AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಡಿಜಿಟಲ್ ಭಿಕ್ಷೆ; ಸ್ಲೀಪರ್ ಕೋಚ್​ನಲ್ಲಿಯೂ ರೀಲಿಗರ ಹಾವಳಿ; ಕಿಡಿಕಾರಿದ ನೆಟ್ಟಿಗರು

Reels: ಈ ಬೇಡುವಿಕೆ ಎನ್ನುವುದು ಮನುಷ್ಯನ ನಿರಂತರ ಪಾಡು ಎನ್ನಿಸುತ್ತದೆ. ಆಗ ರೈಲು ಹತ್ತಿದರೆ ಭಿಕ್ಷುಕರು. ಈಗ ರೀಲಿಗರು. ಲೈಕ್​ ಶೇರ್​ಗಾಗಿ ಇವರು ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ಹುಚ್ಚಾಟಕ್ಕೆ ಎಣೆಯೇ ಇಲ್ಲದಂತಾಗಿದೆ.

Viral Video: ಡಿಜಿಟಲ್ ಭಿಕ್ಷೆ; ಸ್ಲೀಪರ್ ಕೋಚ್​ನಲ್ಲಿಯೂ ರೀಲಿಗರ ಹಾವಳಿ; ಕಿಡಿಕಾರಿದ ನೆಟ್ಟಿಗರು
ರೈಲಿನಲ್ಲಿ ಡ್ಯಾನ್ಸ್ ಮಾಡುತ್ತಿರುವ ಯುವತಿ
ಶ್ರೀದೇವಿ ಕಳಸದ
|

Updated on:Jul 29, 2023 | 1:07 PM

Share

Dance : ಮೆಟ್ರೋ ರೈಲುಗಳಲ್ಲಿ ರೀಲ್​​ಗಳಿಗಾಗಿ ಡ್ಯಾನ್ಸ್ ಮಾಡುವವರಿಗೆ ಬುದ್ಧಿ ಹೇಳಿಹೇಳಿ ನೆಟ್ಟಿಗರಂತೂ ಬೇಸತ್ತಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ರೈಲೊಂದರ ಸ್ಲೀಪರ್​ ಕೋಚಿನಲ್ಲಿ (Sleeper Coach) ಚಿತ್ರೀಕರಿಸಲಾಗಿದೆ. ಯಾಕೆ ಇವರಿಗೆ ಸಾರ್ವಜನಿಕ ಸ್ಥಳಗಳಲ್ಲಿಯೇ ರೀಲ್ಸ್ ಮಾಡುವ ಹುಚ್ಚು ಎಂದು ಮತ್ತೆ ಕೇಳುತ್ತಿದ್ದಾರೆ ನೆಟ್ಟಿಗರು. ಪೊಲೀಸರು ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ ಆದರೂ ಕೂಡ ಈ ರೀಲಿಗರು ತಮ್ಮ ಲೋಕದಲ್ಲಿಯೇ ತಾವಿರುತ್ತಾರೆ, ತಾವಿದ್ದಾರೆ. ಇದೊಂದು ಬಗೆಹರಿಯದ ದೊಡ್ಡ ಸಮಸ್ಯೆಯಂತೆ ಪರಿಣಮಿಸುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Seema Kanojiya (@seemakanojiya87)

ಬ್ಲಾಗರ್ ಸೀಮಾ ಕನೋಜಿಯಾ ಎನ್ನುವವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆರು ದಿನಗಳ ಹಿಂದೆ ಮಾಡಲಾದ ಈ ಪೋಸ್ಟ್​ ಅನ್ನು ಈತನಕ ಸುಮಾರು 1.5 ಲಕ್ಷ ಜನರು ನೋಡಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈಕೆಗೆ ಯಾರಾದರೂ ಐದು ರೂಪಾಯಿ ಭಿಕ್ಷೆ ನೀಡಿರಿ ಎಂದು ಹೇಳಿದ್ದಾರೆ ಒಬ್ಬರು. ಪಕ್ಕದಲ್ಲಿರುವ ಹುಡುಗ ಕಿವಿಗೆ ಇಯರ್ ಫೋನ್​ ಸಿಕ್ಕಿಸಿಕೊಂಡಿದ್ದಕ್ಕೆ ಬಚಾವ್​ ಹಾಗಿದ್ದರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಥ್ರಿಲ್ಲಿಂಗ್​ ವೆಡ್ಡಿಂಗ್​; ಗುಂಡಿಗೆ ಗಟ್ಟಿ ಇದ್ದವರಷ್ಟೇ ಈ ಮದುವೆಗೆ ಬಂದಿದ್ದರು

ಇದು ನರ್ತಿಸಲು ಸೂಕ್ತವಾದ ಸ್ಥಳವಲ್ಲ ಎಂದೇ ಅನೇಕರು ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ಈ ರೀಲಿಗರು ಸಾರ್ವಜನಿಕ ಸ್ಥಳ ಅಥವಾ ಸಾರಿಗೆಯಲ್ಲಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ ಒಬ್ಬರು. ರಸ್ತೆ, ಸಂತೆ, ಬಸ್ಸು, ಟ್ರೇನು, ಏರೋಪ್ಲೇನು, ಗುಡ್ಡಬೆಟ್ಟ, ಶಾಲೆ, ದೇವಸ್ಥಾನ ಯಾವ ಜಾಗಗಳೂ ನಿಮಗೆ ಸಾಕಾಗುತ್ತಿಲ್ಲವಲ್ಲ ದೇವರೇ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಜಪಾನ್​; ನಾಗರಿಕ ಜಿಂಕೆಸಾರಂಗಗಳ ಅಪರೂಪದ ವಿಡಿಯೋ

ಈ ರೀಲಿಗರ ಹಾವಳಿಯಿಂದಾಗಿ ರೈಲುಪ್ರಯಾಣದ ಸೊಗಸೇ ಕರಗುತ್ತಿದೆ ಎಂದಿದ್ದಾರೆ ಕೆಲವರು. ಕಾಲಕ್ಕೆ ತಕ್ಕಂತೆ ಅವರುಗಳು ಸಾಗುತ್ತಿದ್ಧಾರೆ, ನಿಮಗೇನು ತೊಂದರೆ ಎಂದು ಕೇಳಿದ್ದಾರೆ ಒಬ್ಬರು. ಏನೇ ಮಾಡಿಕೊಳ್ಳಲಿ ಸಾರ್ವಜನಿಕ ಸ್ಥಳಗಳಲ್ಲಿ ಬೇಡ ಎಂದು ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 12:24 pm, Sat, 29 July 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ