿಗಳಿಗೂ ಇದು ನೆನಪಿನಲ್ಲಿ ಉಳಿಯುವಂಥ ಸಮಾರಂಭ ಎಂದಿದ್ದಾರೆ.

ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ

ನಿಜಕ್ಕೂ ನಾನಿದನ್ನು ಬಹಳ ಪ್ರೀತಿಸುತ್ತಿದ್ದೇನೆ. ನಾ ಕೂಡ ನನ್ನ ಮದುವೆಯನ್ನು ಹೀಗೆಯೇ ಮಾಡಿಕೊಳ್ಳಲು ಬಯಸುತ್ತೇನೆ ಆದರೆ ಏನು ಮಾಡುವುದು ನನಗೆ ನಿಮ್ಮಷ್ಟು ಧೈರ್ಯ ಇಲ್ಲ ಎಂದಿದ್ದಾರೆ ಒಬ್ಬರು. ನವಜೋಡಿಗೆ ಅಭಿನಂದನೆ, ನಿಮ್ಮ ಜೀವನ ಸಾಕಷ್ಟು ಸಾಹಸಮಯದಿಂದ ಕೂಡಿರುತ್ತದೆ ಎಂದಿದ್ದಾರೆ ಮತ್ತೊಬ್ಬರು. ಈ ವಿಡಿಯೋ ನೋಡಿಯೇ ನನಗೆ ಭಯವಾಯಿತು ಎಂದಿದ್ದಾರೆ ಇನ್ನೊಬ್ಬರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:38 am, Sat, 29 July 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ