Viral Video: ಮೆಟ್ರೋ ಕೋಚ್ನಲ್ಲಿ ಪಲ್ಟಿ ಹೊಡೆದ ಯುವತಿ; ಬಿಸಿಯೇರಿದ ಚರ್ಚೆ
Athlete : ಪ್ರತಿಭೆ, ಕೌಶಲವುಳ್ಳವರಿಗೆ ಪ್ರದರ್ಶನ, ಪ್ರತಿಸ್ಪಂದನವಿದ್ದರೆ ಬದುಕಿನಲ್ಲಿ ಉತ್ಸಾಹ ಇರುತ್ತದೆ. ಹೆಚ್ಚಿನದನ್ನು ಸಾಧಿಸಲು ಪ್ರೋತ್ಸಾಹ ಸಿಗುತ್ತದೆ. ಸಾಮಾಜಿಕ ಜಾಲತಾಣಗಳು ಇಂಥ ಅನೇಕರಿಗೆ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಇತ್ತೀಚೆಗೆ ಅಥ್ಲೀಟ್ ರಿಚಾ ಶರ್ಮಾ ಮೆಟ್ರೋದಲ್ಲಿ ಪಲ್ಟಿ ಹೊಡೆದ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರಲ್ಲಿ ಚರ್ಚೆ ಕಾವು ಪಡೆದುಕೊಂಡಿದೆ.
Metro : ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆಗಳಲ್ಲಿ ರೀಲ್ಗಾಗಿ ಸಾಹಸ, ಕೌಶಲ ಪ್ರದರ್ಶಿಸುವುದರ ಬಗ್ಗೆ ಆಗಾಗ ಚರ್ಚೆಗಳು ಆಗುತ್ತಲೇ ಇರುತ್ತವೆ. ನೆಟ್ಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರ ಗಮನಕ್ಕೆ ತಂದರೂ ಪೊಲೀಸರು ಆ ಕ್ಷಣಕ್ಕೆ ಸ್ಪಂದಿಸಿ ಸುಮ್ಮನಾಗುತ್ತಿದ್ದಾರೆಯೇ ವಿನಾ ಈ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಮೆಟ್ರೋನಲ್ಲಿ ಪಲ್ಟಿ ಹೊಡೆದಿದ್ದಾಳೆ. ಕೋಚ್ನಲ್ಲಿ ಸಾಕಷ್ಟು ಜನರು ಇದ್ದಾಗಲೂ ಈಕೆ ಹೀಗೆ ಮಾಡಿದ್ದಾಳೆಂದರೆ ಸರಿಯೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅದು ಹೇಗೆ ಇವರೆಲ್ಲ ಹೀಗೆ ಧೈರ್ಯ ತೋರುತ್ತಾರೆ, ಏನಾಗಿದೆ ಈ ರೀಲಿಗರಿಗೆ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್ ಎರಚಿದ ಮಹಿಳೆಯ ಬಂಧನ
ಈ ಮೆಟ್ರೋದಲ್ಲಿ ಪಲ್ಟಿ ಹೊಡೆದ ಯುವತಿ ಅಥ್ಲೀಟ್ ಮಿಶಾ ಶರ್ಮಾ. ತನ್ನ ಕೌಶಲವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿಸಿ ರೀಲ್ ಮಾಡುತ್ತಿರುತ್ತಾರೆ ಎನ್ನುವುದು ಈಕೆಯ ಇನ್ಸ್ಟಾಗ್ರಾಂ ಪುಟವನ್ನು ನೋಡಿದಾಗ ತಿಳಿಯುತ್ತದೆ. ಜೂ. 26 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 3.7 ಮಿಲಿಯನ್ ಜನರು ನೋಡಿದ್ದಾರೆ. ಸುಮಾರು 45,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ಧಾರೆ. ‘
ಮೆಟ್ರೋ ಕೋಚ್ನಲ್ಲಿ ಪಲ್ಟಿ ಹೊಡೆಯುವ ಮಿಶಾ ಶರ್ಮಾ
View this post on Instagram
ಇದು ನಿಮ್ಮ ಕೌಶಲ, ಸಾಹಸಕ್ಕೆ ಸೂಕ್ತವಾದ ಜಾಗವಲ್ಲ ಎಂದಿದ್ದಾರೆ ಕೆಲವರು. ನಾನು ನಿಮ್ಮನ್ನು ಮೆಟ್ರೋದಲ್ಲಿ ನೋಡಿದೆ ಎಂದು ಒಬ್ಬರು ಹೇಳಿದ್ದಾರೆ. ನೀವು ನಿಜಕ್ಕೂ ಅದ್ಭುತ ನಿಮ್ಮಂಥ ಸಹೋದರಿಯನ್ನು ಈತನಕ ನೋಡಿಲ್ಲ, ನಾನು ನಿಮ್ಮ ಅಭಿಮಾನಿ ಎಂದಿದ್ದಾರೆ ಕೆಲವರು. ಮೆಟ್ರೋ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಇಂಥ ಪ್ರದರ್ಶನಗಳನ್ನು ಮಾಡುವುದು ಅಪರಾಧ, ಬಹಳ ಹುಷಾರಾಗಿರಿ ಎಂದಿದ್ದಾರೆ ಮತ್ತೊಬ್ಬರು.
ರಿಚಾ ಶರ್ಮಾ ಸಾರ್ವಜನಿಕವಾಗಿ ಸಾಹಸ ಪ್ರದರ್ಶನ ನೀಡಿರುವ ಇನ್ನೊಂದು ವಿಡಿಯೋ
View this post on Instagram
ಇದು ಬೆಂಗಳೂರು ಮೆಟ್ರೋ ಎಂದು ಕೆಲವರು, ಇಲ್ಲ ಇದು ರಾಜಸ್ತಾನ ಮತ್ತು ಜೈಪುರ ಮೆಟ್ರೋ ಎಂದು ಇನ್ನೂ ಕೆಲವರು ವಾದ ಮಾಡಿದ್ದಾರೆ. ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದೆ, ನೀವು ತುಂಬಾ ಪ್ರೀತಿಯಿಂದ ಈ ಕೌಶಲದಲ್ಲಿ ತೊಡಗಿದ್ದೀರಿ, ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಕೆಲವರು ಹೇಳಿದ್ದಾರೆ. ಆದರೂ ಅನೇಕರು ಇಂಥದೆಲ್ಲವನ್ನೂ ನಿರ್ಬಂಧಿಸಬೇಕು ಎಂತಲೇ ವಾದಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:03 pm, Sat, 19 August 23