Viral Video: ಮದುವೆಯಲ್ಲಿ ವಿಡಿಯೋಗ್ರಾಫರ್​ ನೃತ್ಯ; ಕ್ಯಾ ಬಾತ್ ಹೈ ಎಂದ ನೆಟ್ಟಿಗರು

Videographer : ಡ್ಯಾನ್ಸ್ ಮಾಡುತ್ತಾ ವಿಡಿಯೋಗ್ರಫಿ ಮಾಡಿದ ವಿಡಿಯೋಗ್ರಾಫರ್​​ನಿಂದ ಗ್ಯಾರಂಟಿ ಈ ಮದುವೆಮನೆಯವರು ಹಣ ವಾಪಾಸು ಕೇಳುತ್ತಾರೆ ಎಂದು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು. ಈ ವಿಡಿಯೋಗ್ರಾಫರ್ ನಮ್ಮ ನಿರೀಕ್ಷೆಗಳನ್ನು ತಣಿಸಿದ್ದಾನೆ. ಇದೀಗ ಆಧಾರ್ ಕಾರ್ಡ್ ಹೊಂದಲು ಅರ್ಹನಾಗಿದ್ದಾರೆ ಎಂದೂ ಕಾಲೆಳೆದಿದ್ದಾರೆ ಕೆಲವರು. ನೀವು?

Viral Video: ಮದುವೆಯಲ್ಲಿ ವಿಡಿಯೋಗ್ರಾಫರ್​ ನೃತ್ಯ; ಕ್ಯಾ ಬಾತ್ ಹೈ ಎಂದ ನೆಟ್ಟಿಗರು
ಮದುವೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋಗ್ರಾಫರ್
Follow us
ಶ್ರೀದೇವಿ ಕಳಸದ
|

Updated on: Aug 19, 2023 | 11:36 AM

Dance : ಮದುವೆಯ ಎಲ್ಲಾ ಕ್ಷಣಗಳನ್ನು ಕ್ಯಾಮೆರಾದಲ್ಲಿ ದಾಖಲಿಸುವ ವಿಡಿಯೋಗ್ರಾಫರ್​ಗೆ ಅಪಾರ ತಾಳ್ಮೆ ಇರಬೇಕು. ಇಡೀ ದಿನ ಎಲ್ಲ ಸನ್ನಿವೇಶ ಸಂದರ್ಭಗಳನ್ನು ಒಪ್ಪವಾಗಿ ಕ್ಯಾಮೆರಾದಲ್ಲಿ (Camera) ಹಿಡಿದಿಡಬೇಕು. ​ಊಟ ತಿಂಡಿಗೂ ಪುರಸೊತ್ತು ಇರುವುದಿಲ್ಲ. ತನ್ನನ್ನೇ ತಾನು ಕಳೆದುಹೋಗುವಷ್ಟು ಕೆಲಸದಲ್ಲಿ ಮುಳುಗುವ ಅನಿವಾರ್ಯತೆ. ಇದು ವಿಡಿಯೋಗ್ರಾಫರ್ ಅಥವಾ ಫೋಟೋಗ್ರಾಫರ್​​ಗಳ ದಿನಚರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವಿಡಿಯೋಗ್ರಾಫರ್​ ಒಬ್ಬ ಮದುವೆಯಲ್ಲಿ ಅತಿಥಿಗಳೊಂದಿಗೆ ನರ್ತಿಸಿದ್ದಾನೆ. ನೆಟ್ಟಿಗರು ಅಚ್ಚರಿಯಿಂದ ಈತನ ಉತ್ಸಾಹವನ್ನು ಕೊಂಡಾಡುತ್ತಿದ್ದಾರೆ ಮತ್ತು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್​ ಎರಚಿದ ಮಹಿಳೆಯ ಬಂಧನ

X (Twitter) ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಪಂಜಾಬಿ ಟಚ್ ಎಂಬ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಆ. 14ರಂದು ಪೋಸ್ಟ್ ಮಾಡಿದ ನಂತರ ಈತನಕ 1.6 ಲಕ್ಷ ಜನರು ನೋಡಿದ್ದಾರೆ. ಸುಮಾರು 2,600 ಜನರು ಲೈಕ್ ಮಾಡಿದ್ದಾರೆ. 390 ಜನರು ರೀಪೋಸ್ಟ್ ಮಾಡಿದ್ದಾರೆ. ನೂರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ವಿಡಿಯೋಗ್ರಾಫರ್​ ಡ್ಯಾನ್ಸ್ ಮಾಡಿದ ವಿಡಿಯೋ ಇಲ್ಲಿದೆ

ವಿಡಿಯೋಗ್ರಾಫರ್ ನಮ್ಮ ಆಕಾಂಕ್ಷೆಗಳನ್ನು ಈಡೇರಿಸಿದ್ದಾರೆ. ಹಾಗಾಗಿ ಅವರು ಆಧಾರ್ ಕಾರ್ಡ್​ ಹೊಂದಲು ಅರ್ಹತೆ ಪಡೆದಿದ್ದಾರೆ ಎಂದಿದ್ದಾರೆ ಒಬ್ಬರು. ಹೀಗೆ ಡ್ಯಾನ್ಸ್ ಮಾಡಿಕೊಂಡು ಮಾಡಿದ ವಿಡಿಯೋ ಹೇಗೆ ಬಂದಿರಬಹುದು ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ ಇನ್ನೊಬ್ಬರು. ಈ ವಿಡಿಯೋಗ್ರಾಫರ್​ನನ್ನು ಆಮದು ಮಾಡಿಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದ್ಧಾರೆ ಮತ್ತೊಬ್ಬರು. ಇವನನ್ನು ಮದುವೆಗೆ ಕರೆಸಿದವರು ಗ್ಯಾರಂಟಿ ಹಣವನ್ನು ಮರಳಿಸುವಂತೆ ಕೇಳುತ್ತಾರೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ‘ನನ್ನದು ವಿಶೇಷ ಕಣ್ಣು ಗೊತ್ತಾ?’ ದಿಟ್ಟ ಪುಟ್ಟಿಯ ದೃಷ್ಟಿಪ್ರಯಾಣ

ಇದು ಮೆರವಣಿಗೆಯಲ್ಲಿ ಮಾಡುವ ಡ್ಯಾನ್ಸ್​ ಎಂದಿದ್ದಾರೆ ಒಬ್ಬರು. ವಿದೇಶಿಯ ವಿಡಿಯೋಗ್ರಾಫರ್ ಆಗಿದ್ದಕ್ಕೆ ಇವನು ಹೀಗೆ ಕುಣಿದಿದ್ದಾನೆ ಎಂದಿದ್ದಾರೆ ಇನ್ನೊಬ್ಬರು. ರುಮಾಲನ್ನು ಸುತ್ತಿಕೊಳ್ಳುವುದನ್ನು ಈತ ಮರೆತಿದ್ದಾನೆ ಎಂದಿದ್ದಾರೆ ಮತ್ತೊಬ್ಬರು. ಇದು ಅವನ ಜಿಮ್ ರುಟೀನ್ ಆಗಿರಬೇಕು, ಅದಕ್ಕೇ ಇಷ್ಟು ಸಲೀಸಾಗಿ ನರ್ತಿಸುತ್ತಿದ್ದಾನೆ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ